ಆ್ಯಪ್ನಗರ

ಬಿದ್ದು ಏಳುವುದೇ ಜೀವನ : ಈ ಅದ್ಭುತ ವಿಡಿಯೋದಲ್ಲಿದೆ ಬದುಕಿನ ದೊಡ್ಡ ಸಂದೇಶ

ಈ ಸಣ್ಣ ವಿಡಿಯೋ ಜೀವನಕ್ಕೊಂದು ಪಾಠವಾಗಿದೆ. ಇದೇ ಕಾರಣಕ್ಕೆ ಇದು ಹಳೆಯ ವಿಡಿಯೋವಾದರೂ ನೆಟ್ಟಿಗರಿಗೆ ಈ ವಿಡಿಯೋ ಸಖತ್ ಇಷ್ಟವಾಗಿದೆ. ವಾರದ ಆರಂಭಕ್ಕೆ ಈ ವಿಡಿಯೋ ಬಹುದೊಡ್ಡ ಸ್ಫೂರ್ತಿಯಂತಿದೆ.

Vijaya Karnataka Web 23 Nov 2020, 1:06 pm
ಜೀವನ ಎಂದ ಮೇಲೆ ಏಳು ಬೀಳು ಇದ್ದದ್ದೇ... ಆದರೆ, ಬಿದ್ದಾಗ ಅಳುತ್ತಾ ಕುಳಿತುಕೊಳ್ಳದೆ ಧೈರ್ಯದಿಂದ ಬದುಕನ್ನು ಎದುರಿಸಬೇಕು. ಇಂತಹ ಛಲ, ಹುಮ್ಮಸ್ಸು, ಉತ್ಸಾಹ, ಪ್ರಾಮಾಣಿಕ ಪ್ರಯತ್ನ ಎಲ್ಲರಿಗೂ ಇರಬೇಕು. ಆಗಲೇ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆದರೆ, ನಾವು ಬಹುತೇಕರು ಸೋಲಿಗೆ ಬಹುಬೇಗ ಕುಗ್ಗುತ್ತೇವೆ. ಆದರೆ, ಸೋಲೇ ಗೆಲುವಿನ ಸೋಪಾನ ಎಂಬುದನ್ನು ನಾವೆಲ್ಲಾ ಅರಿತುಕೊಳ್ಳಬೇಕು. ಬದುಕಿನಲ್ಲಿ ಉನ್ನತ ಗುರಿ ಹೊಂದಿ ಸಾಗುವಾಗ ಎಡರು ತೊಡರುಗಳು, ಏಳು ಬೀಳುಗಳು ಸಹಜ. ಆದರೆ, ಹೀಗೆ ಬಿದ್ದರೂ ಎದ್ದು ಸಮಸ್ಯೆಗಳನ್ನು ಎದುರಿಸುವ ಛಲ ನಮ್ಮಲ್ಲಿ ಹುಟ್ಟಬೇಕು. ಆ ಛಲ ಹೇಗಿರಬೇಕು ಎಂಬುದಕ್ಕೆ ಸಾಕ್ಷಿ ಈ ವಿಡಿಯೋ.
Vijaya Karnataka Web Image  by David Mark from Pixabay
Image by David Mark from Pixabay


Also Read : ಜೀವದ ಹಂಗು ತೊರೆದು ಆಸ್ಪತ್ರೆಯ ಅಗ್ನಿ ಆಕಸ್ಮಿಕದಿಂದ ನಾಲ್ವರ ಜೀವ ಉಳಿಸಿದ ಬುದ್ಧಿವಂತ ಶ್ವಾನ

ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ತಮ್ಮ @susantananda3 ಟ್ವಿಟ್ಟರ್ ಖಾತೆಯಲ್ಲಿ ಅದ್ಭುತ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಾರದ ಆರಂಭಕ್ಕೆ ಇದು ಬಹುದೊಡ್ಡ ಸ್ಫೂರ್ತಿಯಾಗಿದೆ.


Also Read : ಮೀನುಗಳಿಗೆ ಆಹಾರ ಹಾಕುವ ಹಂಸ...! : ಈ ಬುದ್ಧಿವಂತಿಕೆಗೆ ಬೆರಗಾಗಲೇಬೇಕು

ಅದೊಂದು ಓಟದ ಸ್ಪರ್ಧೆ. ಟ್ರ್ಯಾಕ್ ಮೇಲೆ ಎಲ್ಲಾ ಓಟಗಾರರು ಓಡಲು ಸಜ್ಜಾಗಿದ್ದಾರೆ. ಅಂತೆಯೇ ಓಟವೂ ಶುರುವಾಗಿತ್ತು. ಆದರೆ, ಎಲ್ಲಾ ಸ್ಪರ್ಧಾಳುಗಳು ಗುರಿಯತ್ತ ವೇಗವಾಗಿ ಓಡುತ್ತಿದ್ದರೆ ಒಬ್ಬರು ಓಟಗಾರರು ಆರಂಭದಲ್ಲೇ ಎಡವಿ ಬಿದ್ದಿದ್ದರು. ಹಾಗಂತ, ಎಡವಿ ಬಿದ್ದ ಓಟಗಾರ ಧೃತಿಗೆಡಲಿಲ್ಲ ಅಥವಾ ಓಟದಿಂದ ಹಿಂದೆ ಸರಿಯಲಿಲ್ಲ. ಬಿದ್ದ ಓಟಗಾರ ಅಷ್ಟೇ ವೇಗದಲ್ಲಿ ಎದ್ದು ಮತ್ತೆ ಓಡಲು ಆರಂಭಿಸಿದ್ದರು. ಈ ಓಟ ಹೇಗಿತ್ತು ಎಂದರೆ ಇವರಿಗಿಂತ ಮುಂದೆ ಓಡಿದವರೆಲ್ಲಾ ಅರೆಕ್ಷಣದಲ್ಲಿ ಇವರ ಹಿಂದೆ ಉಳಿದು ಬಿಟ್ಟರು...! ಅಷ್ಟು ವೇಗದ ಓಟವದು...


Also Read : ಸುಸ್ತಾಗಿ ಕಾಲುಜಾರಿ ಬೀಳುತ್ತಿದ್ದರೂ ಪ್ರಯತ್ನ ಬಿಡದ ಮರಿಯಾನೆ : ಈ ಓಟ, ಆಟದ ದೃಶ್ಯವೇ ಸುಂದರ

ಛಲ ಎಂದರೆ ಇದು. ಬದುಕಿನಲ್ಲಿ ಇಂತಹ ಛಲ ಬೇಕು. ಸ್ಪಷ್ಟ ಗುರಿಯತ್ತ ದೃಷ್ಟಿ ಇದ್ದಾಗ ಮತ್ತು ದೃಢ ನಿಶ್ಚಯ, ಪ್ರಾಮಾಣಿಕ ಪ್ರಯತ್ನ ಇದ್ದಾಗ ಮಾತ್ರ ಇಂತಹ ಸಾಧನೆ ಸಾಧ್ಯ. ನಿರೀಕ್ಷೆಯಂತೆಯೇ ಈ ಸ್ಫೂರ್ತಿದಾಯಕ ವಿಡಿಯೋ ಎಲ್ಲರಿಗೂ ಇಷ್ಟವಾಗಿದೆ. ವಾರದ ಶುಭಾರಂಭಕ್ಕೆ ಇದು ಇನ್ನಷ್ಟು ಉತ್ಸಾಹ ತುಂಬಿದೆ. ಈಗಾಗಲೇ ಸಾಕಷ್ಟು ಜನ ಈ ವಿಡಿಯೋ ವೀಕ್ಷಿಸಿದ್ದು, ಮೆಚ್ಚುಗೆಯ ಪ್ರತಿಕ್ರಿಯೆಯನ್ನೂ ಕೊಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ