ಆ್ಯಪ್ನಗರ

ಪತಿಗೆ ವೃದ್ಧೆಯ ಸಿಹಿಮುತ್ತು : ಪ್ರೀತಿಗೆ ಕರಗಿ ನೀರಾದ ವೃದ್ಧ: ನೆಟ್ಟಿಗರ ಮನಗೆದ್ದ ದಂಪತಿ

ವೃದ್ಧ ದಂಪತಿಯ ಪ್ರೀತಿಗೆ ಸಾಕ್ಷಿಯಾದ ಅಪೂರ್ವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಟಿಸಿದೆ. ಸಹಜವಾಗಿಯೇ ಈ ವಿಡಿಯೋ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಎಲ್ಲರೂ ಈ ಸೊಬಗಿನ ದೃಶ್ಯಕ್ಕೆ ಮನಸೋತಿದ್ದಾರೆ.

Vijaya Karnataka Web 14 Sep 2021, 4:08 pm

ಹೈಲೈಟ್ಸ್‌:

  • ಪ್ರೀತಿಯ ಪತಿಗೆ ವೃದ್ಧೆಯ ಸಿಹಿ ಮುತ್ತು
  • ಮಧುರ ಪ್ರೀತಿಗೆ ಸಾಕ್ಷಿ ಈ ಜೋಡಿಯ ದಾಂಪತ್ಯ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದೃಶ್ಯ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Pure Love
| Screengrab from video | Courtesy : instagram/kethamma__avva/
ಪ್ರೀತಿ ಎಂಬುದು ಬಹುದೊಡ್ಡ ಆಸ್ತಿ. ಪ್ರೀತಿಸುವವರು ಪಕ್ಕದಲ್ಲಿ ಇದ್ದರೆ ಯಾವ ನೋವೂ ಹತ್ತಿರಕ್ಕೆ ಸುಳಿಯದು, ಯಾವ ಕಷ್ಟವೂ ಕಷ್ಟವೆನಿಸದು. ಸವಾಲುಗಳನ್ನು ಮೆಟ್ಟಿ ನಿಂತು ಮುಂದೆ ಸಾಗುವ ಹುಮ್ಮಸ್ಸು ಕೂಡಾ ಕಡಿಮೆಯಾಗದು. ಪ್ರೀತಿ ತುಂಬಿದ ಒಂದೊಂದು ಮಾತೇ ಬದುಕಿಗೆ ಧೈರ್ಯ, ಚೈತನ್ಯ ತರುತ್ತದೆ. ಪ್ರೀತಿ ಎಂಬುದು ಬಣ್ಣಿಸಲು ಸಾಧ್ಯವೇ ಇಲ್ಲದೆ ಅದ್ಭುತ ಅನುಭವ...
ಮಧುರ ದಾಂಪತ್ಯದ ತಳಹದಿಯೇ ಪ್ರೀತಿ... ಪ್ರೀತಿ, ನಂಬಿಕೆಯಿಂದ ದಂಪತಿಯ ಬದುಕಿನ ಬಂಡಿ ಮುಂದೆ ಸಾಗುತ್ತದೆ. ಇದೇ ನಂಬಿಕೆ, ಬಲವಾದ ಪ್ರೀತಿ ಬದುಕಿನ ಎಲ್ಲಾ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಛಲ ತರುತ್ತದೆ. ಮಾದರಿ ದಾಂಪತ್ಯದ ಮೂಲಕ ಗಮನ ಸೆಳೆದ ಸಾಕಷ್ಟು ಜೋಡಿಯನ್ನು ನೀವು ನೋಡಿರಬಹುದು. ಇದೀಗ ಈ ಜೋಡಿಗಳ ಸಾಲಿಗೆ ಈಗ ಇನ್ನೊಂದು ದಂಪತಿ ಸೇರ್ಪಡೆಯಾಗಿದ್ದಾರೆ. ವೃದ್ಧೆಯೊಬ್ಬರು ತನ್ನ ಪತಿಗೆ ಸಿಹಿಮುತ್ತು ನೀಡಿ ಪ್ರೀತಿ ತೋರಿಸುವ ದೃಶ್ಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಸುನೀಗಿದ ಕರುಳಬಳ್ಳಿಯನ್ನು ಹೊತ್ತು ನಡೆಯುವ ತಾಯಿ ಆನೆ : ಕರುಳು ಹಿಂಡುವ ದೃಶ್ಯವಿದು
7 ಸೆಕೆಂಡುಗಳ ವಿಡಿಯೋ ಕ್ಲಿಪ್ ಇದು. ವೃದ್ಧ ಜೋಡಿಯೊಂದು ಅಕ್ಕಪಕ್ಕದಲ್ಲಿ ಕುಳಿತಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಇದಾದ ಅರೆಕ್ಷಣದಲ್ಲಿ ವೃದ್ಧೆ ತನ್ನ ಪ್ರೀತಿಯ ಪತಿಗೆ ಸಿಹಿ ಮುತ್ತು ಕೊಟ್ಟು ಆನಂದದಿಂದ ನಗುತ್ತಾರೆ. ಪತ್ನಿಯ ಪ್ರೀತಿಗೆ ಕರಗಿ ನೀರಾದ ವೃದ್ಧ ಕೂಡಾ ನಗುತ್ತಿರುವ ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. ವೃದ್ಧ ಜೋಡಿಯ ಈ ಪ್ರೀತಿ ಕ್ಷಣ ಸಹಜವಾಗಿಯೇ ಇಷ್ಟವಾಗುತ್ತದೆ. ಆ ಮುಗ್ಧ ನಗು ಕೂಡಾ ಈ ದೃಶ್ಯ ಹೃದಯ ಗೆಲ್ಲಲು ಇನ್ನೊಂದು ಕಾರಣ.

ಯಾರಿಗೂ ಗೊತ್ತಾಗದಂತೆ ತನ್ನಿಷ್ಟದ ತಿಂಡಿ ತಿನ್ನುವ ಪುಟಾಣಿ: ಅಪ್ಪನನ್ನು ಕಂಡು ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
View this post on Instagram A post shared by @kethamma__avva

ರಸ್ತೆಯ ಪಕ್ಕದಲ್ಲಿ ವೃದ್ಧರ `ಘನಘೋರ' ಫೈಟಿಂಗ್: ನೆನಪಾಗಬಹುದು ನಿಮಗೆ ಬಾಲ್ಯದ ದಿನಗಳು
kethamma__avva ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು. ಸಹಜವಾಗಿಯೇ ಈ ವಿಡಿಯೋ ಎಲ್ಲರಿಗೂ ಇಷ್ಟವಾಗಿದೆ. ಜತೆಗೆ, ಈ ದೃಶ್ಯವನ್ನು ನೋಡಿದ ಎಲ್ಲರೂ ಈ ದಂಪತಿಯ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಿಜವಾದ ಪ್ರೀತಿಗೆ ವಯಸ್ಸಾಗುವುದಿಲ್ಲ ಎಂದು ಬಣ್ಣಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ