ಜೀವನ ಎಂದರೆ ಅಷ್ಟೇ. ನಾವು ಹೇಗೆ ಸ್ವೀಕರಿಸುತ್ತೇವೋ ಹಾಗೆ. ಕಷ್ಟ ಎಂದು ಕುಳಿತರೆ ಎಲ್ಲವೂ ಕಷ್ಟವೇ. ಇದ್ದುದರಲ್ಲಿ ಖುಷಿಪಟ್ಟರೆ ಖಂಡಿತಾ ಇರುತ್ತದೆ ನೆಮ್ಮದಿ. ದುಡ್ಡಿನಲ್ಲಿ ಬಡತನ ಇರಬಹುದು. ಆದರೆ, ಹೃದಯಂತರಾಳದಲ್ಲಿ ನಾವು ಯಾವತ್ತೂ ಶ್ರೀಮಂತರಾಗಿರಬೇಕು. ಸಣ್ಣ ಸಣ್ಣ ಖುಷಿಗಳನ್ನೂ ದೊಡ್ಡದಾಗಿ ಅನುಭವಿಸುವಂತವರಾಗಿರಬೇಕು. ಆಗ ಬದುಕು ಇನ್ನೂ ಸುಂದರ. ಸಣ್ಣ ಸಣ್ಣ ಖುಷಿಗಳೂ ನಮ್ಮಲ್ಲಿ ಹೊಸ ಚೈತನ್ಯ ತುಂಬುತ್ತವೆ, ಬದುಕನ್ನು ಇನ್ನಷ್ಟು ಸಿಹಿಯನ್ನಾಗಿಸುತ್ತವೆ ಎಂಬುದು ಸತ್ಯ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಒಮ್ಮೊಮ್ಮೆ ನಾವು ಮಕ್ಕಳಿಂದ ಕಲಿಯುವ ಪಾಠ ತುಂಬಾ ಇರುತ್ತದೆ. ಈ ದೃಶ್ಯವೂ ಅದಕ್ಕೆ ಸಾಕ್ಷಿ. ಇಲ್ಲೊಬ್ಬ ಪುಟಾಣಿ ತನ್ನ ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ಗೆ ಪೂಜೆ ಮಾಡುವಾಗ ಸಂಭ್ರಮಿಸುವ ಪರಿಯನ್ನು ಬರೀ ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ.
ಕಷ್ಟಪಟ್ಟು ಸಂಪಾದಿಸಿದ ಇಷ್ಟಪಟ್ಟ ವಸ್ತು ಸಣ್ಣದೇ ಆಗಿದ್ದರೂ ಪ್ರತಿಯೊಬ್ಬರ ಪಾಲಿಗೂ ದೊಡ್ಡದೇ ಆಗಿರುತ್ತವೆ. ಈ ವಸ್ತು ನಮ್ಮಲ್ಲಿ ಸಂಭ್ರಮವನ್ನೇ ತರುತ್ತದೆ. ಅಂತಹ ಸಂಭ್ರಮ ಹೇಗಿರುತ್ತದೆ ಎಂಬುದಕ್ಕೆ ಈ ದೃಶ್ಯ ಸಾಕ್ಷಿ. ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದ್ಭುತ ದೃಶ್ಯವೊಂದನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬರು ತಾನು ಖರೀದಿಸಿದ ಸೆಕೆಂಡ್ ಹ್ಯಾಂಡ್ ಸೈಕಲ್ಗೆ ಪೂಜೆ ಸಲ್ಲಿಸುತ್ತಿರುವ ದೃಶ್ಯದ ಮೂಲಕ 15 ಸೆಕೆಂಡಿನ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ ಮುದ್ದು ಪುಟಾಣಿ ಕೂಡಾ ಖುಷಿಪಡುತ್ತಿರುವ ದೃಶ್ಯವನ್ನು ನೋಡಬಹುದಾಗಿದೆ. ತಮ್ಮ ಮನೆಗೆ ಬಂದ ಸೈಕಲ್ಗೆ ಇವರು ಹೂಕಟ್ಟುವುದನ್ನು ಇಲ್ಲಿ ನೋಡಬಹುದಾಗಿದೆ. ಈ ವೇಳೆ, ಪುಟಾಣಿ ಸಂಭ್ರಮಿಸುವ ಪರಿಯೇ ಸುಂದರ. ಈ ದೃಶ್ಯವನ್ನು ನೋಡುವಾಗಲೇ ಖುಷಿಯಾಗುತ್ತದೆ. ಜತೆಗೆ, ಕಣ್ಣಾಲಿಗಳು ತುಂಬಿ ಬರುತ್ತದೆ.
ಇಲ್ಲಿದೆ ವಿಡಿಯೋ :
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಪುಟಾಣಿಯ ಖುಷಿ ಹಲವರಲ್ಲಿ ಆನಂದಭಾಷ್ಪ ಸುರಿಯುವಂತೆ ಮಾಡಿದೆ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನು ಗಳಿಸಿದ್ದು, ಬಹುತೇಕರು ಮೆಚ್ಚುಗೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ನಿಮಗೆ ಕೂಡಾ ಈ ದೃಶ್ಯ ಖುಷಿಕೊಟ್ಟಿರಬಹುದು.