ಆ್ಯಪ್ನಗರ

International Men's Day 2021: ಅಂತಾರಾಷ್ಟ್ರೀಯ ಪುರುಷರ ದಿನ : ಇಲ್ಲಿದೆ ಶುಭಾಶಯದ ಸಂದೇಶಗಳು

ಇವತ್ತು ವಿಶ್ವ ಪುರುಷರ ದಿನ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಬದುಕಿನಲ್ಲಿ ಪ್ರೀತಿ ತುಂಬಿರುವ, ಪ್ರಮುಖ ಸ್ಥಾನ ಪಡೆದಿರುವ ಪುರುಷರಿಗೆ ಕಳುಹಿಸುವ ಶುಭಾಶಯದ ಸಂದೇಶಗಳು ಇಲ್ಲಿವೆ.

Vijaya Karnataka Web 19 Nov 2021, 11:47 am
ಇಂದು ಅಂತಾರಾಷ್ಟ್ರೀಯ ಪುರುಷರ ದಿನ. ಪ್ರತಿ ವರ್ಷ ನವೆಂಬರ್ 19ರಂದು ವಿಶ್ವ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಪುರುಷರು ವಹಿಸುವ ಪ್ರಮುಖ ಪಾತ್ರಗಳನ್ನು, ನಿರ್ವಹಿಸುವ ಜವಾಬ್ದಾರಿಯನ್ನು, ತೋರಿಸುವ ಪ್ರೀತಿಯನ್ನು ಗುರುತಿಸುವ ಸಲುವಾಗಿ ಈ ದಿನವನ್ನು ಆಚರಿಸಿಕೊಂಡು ಬರಲಾಗುತ್ತದೆ. ಇದು ತಮ್ಮ ಜೀವನದಲ್ಲಿ ಪ್ರೀತಿ ತುಂಬಿರುವ, ಪ್ರಮುಖ ಸ್ಥಾನ ಪಡೆದಿರುವ, ಎಲ್ಲಾ ಸಂದರ್ಭದಲ್ಲೂ ಧೈರ್ಯವಾಗಿ ನಿಲ್ಲುವ ಪುರುಷರನ್ನು ಶ್ಲಾಘಿಸಲು, ಧನ್ಯವಾದ ಹೇಳಲು ಇರುವ ಅವಕಾಶ ಕೂಡಾ ಹೌದು.
Vijaya Karnataka Web Image by sasint from Pixabay
Image by sasint from Pixabay


1999ರಿಂದ ಈ ಅಂತಾರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪುರುಷರ ಮತ್ತು ಅವರ ಆರೋಗ್ಯದ ಮೇಲೆ ಗಮನ ಕೇಂದ್ರೀಕರಿಸುವುದು ಹಾಗೂ ಜಾಗೃತಿ ಮೂಡಿಸುವುದು, ಪುರುಷರು ಹಾಗೂ ಯುವಕರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು, ಸಮಾನತೆಯ ಬಗ್ಗೆ ಅರಿವು ಮೂಡಿಸುವುದು, ಸಮಾಜಕ್ಕೆ ಪುರುಷರ ಸಕಾರಾತ್ಮಕ ಕೊಡುಗೆಗಳನ್ನು ಗೌರವಿಸುವುದು ಸೇರಿದಂತೆ ಹಲವು ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಈ ದಿನದ ಆಚರಣೆ ಆರಂಭವಾಗಿತ್ತು. ಹೀಗೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆಚರಿಸಲ್ಪಡುವ ಈ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು ಇಲ್ಲಿವೆ.

ಪುರುಷರ ದಿನದ ಶುಭಾಶಯಗಳು

* ಪುರುಷ ತನ್ನೊಳಗಿರುವ ಶಕ್ತಿಯನ್ನು ತೋರಿಸಲು ದೈಹಿಕ ಬಲವನ್ನು ಬಳಸಬೇಕಾದ ಅಗತ್ಯವಿಲ್ಲ. ಬದುಕಿನಲ್ಲಿ ಎದುರಾಗುವ ಸವಾಲುಗಳನ್ನು ನಿರ್ಭೀತಿಯಿಂದ ಎದುರಿಸಿದರೆ ಅಷ್ಟೇ ಸಾಕು. ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು

* ತನ್ನ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಉತ್ತಮವಾದುದ್ದನ್ನೇ ಮಾಡುವುದರಲ್ಲಿ ಪ್ರಾಮಾಣಿಕವಾಗಿ ನಿರತನಾಗಿರುವ ನಿಜವಾದ ವ್ಯಕ್ತಿ ಯಾವತ್ತೂ ಇತರರು ಅವನ ಬಗ್ಗೆ ಏನು ಹೇಳುತ್ತಾರೆಂದು ಯೋಚಿಸುವುದಿಲ್ಲ. ನೀವು ನಿಜವಾಗಿಯೂ ನಮಗೆಲ್ಲರಿಗೂ ತಿಳಿದಿರುವ ಅತ್ಯುತ್ತಮ ವ್ಯಕ್ತಿ. ತಮಗೆ ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು

* ನೀವು ನನ್ನ ಜೀವನದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದೀರಿ. ನೀವು ನಮಗೆ ತೋರಿದ ಪ್ರೀತಿ, ನೀಡಿದ ಬಲವನ್ನು ಆಚರಿಸುವ ದಿನ ಇಂದು. ಅಂತಾರಾಷ್ಟ್ರೀಯ ಪುರುಷರ ದಿನದ ಶುಭಾಶಯಗಳು

* ನಾವೆಲ್ಲರೂ ನಮ್ಮ ಕುಟುಂಬಕ್ಕಾಗಿ ಮತ್ತು ನಮಗಾಗಿ ಪ್ರತಿದಿನ ಉತ್ತಮವಾಗಲು, ಮೌಲ್ಯಯುತ ವ್ಯಕ್ತಿಯಾಗಲು ಪ್ರಯತ್ನಿಸಬೇಕು. ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಶುಭಾಶಯಗಳು

* ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಒಳಿತಿಗಾಗಿ ನೀವು ನಿಮ್ಮ ಸಂತೋಷ ಮತ್ತು ಜೀವನವನ್ನು ತ್ಯಾಗ ಮಾಡುತ್ತೀರಿ. ತಮಗೆ ವಿಶ್ವ ಪುರುಷರ ದಿನದ ಶುಭಾಶಯಗಳು.

ಗಣ್ಯರ ಮಾತು

ಒಬ್ಬ ಮಹಾನ್ ವ್ಯಕ್ತಿ ಒಬ್ಬ ಪ್ರಸಿದ್ಧ ವ್ಯಕ್ತಿಯಿಂದ ಭಿನ್ನವಾಗಿರುತ್ತಾನೆ. ಯಾಕೆಂದರೆ, ಅವನು ಸಮಾಜದ ಸೇವಕನಾಗಲು ಸಿದ್ಧನಾಗಿರುತ್ತಾನೆ - ಡಾ ಬಿ ಆರ್ ಅಂಬೇಡ್ಕರ್

ಯಶಸ್ಸಿ ಮನುಷ್ಯನಾಗುವುದಕ್ಕಿಂತಲೂ, ಮೌಲ್ಯಯುತ ವ್ಯಕ್ತಿಯಾಗಲು ಪ್ರಯತ್ನಿಸಿ - ಆಲ್ಬರ್ಟ್ ಐನ್‌ಸ್ಟೈನ್

ಗಂಡಾಗುವುದು ಜನ್ಮದ ವಿಚಾರ. ಪುರುಷನಾಗುವುದು ವಯಸ್ಸಿನ ವಿಚಾರ. ಆದರೆ, ಸಂಭಾವಿತನಾಗಿರುವುದು ಆಯ್ಕೆಯ ವಿಷಯ - ವಿನ್ ಡೀಸೆಲ್

ನನ್ನ ಯಶಸ್ಸಿನ ಮೇಲೆ ನನ್ನನ್ನು ಅಳೆಯಬೇಡಿ. ಬದಲಾಗಿ ನಾನು ಎಷ್ಟು ಬಾರಿ ಬಿದ್ದೆ ಮತ್ತು ಎಷ್ಟು ಬಾರಿ ಮೇಲೆದ್ದೆ ಎಂಬುದರ ಮೇಲೆ ನಾನು ಏನೆಂಬುದು ನಿರ್ಣಯಿಸಿ - ನೆಲ್ಸನ್ ಮಂಡೇಲಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ