ಆ್ಯಪ್ನಗರ

ಮಗಳ ಪುಟ್ಟ ಸೈಕಲ್‌ನಲ್ಲಿ 370 ಕಿ.ಮೀ ಕ್ರಮಿಸಿದ ವ್ಯಕ್ತಿ! : ಈ ಪ್ರಯಾಣದ ಹಿಂದಿದೆ ಒಳ್ಳೆಯ ಉದ್ದೇಶ

ಧನ ಸಹಾಯ ಮಾಡಲು ವ್ಯಕ್ತಿಯೊಬ್ಬರು ಕೈಗೊಂಡ ಅಭಿಯಾನ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಲ್ಲದೆ, ಇವರ ಸಾಹಸವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

Vijaya Karnataka Web 23 Sep 2020, 5:46 pm
ಮಕ್ಕಳ ಪುಟ್ಟ ಸೈಕಲ್‌ನಲ್ಲಿ ದೊಡ್ಡವರಿಗೆ ಪ್ರಯಾಣಿಸಲು ಸಾಧ್ಯವಿದೆಯೇ...? ಬಹುತೇಕ ಇದು ಅಸಾಧ್ಯದ ಮಾತು. ಮನೆಯಂಗಳದಲ್ಲಿ ಕಷ್ಟಪಟ್ಟು ಒಂದು ರೌಂಡ್ ಬಂದರೇನೇ ಅದು ಹೆಚ್ಚೇನೋ. ಆದರೆ, ಇಲ್ಲೊಬ್ಬರು ವ್ಯಕ್ತಿ ತನ್ನ ಮಗಳ ಸೈಕಲ್‌ನಲ್ಲಿ ಬರೋಬ್ಬರಿ 370 ಕಿ.ಮೀ ದೂರ ಕ್ರಮಿಸಿದ್ದಾರೆ. ಅದೂ ಬರೀ ಆರು ದಿನಗಳಲ್ಲಿ...!
Vijaya Karnataka Web Wesley Hamnett
| Image Courtesy : Wesley Hamnett/Facebook


ಇದು ವೈಥನ್‌ಶೇವ್ ಮೂಲದ ವೆಸ್ಲಿ ಹ್ಯಾಮ್ನೆಟ್ ಎಂಬ 37ರ ಹರೆಯದ ವ್ಯಕ್ತಿಯ ಸಾಹಸದ ಕತೆ. ವೆಸ್ಲಿ ತನ್ನ ಮಗಳ ಪುಟ್ಟ ಗುಲಾಬಿ ಸೈಕಲ್‌ನಲ್ಲಿ ಗ್ಲ್ಯಾಸ್ಗೋದಿಂದ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸುವ ಮೂಲಕ ಧನ ಸಹಾಯ ಮಾಡಲು ಹಣ ಸಂಗ್ರಹಿಸಿದ್ದಾರೆ. ಇವರದ್ದು ಆರು ದಿನಗಳ ಪ್ರಯಾಣ. ಗ್ಲ್ಯಾಸ್ಗೋದಿಂದ ಲೇಕ್ ಡಿಸ್ಟ್ರಿಕ್ಟ್ ಮೂಲಕ ತೆರಳಿ ಸೆಪ್ಟೆಂಬರ್ 21ರಂದು ಸಂಜೆ 6 ಗಂಟೆಗೆ ಇವರು ದಕ್ಷಿಣ ಮ್ಯಾಂಚೆಸ್ಟರ್‌ಗೆ ಮರಳಿದ್ದಾರೆ. ಈ ಮೂಲಕ ಆರು ದಿನಗಳಲ್ಲಿ ಇವರು ಬರೋಬ್ಬರಿ 370 ಕಿಲೋ ಮೀಟರ್ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ. ಈ ಆರು ದಿನಗಳ ತನ್ನ ಸಾಹಸಯಾನದಿಂದ ಬೆನ್ನಿನ ಬದಿಯಲ್ಲಿ ಸ್ವಲ್ಪ ನೋವಾಗಿದೆ ಎಂದು ಹೇಳಿಕೊಂಡಿರುವ ವೆಸ್ಲಿ, ತಮ್ಮ ಈ ಪ್ರಯಾಣ ತೃಪ್ತಿ ತಂದಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

Also Read : ಕಣಿವೆಗೆ ಬಿದ್ದಿದ್ದ ಕುದುರೆಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಿದ ತಂಡ : ಅದ್ಭುತ ವಿಡಿಯೋ ವೈರಲ್

ಪುಟ್ಟ ಸೈಕಲ್‌ನಲ್ಲಿ ಈ ಸುದೀರ್ಘ ಪ್ರಯಾಣ ಪೂರ್ಣಗೊಳಿಸುವ ಮೂಲಕ ವೆಸ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ದೇಣಿಗೆಯ ಮೂಲಕ 6,000 ಪೌಂಡ್ ಅಂದರೆ ಸುಮಾರು 5.61 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣ ಚಾರಿಟಿ ಸಂಸ್ಥೆ ಮತ್ತು ವೈಥನ್‌ಶೇವ್‌ನ ಆಸ್ಪತ್ರೆಗೆ ನೀಡಲು ಇವರು ನಿರ್ಧರಿಸಿದ್ದಾರೆ. `ಕಳೆದ ವರ್ಷ ನಾನು ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಇದಾದ ಬಳಿಕ ದಾನಕ್ಕಾಗಿ ತಾನು ಹಣ ಸಂಗ್ರಹಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದೆ' ಎಂದು ವೆಸ್ಲಿ ಹೇಳಿಕೊಂಡಿದ್ದಾರೆ.

Also Read : 38 ವರ್ಷಗಳ ಬಳಿಕ ಹೆತ್ತವರ ಮಡಿಲು ಸೇರಿದ 40 ವರ್ಷದ ಮಗ! : ಇದು ಹೃದಯವನ್ನೇ ಕರಗಿಸುವ ಕ್ಷಣ

Also Read : Bizarre Incident : ಹಲ್ಲುಜ್ಜುವಾಗ ಆಕಸ್ಮಿಕವಾಗಿ ವ್ಯಕ್ತಿಯ ಹೊಟ್ಟೆ ಸೇರಿದ ಟೂತ್‌ಬ್ರಶ್!

ಇನ್ನು ತಂದೆಯ ಸಾಧನೆಯ ಬಗ್ಗೆ ಇವರ ಹೆಣ್ಣು ಮಕ್ಕಳು ಹೆಮ್ಮೆ ಪಡುತ್ತಿದ್ದಾರಂತೆ. ಸದ್ಯ ಇವರ ಈ ಪ್ರಯಾಣದ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಫೋಟೋಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಮಾಜದ ಒಳಿತಿಗಾಗಿ ಈ ಕಾರ್ಯವನ್ನು ಕೈಗೊಂಡ ವೆಸ್ಲಿ ಅವರನ್ನು ಎಲ್ಲರೂ ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ