ಕಲಿಕೆಗೆ ವಯಸ್ಸು ಇಲ್ಲ. ಮನಸ್ಸಿಗೆ ಇಷ್ಟವಾದುದ್ದನ್ನು ಯಾವ ವಯಸ್ಸಿನಲ್ಲಿ ಬೇಕಾದರೂ ಕಲಿಯಬಹುದು. ಇದಕ್ಕೆ ಇಚ್ಛಾಶಕ್ತಿ, ಪ್ರಾಮಾಣಿಕ ಪ್ರಯತ್ನ, ದೊಡ್ಡ ಗುರಿಯಷ್ಟೇ ಮುಖ್ಯ.. ಇದಕ್ಕೆ ಭಾರತದ ಹೆಮ್ಮೆಯ ಉದ್ಯಮಿ ರತನ್ ಟಾಟಾ ಅವರು ಕೂಡಾ ಸಾಕ್ಷಿ. ರತನ್ ಟಾಟಾ ಭಾರತದ ಹೆಮ್ಮೆಯ ಉದ್ಯಮಿ, ಸರಳತೆಗೆ ಹೆಸರಾದವರು. ಇವರ ಸರಳತೆಯೇ ಎಲ್ಲರಿಗೂ ಬಲು ಇಷ್ಟ. ಸೋಶಿಯಲ್ ಮೀಡಿಯಾದಲ್ಲೂ ಇವರು ಸಕ್ರಿಯ. ದೇಶದ ಸಾಕಷ್ಟು ಜನರ ಹೃದಯ ಸಿಂಹಾಸನದಲ್ಲಿ ಸ್ಥಾನ ಪಡೆದಿರುವ ರತನ್ ಟಾಟಾ ಅವರು ಅತ್ಯಂತ ಅಲ್ಪ ಅವಧಿಯಲ್ಲಿಯೇ ಇನ್ಸ್ಟಾಗ್ರಾಂನಲ್ಲೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಇವರು ಹಾಕುವ ಒಂದೊಂದು ಸ್ಫೂರ್ತಿದಾಯಕ ಪೋಸ್ಟ್ಗಳು ಕೂಡಾ ಅತ್ಯಂತ ವೇಗದಲ್ಲಿ ಎಲ್ಲರ ಗಮನ ಸೆಳೆಯುತ್ತವೆ. ಇಂತಹ ಟಾಟಾ ಅವರು ಈಗ ಇನ್ನೊಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಪಿಯಾನೋ ಮುಂದೆ ಟಾಟಾ ಅವರು ಕುಳಿತಿರುವ ಫೋಟೋ ಇದು. ಹಾಗಂತ, ಇದು ಬರೀ ಫೋಟೋ ಅಲ್ಲ, ಎಲ್ಲರಿಗೂ ಸ್ಫೂರ್ತಿ...
ಪಿಯಾನೋ ನುಡಿಸುವ ಫೋಟೋವನ್ನು ಹಂಚಿಕೊಂಡಿರುವ ಟಾಟಾ ಅವರು ತಾನು ಮತ್ತೆ ಪಿಯಾನೋ ಕಲಿಯಬೇಕು ಎಂಬ ಉತ್ಸಾಹವನ್ನು ತೋರಿದ್ದಾರೆ. `ನಾನು ಚಿಕ್ಕ ಹುಡುಗನಾಗಿದ್ದಾಗ ಸ್ವಲ್ಪ ಪಿಯಾನೋ ಕಲಿತ್ತಿದ್ದೆ. ಇನ್ನೂ ಚೆನ್ನಾಗಿ ನುಡಿಸುವುದನ್ನು ಕಲಿಯುವ ಆಲೋಚನೆಯಿಂದ ನಾನು ಇನ್ನೂ ಆಕರ್ಷಿತನಾಗಿದ್ದೇನೆ. ನನ್ನ ನಿವೃತ್ತಿಯ ನಂತರ, ನನಗೆ ಒಬ್ಬರು ಉತ್ತಮ ಪಿಯಾನೋ ಶಿಕ್ಷಕರು ಸಿಕ್ಕಿದ್ದರು. ಆದರೆ, ಎರಡೂ ಕೈಗಳಿಂದ ನುಡಿಸಲು ಅಗತ್ಯವಿರುವ ಗಮನವನ್ನು ನೀಡಲು ನನಗೆ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಪ್ರಯತ್ನಿಸಲು ನಾನು ಆಶಿಸುತ್ತೇನೆ' ಎಂದು ಕ್ಯಾಪ್ಶನ್ ಬರೆದು ಈ ಫೋಟೋವನ್ನು ಇವರು ಹಂಚಿಕೊಂಡಿದ್ದಾರೆ.
ಸಹಜವಾಗಿಯೇ ಈ ಫೋಟೋ ಎಲ್ಲರ ಗಮನ ಸೆಳೆದಿದೆ. ರತನ್ ಟಾಟಾ ಅವರ ಕಲಿಯುವ ಹುಮ್ಮಸ್ಸನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ಜತೆಗೆ, ಇದು ಎಲ್ಲರಿಗೂ ಸ್ಫೂರ್ತಿದಾಯಕವೂ ಆಗಿದೆ.