ಆ್ಯಪ್ನಗರ

ಅಪ್ಪನ ಫೇಸ್‌ಮಾಸ್ಕ್‌ ಎಳೆದು ಖುಷಿಪಡುವ ಮುದ್ದು ಕಂದ : ಈ ನಗುವಿನಲ್ಲಿದೆ ಅದೇನೋ ಶಕ್ತಿ

ಇದೊಂದು ಅಪೂರ್ವ ದೃಶ್ಯ. ಈ ಸೊಬಗಿನ ದೃಶ್ಯಕ್ಕೆ ಎಂತಹವರೂ ಮಾರುಹೋಗಲೇ ಬೇಕು... ಅಷ್ಟು ಅದ್ಭುತವಾಗಿದೆ ಈ ಖುಷಿ...

Vijaya Karnataka Web 27 Oct 2020, 1:55 pm
ಮುದ್ದು ಕಂದಮ್ಮಗಳು ಪಕ್ಕದಲ್ಲಿ ಇದ್ದರೆ ಜಗತ್ತೇ ನಮ್ಮ ಕೈಯಲ್ಲಿ ಇದ್ದಷ್ಟು ಖುಷಿ... ಪುಟಾಣಿಗಳ ನಗು, ಪುಟಾಣಿಗಳ ನೋಟ ಎಲ್ಲವೂ ಅದ್ಭುತ. ಹಾಲುಗಲ್ಲದ ಕಂದ ಮನೆಯಲ್ಲಿದ್ದರೆ ಆ ಸಡಗರವೇ ಬೇರೆ. ಕಂದನ ಆ ಕಿಲಕಿಲ ನಗು, ಅಳು, ಪುಟ್ಟ ಪುಟ್ಟ ಹೆಜ್ಜೆ ಇಡೀ ಮನೆಯಲ್ಲಿ ನಂದನವನದ ಖುಷಿ ತರುತ್ತವೆ. ಎಲ್ಲಾ ನೋವನ್ನು ಕ್ಷಣ ಮಾತ್ರದಲ್ಲಿ ಮರೆಸುವ ತಾಕತ್ತು ಪುಟ್ಟ ಕಂದನ ಅದ್ಭುತ ನಗುವಿಗಿದೆ. ಹೀಗಾಗಿ, ಮಕ್ಕಳ ಜೊತೆ ಕಾಲ ಕಳೆಯಲು ಎಲ್ಲರೂ ಇಷ್ಟಪಡುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಆನಂದಿಸುವ ಕ್ಷಣವೇ ಅದ್ಭುತ, ಅಪೂರ್ವ.
Vijaya Karnataka Web baby
| Screengrab from video | Courtesy : @buitengebieden_/Twitter


ಇಂತಹ ಅದ್ಭುತ ಕ್ಷಣದ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ಕ್ಷಣ ಮಾತ್ರದಲ್ಲಿ ನಮ್ಮ ಹೃದಯದಲ್ಲಿ ಆನಂದವನ್ನು ಉದ್ದೀಪನಗೊಳಿಸುತ್ತದೆ. ಇದು ಕೂಡಾ ಅಂತಹದ್ದೇ ಒಂದು ಸುಂದರ ದೃಶ್ಯ. ಈ ದೃಶ್ಯ ಕಂಡಾಗ ಒಂದು ಕ್ಷಣ ನಮ್ಮನ್ನು ನಾವೇ ಮೈಮರೆಯುತ್ತೇವೆ. ಅಷ್ಟು ಅದ್ಭುತವಾಗಿದೆ ಈ ಸೊಬಗಿನ ನೋಟ.

Also Read : ಕೊತ ಕೊತ ಕುದಿಯುತ್ತಿರುವ ಎಣ್ಣೆಗೆ ಕೈ ಹಾಕುವ ಮಹಿಳೆ! : ವೈರಲ್ ವಿಡಿಯೋ ಕಂಡು ನೆಟ್ಟಿಗರು ಶಾಕ್

ಅಮೇರಿಕಾದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್‌ ಚಾಪ್ಮನ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿರುವ ವಿಡಿಯೋ ಇದು. ಈ ಕ್ಲಿಪ್‌ನಲ್ಲಿ ಮುದ್ದು ಕಂದ ತನ್ನ ತಂದೆಯ ಫೇಸ್‌ಮಾಸ್ಕ್‌ ಎಳೆದು ಮತ್ತೆ ಬಿಟ್ಟು ಖುಷಿಪಡುವ ದೃಶ್ಯವಿದೆ. ತಂದೆಯ ಫೇಸ್‌ಮಾಸ್ಕ್‌ನ್ನು ಎಳೆಯುವ ಪುಟಾಣಿ ಅಪ್ಪನನ್ನೇ ದಿಟ್ಟಿಸುತ್ತಾ ಜೋರಾಗಿ ನಗುವ ಆ ದೃಶ್ಯವನ್ನು ಎಷ್ಟು ಸಲ ನೋಡಿದರೂ ಖಂಡಿತಾ ಮನಸ್ಸು ತಣಿಯದು.


Also Read : ಹ್ಯಾಲೋವೀನ್‌ಗೆ ಸೂರ್ಯನ ಸಾಥ್! ನಾಸಾ ಹಂಚಿಕೊಂಡ ನೇಸರನ ಅಪೂರ್ವ ದೃಶ್ಯ ವೈರಲ್!

ನಿರೀಕ್ಷೆಯಂತೆಯೇ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಅದ್ಭುತ ಸೊಬಗಿಗೆ ಮಾರುಹೋಗಿದ್ದಾರೆ. ಈ ದೃಶ್ಯವನ್ನು ಕಂಡ ಎಲ್ಲರೂ `ಅದ್ಭುತ', `ಸುಂದರ' ಎಂದರೆಲ್ಲಾ ಬಣ್ಣಿಸಿದ್ದಾರೆ.


Also Read : ಡ್ರಮ್ಸ್‌ ಬಾರಿಸುವ ಐದು ವರ್ಷದ ಬಾಲೆ...! : ಪುಟಾಣಿಯ ಅದ್ಭುತ ಪ್ರತಿಭೆಗೆ ನೆಟ್ಟಿಗರು ಫಿದಾ

ಇದು ಮತ್ತೆ ಮತ್ತೆ ನೋಡಬೇಕೆನಿಸುವ ವಿಡಿಯೋ. ನಿಜಕ್ಕೂ ಇಂತಹ ದೃಶ್ಯಗಳು ಮನಸ್ಸಿಗೆ ಬಹಳ ನೆಮ್ಮದಿ ನೀಡುತ್ತವೆ. ಬಹುಶಃ ಕಂದನ ಈ ಖುಷಿಯ ನೋಟ ನಿಮ್ಮ ಮೊಗದಲ್ಲೂ ನಗುವರಳಿಸಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ