ಆ್ಯಪ್ನಗರ

ನಡುಬೀದಿಯಲ್ಲಿ ಇಬ್ಬರು ವೃದ್ಧೆಯರ ಹೊಡೆದಾಟ! : ತಲೆಕೂದಲು ಎಳೆದು, ನೆಲದಲ್ಲಿ ಹೊರಳಾಡಿ ಫೈಟಿಂಗ್

ಸಹಜವಾಗಿಯೇ ಈ ವಿಡಿಯೋ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜತೆಗೆ, ವೃದ್ಧೆಯರ ಈ ಹೊಡೆದಾಟವನ್ನು ಎಲ್ಲರೂ ಕುತೂಹಲದಿಂದ ನೋಡುವಂತೆ ಮಾಡಿದೆ. ಈ ದೃಶ್ಯ ನೋಡಿದ ಬಹುತೇಕರು ಬಲು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

Vijaya Karnataka Web 22 Oct 2021, 11:43 am

ಹೈಲೈಟ್ಸ್‌:

  • ನಡುರಸ್ತೆಯಲ್ಲಿ ವೃದ್ಧೆಯರಿಬ್ಬರ ಹೊಡೆದಾಟ
  • ನೆಲಕ್ಕುರುಳಿದರೂ ಮುಗಿದಿರಲಿಲ್ಲ ಕಾದಾಟ
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ ದೃಶ್ಯ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web fighting
| Screengrab from video | Courtesy : instagram/funnyvideos1377/
ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಕೆಲವೊಂದು ದೃಶ್ಯಗಳು ಮೊಗದಲ್ಲಿ ಎಷ್ಟು ನಗುವರಳಿಸುತ್ತವೋ ಅಷ್ಟೇ ಅಚ್ಚರಿಯನ್ನೂ ಮೂಡಿಸುತ್ತವೆ. ಕೆಲವೊಂದು ದೃಶ್ಯಗಳನ್ನು ನೋಡಿದಾಗ ನಂಬುವುದಕ್ಕೇ ಕಷ್ಟವಾಗುತ್ತದೆ! ಇಂತಹ ಸಾಕಷ್ಟು ದೃಶ್ಯಗಳಿಗೆ ನೀವು ಕೂಡಾ ಸಾಕ್ಷಿಯಾಗಿರಬಹುದು. ಇದೀಗ ಅದೇ ರೀತಿ ನಿಮ್ಮನ್ನು ಅಚ್ಚರಿಗೊಳಿಸುವ, ತಟ್ಟನೆ ನಗುವರಳುವಂತೆ ಮಾಡುವ ದೃಶ್ಯವೊಂದು ವೈರಲ್ ಆಗುತ್ತಿದೆ.
ಪುಟ್ಟ ಮಕ್ಕಳು ಆಟ ಆಡುವಾಗ ಜಗಳ ಮಾಡುವುದು ಸಾಮಾನ್ಯ. ಆದರೆ, ದೊಡ್ಡವರು ಕೂಡಾ ಮಕ್ಕಳಂತೆ ತಲೆ ತಲೆ ಹಿಡಿದು, ನೆಲದಲ್ಲಿ ಹೊರಳಾಡಿ ಫೈಟ್ ಮಾಡುವುದನ್ನು ಎಂದಾದರೂ ನೋಡಿದ್ದೀರಾ? ಒಂದೊಮ್ಮೆ ನೋಡದೇ ಇದ್ದರೆ ಸದ್ಯ ಅಂತಹದ್ದೊಂದು ವಿಡಿಯೋ ಈಗ ವೈರಲ್ ಆಗುತ್ತಿದೆ. ಇದು ವೃದ್ಧೆಯರಿಬ್ಬರು ಭಾರೀ `ಕಾದಾಟ'ದಲ್ಲಿ ತೊಡಗಿರುವ ದೃಶ್ಯ. ಈ ದೃಶ್ಯವನ್ನು ನೋಡಿದಾಗ ನಿಜಕ್ಕೂ ಅಚ್ಚರಿಯಾಗುತ್ತದೆ.

ನೀರನ್ನು ಚಿಮ್ಮಿಸುತ್ತಾ ಚೆಂಡಿನಲ್ಲಿ ಮರಿಯಾನೆಯ ಆಟ : ಮತ್ತೆ ಮತ್ತೆ ನೋಡುವಂತೆ ಮಾಡುತ್ತದೆ ಈ ಸಡಗರ
funnyvideos1377 ಎಂಬ ಇನ್‌ಸ್ಟಾಗ್ರಾಂ ಖಾತೆಯೊಂದರಲ್ಲಿ ಅಪ್ಲೋಡ್ ಆದ ದೃಶ್ಯವಿದು. ಇಬ್ಬರು ವೃದ್ಧೆಯರು ವಾಗ್ಯುದ್ಧದಲ್ಲಿ ತೊಡಗಿರುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಇಬ್ಬರು ವಾಗ್ಯುದ್ಧದಲ್ಲಿ ತೊಡಗುತ್ತಿದ್ದಂತೆಯೇ ತಕ್ಷಣ ಕಾದಾಟದಲ್ಲಿ ತೊಡಗಿಕೊಳ್ಳುತ್ತಾರೆ. ಇಬ್ಬರು ಪರಸ್ಪರ ತಲೆಕೂದಲನ್ನು ಹಿಡಿದು ಹೊಡೆದಾಟ ಶುರು ಮಾಡುತ್ತಾರೆ. ಅಂತಿಮವಾಗಿ ಇಬ್ಬರು ಬ್ಯಾಲೆನ್ಸ್‌ ತಪ್ಪಿ ನೆಲೆಕ್ಕುರುಳುವ ದೃಶ್ಯದ ಮೂಲಕ ಈ ಕ್ಲಿಪ್ ಕೊನೆಯಾಗುತ್ತದೆ.

ಶಾಲೆಯಿಂದ ಬರುವ ಅಣ್ಣನಿಗೆ ಪ್ರತಿದಿನ ಕಾಯುವ ಪುಟಾಣಿ ಸೋದರಿ: ಮುದ ನೀಡುವ ಪ್ರೀತಿಯ ದೃಶ್ಯವಿದು
View this post on Instagram A post shared by Fanny Video (@funnyvideos1377)

ಮನೆಯ ನೆನಪಾಗಿ ಅಳುತ್ತಿದ್ದ ಗೆಳೆಯನನ್ನು ಸಂತೈಸುವ ಪುಟಾಣಿ : ಬಾಲಕಿ ತೋರುವ ಈ ಪ್ರೀತಿಯೇ ಅದ್ಭುತ
ಹೊಡೆದಾಟದಲ್ಲಿ ಈ ಇಬ್ಬರು ವೃದ್ಧೆಯರೂ ಸಮಬಲ ಪ್ರದರ್ಶಿಸಿದ್ದಾರೆ. ತಾವು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಇವರಿಬ್ಬರು ಹೊಡೆದಾಡಿಕೊಂಡದನ್ನು ನೋಡುವಾಗ ನಿಜಕ್ಕೂ ಅಚ್ಚರಿಯಾಗುತ್ತದೆ. ಯಾವ ಕಾರಣಕ್ಕೆ ಈ ವೃದ್ಧರಿಬ್ಬರ ನಡುವೆ ಘರ್ಷಣೆ ಶುರುವಾಗಿತ್ತು ಮತ್ತು ಇದು ಎಲ್ಲಿಯ ದೃಶ್ಯ ಹಾಗೂ ಯಾವಾಗಿನ ದೃಶ್ಯ ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಈ ದೃಶ್ಯ ಸದ್ಯ ನೆಟ್ಟಿಗರ ಗಮನ ಸೆಳೆದಿರುವುದಂತು ಸತ್ಯ. ಅಲ್ಲದೆ, ಈ ದೃಶ್ಯವನ್ನು ನೋಡಿದ ಬಹುತೇಕರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ