ನಿಶ್ಚಿತಾರ್ಥದ ವೇಳೆಯೇ ವಧುವಿಗೆ ಬೇಡಿ ತೋಡಿಸಿದ ವರ...! ಹಾಗಂತ, ಆತಂಕ ಪಡಬೇಕಾಗಿಲ್ಲ. ವರ ಪೊಲೀಸ್ ಕೂಡಾ ಅಲ್ಲ, ವಧು ಅಪರಾಧಿಯೂ ಅಲ್ಲ...! ವಿವಾಹ, ನಿಶ್ಚಿತಾರ್ಥದ ಸಂದರ್ಭದಲ್ಲಿ ಸೆರೆಯಾಗುವ ತಮಾಷೆಯ ಕ್ಷಣಗಳನ್ನು ನೋಡುವ ಖುಷಿಯೇ ಬೇರೆ. ಇಂತಹ ದೃಶ್ಯಗಳು ತಟ್ಟನೆ ನಮ್ಮ ಗಮನ ಸೆಳೆಯುತ್ತವೆ. ಇದಕ್ಕೆ ಸರಿಯಾಗಿ ಈಗೀಗ ಸೋಶಿಯಲ್ ಮೀಡಿಯಾದಲ್ಲೂ ಸದಾ ವಿವಾಹದ ಸಂದರ್ಭದ ಇಂತಹ ಸಾಕಷ್ಟು ತಮಾಷೆಯ ದೃಶ್ಯಗಳು ಕಾಣಸಿಗುತ್ತವೆ. ಹೀಗೆ ಕಾಣಸಿಗುವ ದೃಶ್ಯಗಳು ನಮ್ಮಲ್ಲೊಂದು ಮಂದಹಾಸ ಮೂಡಿಸುತ್ತವೆ. ಇದು ಕೂಡಾ ಅಂತಹದ್ದೇ ಒಂದು ದೃಶ್ಯ. ಇಲ್ಲೊಬ್ಬರು ವರ ನಿಶ್ಚಿತಾರ್ಥದ ವೇಳೆ ಉಂಗುರ ತೊಡಿಸುವುದಕ್ಕಿಂತ ಮುನ್ನ ವಧುವಿನ ಕೈಗೆ ಬೇಡಿ ತೊಡಿಸಿದ್ದಾರೆ...! ಹಾಗಂತ ಆತಂಕ ಪಡುವ ವಿಷಯ ಏನಿಲ್ಲ.
witty_wedding ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು. ವಧು ಮತ್ತು ವರ ವೇದಿಕೆಯಲ್ಲಿ ಇರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಈ ವೇಳೆ, ವರ ತನ್ನಲ್ಲಿದ್ದ ಕೋಳವನ್ನು ತೆಗೆಯುತ್ತಾರೆ. ಇದನ್ನು ಕಂಡ ತಕ್ಷಣ ಹುಸಿ ಮುನಿಸು ತೋರುತ್ತಾ, ಸಂಕೋಚದಿಂದ ವಧು ದೂರ ಹೋಗುತ್ತಾರೆ. ಇದಾದ ಬಳಿಕ ವರ ಬಳಿ ಬರುವ ವಧು ಕೈ ಮುಂದೆ ಚಾಚುತ್ತಾರೆ. ಆಗ ಮೊದಲು ತಾನು ಕೋಳವನ್ನು ತೊಟ್ಟು ಬಳಿಕ ವಧುವಿಗೆ ವರ ಕೋಳ ತೊಡಿಸುತ್ತಾರೆ. ಇಬ್ಬರೂ ಕೈಯನ್ನು ಎತ್ತಿ ಕೋಳವನ್ನು ತೋರಿಸುತ್ತಾ ನಂತರ ನಿಶ್ಚಿತಾರ್ಥದ ಉಂಗುರವನ್ನು ಬದಲಾಯಿಸಿಕೊಳ್ಳುತ್ತಾರೆ. ಈ ದೃಶ್ಯವನ್ನು ಅತಿಥಿಗಳು ಕೂಡಾ ಹಷೋದ್ಗಾರ ಮಾಡುವುದು ಕೂಡಾ ವಿಡಿಯೋದಲ್ಲಿ ಕೇಳಿಸುತ್ತದೆ.
ಸಹಜವಾಗಿಯೇ ಈ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ದೃಶ್ಯ ಎಲ್ಲರಲ್ಲೂ ಮಂದಹಾಸ ಮೂಡಿಸಿದೆ. ಹೀಗಾಗಿ, ಸಾಕಷ್ಟು ವೀಕ್ಷಣೆ ಮತ್ತು ಮೆಚ್ಚುಗೆ, ತಮಾಷೆಯ ಪ್ರತಿಕ್ರಿಯೆಯನ್ನೂ ಈ ವಿಡಿಯೋ ಗಳಿಸಿದೆ. ನಿಮಗೆ ಕೂಡಾ ಈ ದೃಶ್ಯ ಮುಗುಳ್ನಗೆ ತರಿಸಿರಬಹುದು.