ಉಸಿರು ನೀಡಿದವರು ಅಮ್ಮ... ಬದುಕಲು ಕಲಿಸಿಕೊಟ್ಟವರು ಅಮ್ಮ... ಮೊದಲ ಗುರು ಅಮ್ಮ... ಅಮ್ಮ ಎಂದರೆ ಪವಿತ್ರ, ಅಮ್ಮನ ಮಡಿಲೇ ಸ್ವರ್ಗ... ಪ್ರತಿಕ್ಷಣವೂ ಸ್ವತಃ ತನ್ನ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚು ತನ್ನ ಕರುಳಬಳ್ಳಿಗಳ ಬಗ್ಗೆಯೇ ಯೋಚನೆ ಮಾಡುವವರು ಅಮ್ಮ ಎಂದರೆ ಅದು ಅತಿಶಯೋಕ್ತಿಯಲ್ಲ. ಅದಕ್ಕೆ ಅಮ್ಮನ ಪ್ರೀತಿ ಎಂಬುದು ಅಮೃತಕ್ಕೆ ಸಮಾನ ಎನ್ನುವುದು... ತಾಯ್ತನ ಎನ್ನುವುದು ಅದ್ಭುತ ಕ್ಷಣ. ಜೀವ ನೀಡುವ ಅಮ್ಮ ಜೀವನಕ್ಕೂ ದಾರಿಯಾಗುತ್ತಾರೆ. ತಾನೆಷ್ಟು ಕಷ್ಟಪಟ್ಟರೂ ಮಕ್ಕಳು ಕಷ್ಟಪಡಬಾರದು ಎಂಬ ಹಂಬಲ ತಾಯಿಯದ್ದು. ತನ್ನ ಮಕ್ಕಳಿಗೆ ಸಣ್ಣ ಕಷ್ಟ ಎದುರಾದರೂ ಅದರ ವಿರುದ್ಧ ಬಂದು ನಿಲ್ಲುವವರು ತಾಯಿ. ಹಾಗಂತ, ಬರೀ ಮನುಷ್ಯರಲ್ಲಿ ಮಾತ್ರ ಈ ರೀತಿಯ ಮಮತೆ ಕಾಣುವುದಲ್ಲ. ಪ್ರಾಣಿಗಳಲ್ಲೂ ನಾವು ಇದೇ ತೆರನಾದ ಪ್ರೀತಿಯನ್ನು ಕಾಣಬಹುದು. ಅದಕ್ಕೆ ಸಾಕ್ಷಿ ಈ ಮುದ್ದು ಶ್ವಾನ.
ಈ ದೃಶ್ಯವನ್ನು ಕಂಡಾಗ ನಿಜಕ್ಕೂ ಹಲವರು ಭಾವುಕರಾಗಿದ್ದಾರೆ. ತಾಯಿ ಮಮತೆಗೆ ಸಾಕ್ಷಿಯಾದ ಈ ದೃಶ್ಯ ಎಲ್ಲರ ಕಣ್ಣುಗಳು ಹನಿಗೂಡುವಂತೆ ಮಾಡಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸಂದೀಪ್ ತ್ರಿಪಾಠಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯವಿದು. 59 ಸೆಕೆಂಡುಗಳ ಈ ದೃಶ್ಯ ತಾಯಿ ಮಮತೆಗೆ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬ ಶ್ವಾನದ ಎರಡು ಮುದ್ದು ಮರಿಗಳೊಂದಿಗೆ ಕುಳಿತುಕೊಂಡಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ದೂರದಲ್ಲಿ ಈ ಮರಿಗಳ ತಾಯಿಯೂ ಇದ್ದಾಳೆ. ಹೀಗೆ ಮರಿಗಳ ಪಕ್ಕ ಕುಳಿತಿದ್ದ ಆ ವ್ಯಕ್ತಿ ಬೈಯಲು ಆರಂಭಿಸುತ್ತಾನೆ. ಇದನ್ನೆಲ್ಲಾ ತಾಯಿ ಗಮನಿಸುತ್ತಾ ಇರುತ್ತಾಳೆ. ಆದರೆ, ಒಂದು ಹಂತದಲ್ಲಿ ಆತ ಮರಿಗಳಿಗೆ `ಹೊಡೆಯುತ್ತೇನೆ' ಎನ್ನುವ ರೀತಿಯಲ್ಲಿ ಚಪ್ಪಲಿಯನ್ನು ತನ್ನ ಕಾಲಿನಿಂದ ತೆಗೆಯುತ್ತಾನೆ. ಆದರೆ, ಅಷ್ಟರತನಕ ಸುಮ್ಮನಿದ್ದ ತಾಯಿ ಈ ದೃಶ್ಯ ಕಂಡ ಅರೆಕ್ಷಣದಲ್ಲಿ ಓಡೋಡಿ ಬಂದು ತನ್ನ ಮಾಲಿಕನನ್ನೇ ಎದುರಿಸಿ ನಿಲ್ಲುತ್ತಾಳೆ, ಕಂದಮ್ಮಗಳಿಗೆ ಹೊಡೆಯದಂತೆ ತಡೆಯುತ್ತಾಳೆ...! ಇದೇ ಅಲ್ಲವೇ ತಾಯಿಯ ಮಮತೆ...
ಇಲ್ಲಿದೆ ವಿಡಿಯೋ :
ಈ ವ್ಯಕ್ತಿ ತಮಾಷೆಗೆಂದು ಮರಿಗಳಿಗೆ ಹೊಡೆದಂತೆ ಮಾಡಿರಬಹುದು. ಆದರೆ, ಆ ತಾಯಿಯ ಪ್ರೀತಿ ಮಾತ್ರ ಎಂದೂ ಸುಳ್ಳಲ್ಲ. ಅದು ಎಂದಿಗೂ ನಿರ್ಮಲ.
ಈ ತಾಯಿಯನ್ನು ಕಂಡಾಗ ನಿಜಕ್ಕೂ ಹೃದಯ ಭಾರವಾಗುತ್ತದೆ. ನಮಗೇ ಗೊತ್ತಿಲ್ಲದಂತೆ ಕಣ್ಣಂಚಲ್ಲಿ ಹನಿಗೂಡಿದ ಕಣ್ಣೀರು ಕೆನ್ನೆ ಸವರಿ ಕೆಳಗೆ ಬೀಳುತ್ತದೆ.