ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಒಂದಷ್ಟು ದೃಶ್ಯಗಳು ಬಹುಬೇಗ ನಮ್ಮ ಮೊಗದಲ್ಲೊಂದು ನಗುವಿನ ಬುಗ್ಗೆ ಅರಳಿಸುತ್ತವೆ. ಪ್ರತಿದಿನ ಇಂತಹ ಒಂದಲ್ಲ ಒಂದು ದೃಶ್ಯಗಳು ನಮಗೆ ಕಾಣಸಿಗುತ್ತವೆ. ಜೊತೆಗೆ, ಇವುಗಳು ಮನಸ್ಸಿಗೂ ಉಲ್ಲಾಸ ನೀಡುತ್ತವೆ. ಅದರಲ್ಲೂ ಕೆಲವೊಬ್ಬರ `ಜುಗಾಡ್ ಐಡಿಯಾ' ಅಚ್ಚರಿ ಮತ್ತು ಕುತೂಹಲಕ್ಕೂ ಕಾರಣವಾಗುತ್ತದೆ. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದೊಂದು ವಿಚಿತ್ರ ವಾಹನ. ಬಹುಶಃ ಹೆಚ್ಚಿನವರು ಈ ರೀತಿಯ ವಾಹನವನ್ನು ನೋಡಿರಲಿಕ್ಕಿಲ್ಲ. ಈ `ದ್ವಿಚಕ್ರ' ವಾಹನದಲ್ಲಿ ಕುಳಿತು ಆ ವ್ಯಕ್ತಿ ಬರುತ್ತಿದ್ದಂತೆಯೇ ಎಲ್ಲರೂ ಈತನನ್ನೇ ದಿಟ್ಟಿಸಿ ನೋಡುತ್ತಿದ್ದರು. ಯಾಕೆಂದರೆ, ಆ ದೃಶ್ಯವೇ ಹಾಗಿತ್ತು. ಎದುರುಗಡೆಯಿಂದ ನೋಡಿದರೆ ಇದು ಸ್ಕೂಟಿ... ಆದರೆ, ಪಕ್ಕಕ್ಕೆ ಬಂದರೆ ಸೈಕಲ್...! ಈ ರೀತಿಯ ವಿಚಿತ್ರ ವಾಹನದ ವಿಡಿಯೋ ಇದು. ನೋಡಿದ ತಕ್ಷಣ ಎಲ್ಲರ ಮೊಗದಲ್ಲೂ ನಗುವರಳಿಸುವಂತಿದೆ ಈ ದೃಶ್ಯ.
ಸೈಕಲ್ಗೆ ಸ್ಕೂಟಿಯ ಮುಂಭಾಗವನ್ನು ಜೋಡಿಸಿ ಇದನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸೈಕಲ್ನಲ್ಲಿ ವ್ಯಕ್ತಿಯೊಬ್ಬರು ಸಾಗುತ್ತಿರುವ ದೃಶ್ಯವಿದ ಮೂಲಕ 15 ಸೆಕೆಂಡುಗಳ ಈ ವಿಡಿಯೋ ಕ್ಲಿಪ್ ಅಪ್ಲೋಡ್ ಆಗಿದೆ. ಇವರು ಹೀಗೆ ಸಾಗುತ್ತಿದ್ದಾಗ ಪೊಲೀಸರು ಇವರನ್ನು ತಡೆದು ನಿಲ್ಲಿಸಿರುವುದು ಕೂಡಾ ಈ ದೃಶ್ಯದಲ್ಲಿ ಕಾಣುತ್ತದೆ.
ಇಲ್ಲಿದೆ ವಿಡಿಯೋ :
ಈ ದೃಶ್ಯ ಎಲ್ಲಿ ಮತ್ತು ಯಾವಾಗ ಸೆರೆಯಾಗಿದ್ದು ಎಂದು ಗೊತ್ತಾಗಿಲ್ಲ. ಆದರೆ, ಸಹಜವಾಗಿಯೇ ಈ ವಿಡಿಯೋ ಈಗ ಜನರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದಲೇ ಈ ದೃಶ್ಯವನ್ನು ನೋಡಿದ್ದಾರೆ. ಜೊತೆಗೆ, ಕೆಲವರು ತಮಾಷೆಯ ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ಬಹುಶಃ ಈ ಜುಗಾಡ್ ಐಡಿಯಾ ನಿಮ್ಮಲ್ಲೂ ಖುಷಿಯ ನಗು ತಂದಿರಬಹುದು.