ಆ್ಯಪ್ನಗರ

ಹಂಚಿ ತಿಂದರೆ ಸ್ವರ್ಗ ಸುಖ : ಆನೆ ಮತ್ತು ದನದ ಈ ಹೃದಯಸ್ಪರ್ಶಿ ದೃಶ್ಯವೇ ಎಲ್ಲರಿಗೂ ಪಾಠ

ಆನೆ ಮತ್ತು ದನ ಅತ್ಯಂತ ಸ್ನೇಹದಿಂದ ಇರುವ ಅಪೂರ್ವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಈ ಅದ್ಭುತ ದೃಶ್ಯಕ್ಕೆ ಎಲ್ಲರೂ ತಲೆ ಬಾಗಿದ್ದಾರೆ.

Vijaya Karnataka Web 6 Nov 2020, 3:50 pm
ಈ ಭೂಮಿಯಲ್ಲಿ ನಮ್ಮದು ಮೂರು ದಿನಗಳ ಬಾಳು... ಇರುವಷ್ಟು ದಿನ ಖುಷಿ, ಸಹಬಾಳ್ವೆ, ಪರಸ್ಪರ ಸ್ನೇಹ, ವಿಶ್ವಾಸದಿಂದ ಇರುವುದೇ ಜೀವನದ ರಸಗಳಿಗೆ... ಕೂಡಿ ಬಾಳಿದರೆ ಬದುಕೇ ಸುಂದರ... ಅದಕ್ಕಿಂತ ಬೇರೆ ಸ್ವರ್ಗವೂ ಬೇಕಾಗಿಲ್ಲ.
Vijaya Karnataka Web Image by Yogendra Singh from Pixabay
| Representative image | Image by Yogendra Singh from Pixabay


ಕೆಲವೊಮ್ಮೆ ನಾವು ಪ್ರಾಣಿಗಳಿಂದ ಕಲಿಯಬೇಕಾದ ಪಾಠ ತುಂಬಾ ಇರುತ್ತದೆ. ಪ್ರಾಣಿಗಳು ತೋರುವ ಹೃದಯವಂತಿಕೆಯ ಎದುರು ಕೆಲವೊಂದು ಸಲ ನಾವು ತುಂಬಾ ಚಿಕ್ಕವರಂತೆ ಕಾಣಿಸುತ್ತೇವೆ. ಈ ರೀತಿಯ ಅನೇಕ ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ನಮ್ಮ ಗಮನ ಸೆಳೆಯುತ್ತವೆ. ಬರೀ ಅಷ್ಟೇ ಅಲ್ಲ ಈ ದೃಶ್ಯಗಳು ನಮ್ಮನ್ನು ಚಿಂತನೆಗೂ ಹಚ್ಚುತ್ತವೆ. ಸದ್ಯ ಅಂತಹದ್ದೇ ಒಂದು ಸುಂದರ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ @susantananda3 ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : ತನ್ನನ್ನೇ ಮದುವೆಯಾದ ಯುವಕ! : ವಿಚಿತ್ರ ಕಲ್ಯಾಣಕ್ಕಿದೆ ಇನ್ನೂ ವಿಚಿತ್ರ ಕಾರಣ...!

ಇದು ಆನೆ ಮತ್ತು ದನದ ನಡುವಣ ಅದ್ಭುತ ಸ್ನೇಹದ ದೃಶ್ಯ. ಈ ಎರಡು ಮುದ್ಧು ಜೀವಿಗಳ ಹೃದಯವೈಶಾಲ್ಯತೆ ಎಷ್ಟು ಎಂಬುದಕ್ಕೆ ಸಾಕ್ಷಿ ಇದು. ಆನೆ ಮತ್ತು ದನ ಎಲೆಯನ್ನು ತಿನ್ನುವ ದೃಶ್ಯದ ಮೂಲಕ ಈ ಕ್ಲಿಪ್ ಶುರುವಾಗುತ್ತದೆ. ಹಂಚಿಕೊಂಡು ಈ ಎರಡು ಮುದ್ದು ಜೀವಿಗಳು ತಿನ್ನುತ್ತವೆ. ಮನಸ್ಸು ಮಾಡಿದ್ದರೆ ಎಲ್ಲಾ ಎಲೆಗಳನ್ನು ಆನೆಯೊಂದೇ ತಿನ್ನಬಹುದಿತ್ತು. ಅಷ್ಟು ಶಕ್ತಿ ಆನೆಗೆ ಇತ್ತು ಅಥವಾ ಸಮಯ ಸಿಕ್ಕಾಗ ದನಕ್ಕೂ ಎಲ್ಲವನ್ನೂ ಎಳೆದುಕೊಂಡು ಹೋಗುವ ಅವಕಾಶ ಇತ್ತು. ಆದರೆ, ಈ ಹೃದಯವಂತ ಎರಡೂ ಪ್ರಾಣಿಗಳು ಹಾಗೆ ಮಾಡಲಿಲ್ಲ. ಬದಲಾಗಿ, ಆನೆ ದನಕ್ಕೂ ತನ್ನೊಂದಿಗೆ ತಿನ್ನಲು ಅವಕಾಶ ಕೊಟ್ಟಿದ್ದಲ್ಲದೆ, ಎಲ್ಲಾ ಎಲೆಗಳನ್ನು ದನಕ್ಕೇ ತಿನ್ನಲು ನೀಡಿತ್ತು...!

Also Read : ಹಂಚಿ ತಿಂದರೆ ಸ್ವರ್ಗ ಸುಖ... ಈ ಅಪೂರ್ವ ಸ್ನೇಹಕ್ಕೆ ನೀವು ಫಿದಾ ಆಗುವುದು ಪಕ್ಕಾ


Also Read : ಅಬ್ಬಬ್ಬಾ, ಭಯಾನಕ! ತಿಮಿಂಗಿಲದ ಬಾಯಿಯಿಂದ ಪಾರಾದ ಇಬ್ಬರ ದೃಶ್ಯವನ್ನು ನೋಡುವಾಗಲೇ ಮೈನಡುಗುತ್ತದೆ!


ಎಷ್ಟು ಅದ್ಭುತವಾಗಿದೆಯಲ್ವಾ ಈ ದೃಶ್ಯ...? ಈ ದೃಶ್ಯದೊಳಗಿನ ಸಂದೇಶ, ಇದರ ಶಕ್ತಿ ಎಂತಹದ್ದು ಎಂಬುದಕ್ಕೆ ಹೆಚ್ಚು ವಿವರಣೆಯೇ ಬೇಕಾಗಿಲ್ಲ. ಇದೇ ಕಾರಣಕ್ಕೆ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಅಪೂರ್ವ ದೃಶ್ಯ ಕಂಡು ಮನಸೋತಿದ್ದಾರೆ. ಬಹುತೇಕರು `ಪ್ರಾಣಿಗಳಿಂದ ನಾವು ಕಲಿಯಬೇಕಾದ ಪಾಠ ಹಲವಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕೆಲವರು ಸುಂದರ, ಅದ್ಭುತ ಎಂದು ಬಣ್ಣಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ