ಆ್ಯಪ್ನಗರ

ಹಾರಲಾರದ ಪಾರಿವಾಳಕ್ಕೆ ನಡೆಯಲಾಗದ ಶ್ವಾನವೇ ಸ್ನೇಹಿತ : ಇದು ಮನಸು ತಣಿಸುವ ನೋಟ...

ನಾ ನಿನಗೆ... ನೀನನಗೆ... ಹೀಗೆ ಸ್ನೇಹ ಬಾಳ್ವೆಯಿಂದಿದೆ ಒಂದು ಪಾರಿವಾಳ ಮತ್ತು ಮುದ್ದು ಶ್ವಾನದ ಮರಿ. ಇವುಗಳ ಸ್ನೇಹ ನಿಜಕ್ಕೂ ನಮ್ಮ ಕಣ್ಣನ್ನು ಹನಿಗೂಡಿಸುತ್ತದೆ...

Vijaya Karnataka Web 17 Feb 2020, 8:11 am
ಇದೊಂದು ಅಪೂರ್ವ ಸ್ನೇಹದ ಕತೆ. ಈ ಶ್ವಾನದ ಮರಿ ಮತ್ತು ಪಾರಿವಾಳದ ಸ್ನೇಹದ ಕತೆ ಕೇಳಿದರೆ ನಿಜಕ್ಕೂ ಮನಸ್ಸು ತಣಿಯುತ್ತದೆ...
Vijaya Karnataka Web cute photos of priceless bonding between puppy and pigeon is going viral
ಹಾರಲಾರದ ಪಾರಿವಾಳಕ್ಕೆ ನಡೆಯಲಾಗದ ಶ್ವಾನವೇ ಸ್ನೇಹಿತ : ಇದು ಮನಸು ತಣಿಸುವ ನೋಟ...


ಅಪೂರ್ವ ಸ್ನೇಹ...

| Image Credit : The Mia Foundation - Love For Mia/Facebook


ಸ್ನೇಹ ಎಂಬುದು ಮಧುರ ಬಾಂಧವ್ಯ... ಸ್ನೇಹವಿಲ್ಲದೆ ಜಗತ್ತನ್ನೂ ಊಹಿಸಲೇ ಸಾಧ್ಯವಿಲ್ಲ... ಸ್ನೇಹ ಸಂಬಂಧಕ್ಕೆ ಇರುವಂತಹ ಮಹತ್ವ ಅಂತಹದ್ದು. ಖುಷಿಯಲ್ಲಿ ಜೊತೆಗಿರುವವರು, ಕಷ್ಟಕ್ಕೆ ಹೆಗಲು ಕೊಡುವವರು ನಿಜವಾದ ಸ್ನೇಹಿತರು... ಇದೇ ಕಾರಣಕ್ಕೆ ಸ್ನೇಹಕ್ಕೆ ಶರಣಾಗದವರು ಈ ಭೂಮಂಡಲದಲ್ಲಿ ಯಾರೂ ಇಲ್ಲ. ಆದರೆ, ಈ ಸ್ನೇಹ, ಪ್ರೀತಿ ಬರೀ ಮನುಷ್ಯರಲ್ಲಿ ಮಾತ್ರ ಕಾಣಬಹುದು ಎಂದು ಊಹಿಸಿಕೊಂಡರೆ ಖಂಡಿತಾ ತಪ್ಪಾಗುತ್ತದೆ. ಸ್ನೇಹದ ವಿಚಾರದಲ್ಲಿ ಪ್ರಾಣಿ, ಪಕ್ಷಿಗಳೂ ಮನುಷ್ಯರಷ್ಟೇ ಸಮಾನವಾಗಿದೆ. ಎರಡು ವಿರುದ್ಧ ಧ್ರುವಗಳನ್ನೂ ಸೇರಿಸುವ ಶಕ್ತಿಯೂ ಅಪೂರ್ವ ಸ್ನೇಹಕ್ಕಿದೆ. ಇಂತಹ ಅನೇಕ ಸಾಕ್ಷಿಗಳಲ್ಲಿ ಈ ವಿಡಿಯೋ ಕೂಡಾ ಒಂದು...


Also Read : ಮಗ ಮೃತಪಟ್ಟು ಕೆಲ ವರ್ಷದ ಬಳಿಕ ಪುತ್ರನ ಹೃದಯ ಬಡಿತ ಕೇಳಿದ ತಂದೆ...! : ಇದು ಕಣ್ಣೀರು ತರಿಸುವ ವಿಡಿಯೋ...!

ನಾ ನಿನಗೆ... ನೀ ನನಗೆ...

| Image Credit : The Mia Foundation - Love For Mia/Facebook


ನಾ ನಿನಗೆ... ನೀ ನನಗೆ... ಹೀಗೆ ಸ್ನೇಹ ಬಾಳ್ವೆಯಿಂದಿದೆ ಒಂದು ಪಾರಿವಾಳ ಮತ್ತು ಮುದ್ದು ಶ್ವಾನದ ಮರಿ. ಇವುಗಳ ಸ್ನೇಹ ನಿಜಕ್ಕೂ ನಮ್ಮ ಕಣ್ಣನ್ನು ಹನಿಗೂಡಿಸುತ್ತದೆ... ಯಾಕೆಂದರೆ, ಈ ಪಾರಿವಾಳಕ್ಕೆ ಹಾರಲು ಆಗುವುದಿಲ್ಲ... ಶ್ವಾನದ ಮರಿಗೆ ನಡೆಯಲು ಆಗುವುದಿಲ್ಲ. ಹೀಗೆ, ಸದಾ ಕಾಲ ಜೊತೆಯಾಗಿಯೇ ಇರುವ ಈ ಎರಡು ಜೀವಗಳು ಈಗ ಬಿಡಿಸಲಾರದಂತಹ ಸ್ನೇಹ ಬಂಧನದಲ್ಲಿ ತೇಲಾಡುತ್ತಿವೆ. ಅರೆ ಕ್ಷಣವೂ ಒಂದನ್ನೊಂದು ಬಿಟ್ಟಿರಲಾರದಷ್ಟು ಮಟ್ಟಿಗೆ ಇವುಗಳ ನಡುವೆ ಸ್ನೇಹ ಸಂಬಂಧ ಗಟ್ಟಿಯಾಗಿದೆ.


Also Read : ಹಾಲಿವುಡ್ ಇತಿಹಾಸದಲ್ಲೇ 73 ವರ್ಷದಿಂದ ನಿಗೂಢವಾಗಿಯೇ ಉಳಿದ ನಟಿಯೊಬ್ಬಳ ಕೊಲೆ ಕೇಸ್...!

ಎನ್‌ಜಿಓ ಆಶ್ರಯದಲ್ಲಿ ಖುಷಿಯ ಜೀವನ...

| Image Credit : The Mia Foundation - Love For Mia/Facebook


ನ್ಯೂಯಾರ್ಕ್ ಮೂಲದ ಮಿಯಾ ಫೌಂಡೇಷನ್‌ನಲ್ಲಿ ಎರಡು ತಿಂಗಳ ಈ ಶ್ವಾನದ ಮರಿ ಮತ್ತು ಪಾರಿವಾಳ ಇವೆ. ದೇಶದಾದ್ಯಂತ ಈ ರೀತಿಯ ಹುಟ್ಟಿನಲ್ಲೇ ದೈಹಿಕ ಸಮಸ್ಯೆಯಿಂದ ಬಳಲುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಈ ಫೌಂಡೇಷನ್ನಿನಲ್ಲಿ ಆಶ್ರಯ ನೀಡಲಾಗುತ್ತದೆ. ಹೀಗೆ ಸಮಾನ ದುಃಖಿಗಳಾಗಿರುವ ಈ ಎರಡು ಜೀವಗಳು ಇಲ್ಲಿ ತಮ್ಮ ನೋವನ್ನು ಮರೆತು ಖುಷಿಯಿಂದಲೇ ಜೀವನ ನಡೆಸುತ್ತಿವೆ. ಇಂತಹ ಅಪೂರ್ವ ಸ್ನೇಹದ ವಿಡಿಯೋ, ಫೋಟೋಗಳನ್ನು ಈ ಪ್ರಾಣಿ ರಕ್ಷಣಾ ಸಂಸ್ಥೆ ತನ್ನ ಸಾಮಾಜಿಕ ಮಾಧ್ಯಮ ಅಕೌಂಟಿನಲ್ಲಿ ಹಂಚಿಕೊಂಡಿದೆ. ಸದ್ಯ ಈ ಫೋಟೋ, ವಿಡಿಯೋ ಸಖತ್ ಆಗಿಯೇ ವೈರಲ್ ಆಗುತ್ತಿದೆ. ಈ ಸ್ನೇಹವನ್ನು ಕಂಡು ನೆಟ್ಟಿಗರು ಕೂಡಾ ಕೊಂಡಾಡಿದ್ದಾರೆ.


Also Read : ಪಾಂಡವರು ಸ್ವರ್ಗಕ್ಕೆ ಮೆಟ್ಟಿಲು ನಿರ್ಮಿಸಿದ್ದು ಇದೇ ದೇಗುಲದಲ್ಲಂತೆ...!

ಮನಸ್ಸು ತಣಿಸುವ ವಿಡಿಯೋ

| Image Credit : The Mia Foundation - Love For Mia/Facebook


ಈ ಅಪೂರ್ವ ಸ್ನೇಹ ನಿಜಕ್ಕೂ ಮನಸ್ಸು ತಣಿಸುತ್ತದೆ. ಇಂತಹ ನಿಷ್ಕಲ್ಮಷ ಸ್ನೇಹ ಎಂತಹವರನ್ನೂ ಸೆಳೆಯದೇ ಇರದು. ಬದುಕೇ ಹಾಗೆ... ಸ್ನೇಹಕ್ಕೆ ಇಲ್ಲಿರುವ ಮಹತ್ವ ಅತಿ ದೊಡ್ಡದು. ಒಬ್ಬರಿಗೊಬ್ಬರು ಜೊತೆಯಾಗಿದ್ದರೆ, ಕಷ್ಟಕ್ಕೆ ಹೆಗಲು ಕೊಟ್ಟು ಮುನ್ನಡೆದರೆ ಜೀವನವೇ ಜೇನುಗೂಡು. ಕಷ್ಟದ ಸಂದರ್ಭದಲ್ಲಿ ಒಂದು ಸಾಂತ್ವನದ ನುಡಿ, ನಾನಿದ್ದೇನೆಂಬ ಅಭಯ ಸಾವಿರ ಆನೆಯ ಬಲವನ್ನು ತಂದುಕೊಡುತ್ತದೆ. ಕೆಲವೊಮ್ಮೆ ಇಂತಹ ಸ್ನೇಹವನ್ನು ನಾವು ಪ್ರಾಣಿ, ಪಕ್ಷಿಗಳಿಂದಲೂ ಕಲಿಯಬೇಕಾಗುತ್ತದೆ. ಈ ಫೋಟೋ, ವಿಡಿಯೋಗೂ ಜನರಲ್ಲಿ ಸ್ನೇಹ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವ ತಾಕತ್ತು ಹೊಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ