ಆ್ಯಪ್ನಗರ

ವ್ಯಕ್ತಿಯನ್ನು ಬೆನ್ನಟ್ಟಿಕೊಂಡು ಬರುವ ಸಿಂಹಿಣಿ...! : ಕೊನೆಯಲ್ಲಿದೆ ದೊಡ್ಡ ಟ್ವಿಸ್ಟ್‌

ಇದೊಂದು ಅದ್ಭುತ ವಿಡಿಯೋ. ಈ ವಿಡಿಯೋ ನೋಡುವಾಗಲೇ ಮನಸ್ಸಿಗೆ ಹಿತವಾಗುತ್ತದೆ. ಪ್ರೀತಿಗೆ ಕರಗದ ಜೀವವೇ ಇಲ್ಲ ಎಂಬುದಕ್ಕೆ ಸಾಕ್ಷಿ ಇದು.

Vijaya Karnataka Web 27 Nov 2020, 9:59 am
ಪ್ರೀತಿ, ಸ್ನೇಹ ಎಂಬುದು ಅದ್ಭುತ ಶಕ್ತಿ. ಪ್ರೀತಿಗೆ ಕರಗದ ಜೀವ, ಜೀವಿಗಳೇ ಈ ಲೋಕದಲ್ಲಿ ಇಲ್ಲ. ಕ್ರೂರಮೃಗಗಳನ್ನೂ ಪ್ರೀತಿಯಿಂದ ಮನಗೆಲ್ಲಬಹುದು... ಅದೇ ಪ್ರೀತಿ, ಗೆಳೆತನದ ತಾಕತ್ತು. ಇಂತಹ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತದೆ. ಹುಲಿ ಸಿಂಹಗಳೂ ಅತ್ಯಂತ ಮುಗ್ಧತೆಯಿಂದ ಮನುಷ್ಯರೊಂದಿಗೆ ಬೆರೆಯುವ ಸಾಕಷ್ಟು ವಿಡಿಯೋಗಳಿವೆ. ಇಂತಹ ದೃಶ್ಯಗಳು ಅರೆಕ್ಷಣದಲ್ಲಿ ನಮ್ಮೆಲ್ಲರ ಹೃದಯಕ್ಕೆ ಲಗ್ಗೆ ಇಡುತ್ತವೆ. ಇದು ಕೂಡಾ ಅಂತಹದ್ದೇ ಒಂದು ಅದ್ಭುತ ವಿಡಿಯೋ. ಸಿಂಹಿಣಿ ಮತ್ತು ವ್ಯಕ್ತಿಯೊಬ್ಬರ ನಡುವಣ ಸುಂದರ ಗೆಳೆತನದ ದೃಶ್ಯವಿದು. ಈ ದೃಶ್ಯವನ್ನು ನೋಡುವಾಗ ಮನಸ್ಸು ಹಿತಗೊಳ್ಳುತ್ತದೆ.
Vijaya Karnataka Web Image by Frauke Feind from Pixabay
| Representative image | Image by Frauke Feind from Pixabay


Also Read : ಅದ್ಭುತ ತ್ರಿಡಿ ಕಲೆ...! : ತಕ್ಷಣಕ್ಕೆ ನೋಡಿದಾಗ ಇದು ಚಿತ್ರ ಎಂದೆನಿಸುವುದೇ ಇಲ್ಲ...!

ಕಾಡಿನ ಕ್ರೂರ ಪ್ರಾಣಿಗಳೂ ಮನುಷ್ಯರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುತ್ತವೆ ಎಂಬುದಕ್ಕೆ ಸಾಕಷ್ಟು ವಿಡಿಯೋಗಳು ಸಾಕ್ಷಿಯಾಗಿವೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ತಕ್ಷಣಕ್ಕೆ ನೋಡಿದಾಗ ವ್ಯಕ್ತಿಯೊಬ್ಬರನ್ನು ಸಿಂಹಿಣಿ ಬೆನ್ನಟ್ಟುತ್ತಿದೆ ಎಂದು ಕಂಡರೂ ಕೊನೆಯಲ್ಲಿ ಇವರಿಬ್ಬರ ಗೆಳೆತನದ ಸುಂದರ ಕ್ಷಣಗಳು ಕಾಣಸಿಗುತ್ತವೆ.


Also Read : ಶ್ವಾನಗಳ ಸ್ಕಿಪ್ಪಿಂಗ್ ನೋಡಿದ್ದೀರಾ...? : ಮನಸೆಳೆಯುವ ಅದ್ಭುತ ದೃಶ್ಯವಿದು

@BestVideosBest ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆದ ವಿಡಿಯೋ ಇದು. ವ್ಯಕ್ತಿಯೊಬ್ಬರು ಸಿಂಹಿಣಿಯನ್ನು ಕಂಡು ಭಯದಲ್ಲಿ ಓಡಿ ಬರುವ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ತಕ್ಷಣಕ್ಕೆ ಕಂಡಾಗ ಸಿಂಹಿಣಿ ಈ ವ್ಯಕ್ತಿಯನ್ನು ಬೆನ್ನಟ್ಟಿಕೊಂಡು ಬರುತ್ತಿದೆ ಎಂದೆನಿಸುತ್ತದೆ. ಇದನ್ನು ಕಂಡಾಗ ಒಂದು ಕ್ಷಣ ಎದೆ ನಡುಗಿದಂತಾಗುತ್ತದೆ. ಆದರೆ, ಕೊನೆಯಲ್ಲಿ ಈ ಸಿಂಹಿಣಿ ಇದೇ ವ್ಯಕ್ತಿಯೊಂದಿಗೆ ಆಟಕ್ಕೆ ನಿಲ್ಲುತ್ತದೆ. ಈ ದೃಶ್ಯ ನೋಡುವಾಗಲೇ ಖುಷಿಯಾಗುತ್ತದೆ.

Also Read : ರೆಸ್ಟೋರೆಂಟ್ ಟೇಬಲ್ ತುಂಬಾ ಪಾಂಡಾಗಳು...! : ಇದು ಖುಷಿ ಅಲ್ಲ, ಪ್ರತಿಭಟನೆ...!

ಈ ದೃಶ್ಯ ಎಲ್ಲಿನದ್ದು, ಯಾವಾಗ ಸೆರೆಯಾಗಿದ್ದು ಎಂಬುದು ಗೊತ್ತಾಗಿಲ್ಲ. ಆದರೆ, ಈ ದೃಶ್ಯವನ್ನು ನೋಡಿದಾಗ ಮನಸ್ಸು ಖಂಡಿತಾ ಖುಷಿಯಾಗುತ್ತದೆ. ಇದೇ ಕಾರಣಕ್ಕೆ ಈ ವಿಡಿಯೋ ಸಾವಿರಾರು ಜನರನ್ನು ಸೆಳೆದಿದೆ. ಹಲವರು ಈ ವಿಡಿಯೋ ಕಂಡು ಖುಷಿಪಟ್ಟು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಈ ಸುಂದರ ಗೆಳೆತನವನ್ನು ಕಂಡಾಗ `ಆತನೆಷ್ಟು ಅದೃಷ್ಟಶಾಲಿ' ಎಂದೂ ಮನಸ್ಸಿಗೆ ಅನಿಸಿದರೂ ಅಚ್ಚರಿ ಇಲ್ಲ. ಅಷ್ಟು ಅದ್ಭುತವಾಗಿದೆ ಈ ಸೊಬಗಿನ ದೃಶ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ