ಆ್ಯಪ್ನಗರ

ಹಾಲು ಕುಡಿಯುವ ತನ್ನ ಕಂದನಿಗೆ ಮುತ್ತಿಟ್ಟು ಮುದ್ದಿಸುವ ಕೋತಿ: ತಾಯಿ ಮಮತೆಯ ಭಾವನಾತ್ಮಕ ದೃಶ್ಯವಿದು

ಸದ್ಯ ಈ ಭಾವನಾತ್ಮಕ ದೃಶ್ಯ ಎಲ್ಲರ ಹೃದಯ ಗೆದ್ದಿದೆ. ಎಲ್ಲರೂ ಈ ಸೊಬಗಿನ ದೃಶ್ಯಕ್ಕೆ ಮನಸೋತಿದ್ದಾರೆ. ತಾಯಿ ಮಮತೆಗೆ ಸಾಕ್ಷಿ ಇದು. ಈ ಅಪೂರ್ವ ದೃಶ್ಯ ಎಲ್ಲರನ್ನೂ ಒಂದು ಕ್ಷಣ ಭಾವುಕರನ್ನಾಗಿಸುವ ಜತೆಗೆ ಮಂದಹಾಸವನ್ನೂ ಮೂಡಿಸುತ್ತದೆ.

Vijaya Karnataka Web 20 Dec 2021, 11:15 am

ಹೈಲೈಟ್ಸ್‌:

  • ಹಾಲು ಕುಡಿಯುತ್ತಿರುವ ಕಂದನಿಗೆ ಪ್ರೀತಿ ತೋರುವ ತಾಯಿ
  • ಬಿಗಿದಪ್ಪಿ ಪ್ರೀತಿಯ ಸಿಹಿ ಮುತ್ತು ನೀಡುವ ಕೋತಿ
  • ಮನಸ್ಸಿಗೆ ಹಿತ ನೀಡುತ್ತದೆ ಈ ಸುಂದರ ತಾಯಿ ಪ್ರೀತಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Mother Monkey Hugs Baby
| Screengrab from video | Courtesy : Susanta Nanda IFS/Twitter
ತಾಯಿ ಪ್ರೀತಿಯನ್ನು ಯಾವತ್ತೂ ಪದಗಳಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಜಗತ್ತಿನಲ್ಲಿರುವ ಪರಿಶುದ್ಧ ಪ್ರೀತಿಯದು. ಮನುಷ್ಯರಾಗಲಿ ಅಥವಾ ಇನ್ನಾವುದೇ ಜೀವರಾಶಿಯಾಗಲಿ ತಾಯಿ ಪ್ರೀತಿಯಲ್ಲಿ ಯಾವತ್ತೂ ವ್ಯತ್ಯಾಸ ಇರದು. ತಾಯಿ ಯಾವತ್ತಿದ್ದರೂ ತಾಯಿಯೇ. ಅದಕ್ಕೆ ತಾಯಿಗೆ ದೇವರ ಸ್ಥಾನ ಇರುವುದು.

ಇಂತಹ ತಾಯಿ ಪ್ರೀತಿಯ ದೃಶ್ಯಗಳನ್ನು ನೋಡುವಾಗ ಆ ಪ್ರೀತಿಯನ್ನು ಅನುಭವಿಸಿದಷ್ಟೇ ಮನಸ್ಸಿಗೆ ಹಿತವಾಗುತ್ತದೆ. ಇಂತಹ ಸಾಕಷ್ಟು ಹೃದಯಸ್ಪರ್ಶಿ ದೃಶ್ಯಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಹಲವು ಸಲ ನೋಡಿರಬಹುದು ಮತ್ತು ಇಂತಹ ದೃಶ್ಯಗಳನ್ನು ಕಂಡಾಗ ಒಂದೇ ಕ್ಷಣದಲ್ಲಿ ನಾವು ಭಾವುಕರಾಗುತ್ತೇವೆ. ಸದ್ಯ ಅಂತಹದ್ದೇ ಒಂದು ಅಪೂರ್ವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಎಲ್ಲರನ್ನೂ ಬಹುವಾಗಿ ಸೆಳೆದಿದೆ.

ಹೊತ್ತಿ ಉರಿಯುತ್ತಿದ್ದ ಬಹುಮಹಡಿ ಕಟ್ಟಡದಿಂದ ಪಾರಾದ ಇಬ್ಬರು: ಉಸಿರು ಬಿಗಿಹಿಡಿದು ನೋಡುವಂತಹ ದೃಶ್ಯವಿದು
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ದೃಶ್ಯ ಇದು. ತಾಯಿ ಕೋತಿಯೊಂದು ತನ್ನ ಮರಿಯನ್ನು ಮುದ್ದಿಸುವ ದೃಶ್ಯ ಇದು. ಪುಟಾಣಿ ಕಂದಮ್ಮ ಅಮ್ಮನ ಎದೆಹಾಲನ್ನು ಕುಡಿಯುತ್ತಿರುವ ದೃಶ್ಯದ ಮೂಲಕ 13 ಸೆಕೆಂಡಿನ ಈ ದೃಶ್ಯ ಶುರುವಾಗುತ್ತದೆ. ಹೀಗೆ ಅಮ್ಮನ ಹಾಲು ಕುಡಿಯುತ್ತಿರುವ ಕಂದ ತಾಯಿಯ ಮುಖವನ್ನೇ ಪ್ರೀತಿಯಿಂದ ನೋಡುತ್ತಿದ್ದರೆ, ಈ ತಾಯಿ ತನ್ನ ಕಂದನನ್ನು ಅಷ್ಟೇ ಪ್ರೀತಿಯಿಂದ ನೋಡುವುದನ್ನು ಇಲ್ಲಿ ಗಮನಿಸಬಹುದು. ಬರೀ ಅಷ್ಟೇ ಅಲ್ಲ, ಈ ತಾಯಿ ಕರುಳಬಳ್ಳಿಗೆ ಮುತ್ತಿಕ್ಕಿ ಪ್ರೀತಿಯ ಮಳೆಗರೆಯುತ್ತಿದ್ದಳು. ಈ ಪ್ರೀತಿಯೇ ಸುಂದರ... ಈ ದೃಶ್ಯವನ್ನು ಎಷ್ಟು ನೋಡಿದರೂ ಖಂಡಿತಾ ಮನಸ್ಸು ತಣಿಯದು. ಅಂತಹದ್ದೊಂದು ಅದ್ಭುತ ಶಕ್ತಿ ಈ ತಾಯಿ ಮಮತೆಯ ದೃಶ್ಯಕ್ಕಿದೆ.
ರಿಮೋಟ್‌ಗಾಗಿ ಇಬ್ಬರ ಕಿತ್ತಾಟ, ನಡುವಲ್ಲಿ ಕುಳಿತು `ಜಗಳ' ನಿಲ್ಲಿಸುವ ಶ್ವಾನ: ಖುಷಿ ನೀಡುವ ದೃಶ್ಯವಿದು
ಇಲ್ಲಿದೆ ವಿಡಿಯೋ :


View this post on Instagram A post shared by Adorable Monkey Videos (@ourplanetanimal)

ಬರೀ ಇದೇ ಅಲ್ಲ. ಈ ಹಿಂದೆ ಕೂಡಾ ಇಂತಹದ್ದೇ ಅಪೂರ್ವ ದೃಶ್ಯಗಳು ವೈರಲ್ ಆಗಿದ್ದವು. ಈ ಎಲ್ಲಾ ದೃಶ್ಯಗಳು ಎಲ್ಲರ ಹೃದಯ ತುಂಬಿ ಬರುವಂತೆಯೂ ಮಾಡಿದ್ದವು.

2 ವರ್ಷಗಳ ಬಳಿಕ ಮೊಮ್ಮಕ್ಕಳನ್ನು ಭೇಟಿಯಾದ ಅಜ್ಜ ಅಜ್ಜಿ: ಈ ಖುಷಿಯ ಕ್ಷಣವೇ ಹೃದಯಸ್ಪರ್ಶಿ

ಸಹಜವಾಗಿಯೇ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಬಲು ಆನಂದದಿಂದಲೇ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಎಲ್ಲರ ಹೃದಯಕ್ಕೂ ಹಿತ ನೀಡುವಲ್ಲಿ ಈ ಅಪೂರ್ವ ದೃಶ್ಯ ಯಶಸ್ವಿಯಾಗಿದೆ. ಇದಕ್ಕೆ ನೆಟ್ಟಿಗರ ಖುಷಿಯ ಪ್ರತಿಕ್ರಿಯೆಗಳೇ ಸಾಕ್ಷಿ.



ನಿಮಗೆ ಕೂಡಾ ಈ ದೃಶ್ಯ ಖುಷಿಕೊಟ್ಟಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ