ಮನಸ್ಸಿಗೆ ಆನಂದ ನೀಡುವ ದೃಶ್ಯವಿದು. ನೋಡಿದ ತಕ್ಷಣ ಸೆಳೆದು ಬಿಡುವ ಅದ್ಭುತ ಪ್ರೀತಿ ಇದು. ಮತ್ತೆ ಮತ್ತೆ ನೋಡಬೇಕೆನಿಸುವ ಸಂಭ್ರಮದ ಕ್ಷಣವಿದು.
ಶ್ವಾನಗಳು ಮನುಷ್ಯರ ಉತ್ತಮ ಸ್ನೇಹಿತರು ಎಂಬುದು ಸತ್ಯ. ಮನೆಯ ಮುದ್ದಿನ ಸಾಕುಪ್ರಾಣಿಗಳು ತಮ್ಮ ಮಾಲಿಕರ ನೆರಳಂತೆ ಇರುತ್ತವೆ. ಈ ಬಾಂಧವ್ಯವೇ ಸುಂದರ. ಹಿಡಿ ಪ್ರೀತಿಗೆ ಬೆಟ್ಟದಷ್ಟು ಪ್ರೀತಿಯನ್ನು ಮರಳಿಸುವ ಮುದ್ದು ಜೀವಗಳಿವು. ಇಂತಹ ಶ್ವಾನಗಳು ಮಾಲಿಕರನ್ನು ಅದೆಷ್ಟು ಹಚ್ಚಿಕೊಂಡಿರುತ್ತವೆ ಎಂಬುದಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ಸೋಶಿಯಲ್ ಮೀಡಿಯಾದಲ್ಲೂ ಸದಾ ಇಂತಹ ಹಲವು ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ಹೃದಯಸ್ಪರ್ಶಿ ದೃಶ್ಯಗಳನ್ನು ಕಂಡಾಗ ಮನಸ್ಸು ಖುಷಿಯಿಂದ ಕುಣಿಯುತ್ತವೆ.
ಕೆಲವೊಮ್ಮೆ ಈ ಪ್ರೀತಿ ನಮ್ಮನ್ನು ಭಾವುಕರನ್ನಾಗಿಸುವುದು ಕೂಡಾ ಇದೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. @MackBeckyComedy ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯವಿದು. ಮುದ್ದು ಶ್ವಾನವೊಂದು ಬಹುದಿನಗಳ ಬಳಿಕ ತನ್ನ ಒಡತಿಯನ್ನು ಭೇಟಿಯಾಗುತ್ತಿರುವ ಹೃದಯಸ್ಪರ್ಶಿ ದೃಶ್ಯವಿದು.
ಮಹಿಳೆಯೊಬ್ಬರನ್ನು ವ್ಹೀಲ್ಚೇರ್ನಲ್ಲಿ ಕರೆದೊಯ್ಯುತ್ತಿರುವುದು ಮತ್ತು ಬಾಗಿಲಿನಲ್ಲಿ ನಿಂತಿದ್ದ ಡಾಕ್ಟರ್ ಒಬ್ಬರು ಮುದ್ದಿನ ಶ್ವಾನವನ್ನು ಹಿಡಿದು ತರುವ ದೃಶ್ಯದ ಮೂಲಕ 30 ಸೆಕೆಂಡುಗಳ ಈ ಕ್ಲಿಪ್ ಶುರುವಾಗುತ್ತದೆ. ಹೀಗೆ ಮುದ್ದಿನ ಶ್ವಾನವನ್ನು ಕರೆತರುವ ಡಾಕ್ಟರ್ ಅದನ್ನು ಮಾಲಕಿಯ ಕೈಗೆ ಕೊಡುತ್ತಾರೆ. ಬಹುದಿನಗಳ ನಂತರದ ಭೇಟಿ ಇದು. ತನ್ನ ಮುದ್ದಿನ ಶ್ವಾನವನ್ನು ಕಂಡು ಆ ಮಹಿಳೆ ಕಣ್ಣೀರಿಟ್ಟರೆ, ಶ್ವಾನ ಪ್ರೀತಿಯ ಮಳೆಗರೆಯುತ್ತಿತ್ತು. ಈ ದೃಶ್ಯವೇ ಹೃದಯಂಗಮ. `40 ದಿನಗಳ ಕ್ಯಾನ್ಸರ್ ಚಿಕಿತ್ಸೆಯ ನಂತರ ಮಾರಿಯಾ ತನ್ನ ನಾಯಿಮರಿಯನ್ನು ಮತ್ತೆ ಭೇಟಿಯಾದರು' ಎಂದು ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇಲ್ಲಿದೆ ವಿಡಿಯೋ :
ಈ ಪುನರ್ಮಿಲನದ ದೃಶ್ಯ ಸಹಜವಾಗಿಯೇ ಎಲ್ಲರನ್ನೂ ಭಾವುಕರನ್ನಾಗಿಸಿದೆ. ಹೀಗಾಗಿ, ಅಪ್ಲೋಡ್ ಆದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸಾಕಷ್ಟು ವೀಕ್ಷಣೆ ಮತ್ತು ಪ್ರತಿಕ್ರಿಯೆಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಎಲ್ಲರಿಗೂ ಈ ಪುನರ್ಮಿಲನ ಖುಷಿ ಕೊಟ್ಟಿದೆ.
ನಿಮಗೆ ಕೂಡಾ ಈ ದೃಶ್ಯ ಆನಂದ ನೀಡಿರಬಹುದು.