ಆ್ಯಪ್ನಗರ

ತಂದೆಯನ್ನು ಕಳೆದುಕೊಂಡ ಹೆಣ್ಮಕ್ಕಳಿಗಾಗಿ ಅದ್ಧೂರಿ ಸಾಮೂಹಿಕ ವಿವಾಹ : ಉದ್ಯಮಿಯ ಸೇವೆಯ ಹಿಂದಿದೆ ಒಂದೊಳ್ಳೆ ಉದ್ದೇಶ...

ತಂದೆಯನ್ನು ಕಳೆದುಕೊಂಡಿರುವ ನೂರಾರು ಹೆಣ್ಣು ಮಕ್ಕಳಿಗಾಗಿ ತಂದೆಯ ಸ್ಥಾನದಲ್ಲಿ ನಿಂತು ಸಾಮೂಹಿಕ ವಿವಾಹ ಏರ್ಪಡಿಸುವ ವಜ್ರೋದ್ಯಮಿಯೊಬ್ಬರ ಕೈಂಕರ್ಯ ಈಗ ವಿಶ್ವದ ಗಮನ ಸೆಳೆದಿದೆ. ಯಾವುದೇ ಅದ್ಧೂರಿ ವಿವಾಹಕ್ಕಿಂತ ಕಡಿಮೆ ಇಲ್ಲದಂತೆ ನಡೆಯುವ ಈ ಸಮಾರಂಭದಲ್ಲಿ ಹಬ್ಬದ ವಾತಾವರಣವೇ ಮನೆ ಮಾಡಿರುತ್ತದೆ.

Vijaya Karnataka Web 23 Dec 2019, 11:47 am
ತಮ್ಮ ಮಕ್ಕಳ ಭವಿಷ್ಯದ ಸುಖ ಜೀವನಕ್ಕಾಗಿ ವಿವಾಹ ಮಾಡಿಕೊಡುವುದೆಂದರೆ ಭಾರತದಲ್ಲಿ ಸುಲಭವೇನಲ್ಲ. ಇಲ್ಲಿ ಮದುವೆಗೆಂದೇ ಸಾಕಷ್ಟು ಹಣ ವ್ಯಯವಾಗುತ್ತದೆ. ಆದರೆ, ಹೆತ್ತವರು ಕೂಡಾ ತಮ್ಮ ಶಕ್ತಿ ಮೀರಿ ಮದುವೆಗೆ ಖರ್ಚು ಮಾಡುತ್ತಾರೆ. ಇವೆಲ್ಲಾ ಮಕ್ಕಳಿಗಾಗಿ... ಕೆಲವರು ಸಾಲಸೋಲ ಮಾಡಿ ಮಕ್ಕಳಿಗೆ ಮದುವೆ ಮಾಡಿಕೊಟ್ಟು ಮಕ್ಕಳ ಖುಷಿಯನ್ನು ತಮ್ಮ ಖುಷಿಯೆಂದೇ ಅನುಭವಿಸುತ್ತಾರೆ. ಆದರೆ, ಕೆಲವು ಸಂದರ್ಭದಲ್ಲಿ ಈ ಮದುವೆಗೆ ನೂರಾರು ಅಡ್ಡಿಗಳಿರುತ್ತವೆ. ಅವೆಲ್ಲಾ ಬಹುತೇಕ ಆರ್ಥಿಕ ಅಡ್ಡಿಗಳೇ ಆಗಿರುತ್ತವೆ. ಕೆಲವೊಮ್ಮೆ ಹೆತ್ತವರನ್ನು ಕಳೆದುಕೊಂಡ ಹೆಣ್ಣು ಮಕ್ಕಳ ಮದುವೆಗೆ ಒಂದಷ್ಟು ಕಷ್ಟಗಳು ಎದುರಾಗುತ್ತವೆ. ಇದೇ ಕಾರಣಕ್ಕೆ ಗುಜರಾತ್‌ನ ಸೂರತ್‌ನಲ್ಲಿ ಉದ್ಯಮಿಯೊಬ್ಬರು ತಂದೆಯನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆಂದೇ ಅದ್ಧೂರಿ ವಿವಾಹ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ. ಈ ವಿವಾಹ ಮಹೋತ್ಸವದಲ್ಲಿ ಅದ್ಧೂರಿತನಕ್ಕೆ ಕಿಂಚಿತ್ತೂ ಕೊರತೆ ಇರುವುದಿಲ್ಲ.
Vijaya Karnataka Web mass marriage 1
ಅದ್ಧೂರಿ ವಿವಾಹ ಸಮಾರಂಭ | Image Courtesy: Mahesh Savani/Facebook


Also Read : ಧುಮ್ಮಿಕ್ಕುವ ಜಲಪಾತದ ನಡುವೆ ಧಗಧಗ ಉರಿಯುತ್ತದೆ ಬೆಂಕಿ...! : ಏನೀ ರಹಸ್ಯ ಗೊತ್ತಾ...?

ವಜ್ರೋದ್ಯಮಿ ಮಹೇಶ್ ಸವನಿ ಈ ಅದ್ಧೂರಿ ವಿವಾಹ ಸಮಾರಂಭದ ರೂವಾರಿ. ಕಳೆದ 9 ವರ್ಷದಿಂದ ಇವರು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದಾರೆ.

Also Read : ಕೇರಳದ ಚೆಂಡೆಯ ಲಯದೊಂದಿಗೆ ಜಿಂಗಲ್ ಬೆಲ್ಸ್‌ ಹಾಡು : ಕಿವಿಗಿಂಪು ಈ ಪ್ರಯತ್ನ...


ಈ ಬಾರಿಯೂ ಈ ಸಾಮೂಹಿಕ ವಿವಾಹ ಸಮಾರಂಭದಲ್ಲಿ ತಂದೆಯನ್ನು ಕಳೆದುಕೊಂಡಿದ್ದ 271 ಹೆಣ್ಣು ಮಕ್ಕಳು ಅದ್ಧೂರಿಯಾಗಿಯೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಇದರಲ್ಲಿ ಐವರು ಮುಸ್ಲಿಂ ಯುವತಿಯರು ಹಾಗೂ ಒಬ್ಬರು ನೇಪಾಳದ ಯುವತಿ ಕೂಡಾ ಇದ್ದರು. ಇವರೆಲ್ಲರನ್ನು ತಂದೆಯ ಸ್ಥಾನದಲ್ಲಿ ನಿಂತು ಮಹೇಶ್ ಮದುವೆ ಮಾಡಿಕೊಟ್ಟಿದ್ದಾರೆ.

Also Read : ವ್ಯಕ್ತಿಯ ಗುದನಾಳದೊಳಗೆ ಸಿಲುಕಿಕೊಂಡ ಏಳು ಇಂಚಿನ ಗ್ಲಾಸ್ ಬಾಟಲ್...!

`ಹೆಣ್ಣು ಮಕ್ಕಳನ್ನು ಧಾರೆ ಎರೆದುಕೊಡುವುದು ಎಂದರೆ ದೇವರ ಆಶೀರ್ವಾದ ಇದ್ದಂತೆ' ಎಂಬುದು ಮಹೇಶ್ ಅವರ ನಂಬಿಕೆ. ಇದೇ ಕಾರಣಕ್ಕೆ ಇವರು 2010ರಿಂದ ಇಂತಹ ಸಾಮೂಹಿಕ ವಿವಾಹವನ್ನು ಏರ್ಪಡಿಸಿಕೊಂಡು ಬರುತ್ತಿದ್ದಾರೆ. 2012ರಲ್ಲಿ ಈ ವಿವಾಹ ಸಮಾರಂಭದಲ್ಲಿ 23 ಹೆಣ್ಮಕ್ಕಳು ಮದುವೆಯಾಗಿದ್ದರು. ಆದರೆ, ಪ್ರತಿವರ್ಷ ಈ ಸಂಖ್ಯೆ ಏರುತ್ತಲೇ ಇದೆ. ಅದ್ಧೂರಿತನಕ್ಕೆ ಕಿಂಚಿತ್ತೂ ಕೊರತೆ ಇಲ್ಲದಂತೆ ಈ ವಿವಾಹ ಸಮಾರಂಭ ನಡೆಯುತ್ತದೆ ಎಂಬುದು ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ