ಆ್ಯಪ್ನಗರ

20 ವರ್ಷದ ಬಳಿಕ ಮಾಲಿಕರ ಕೈ ಸೇರಿತು ಕಳೆದು ಹೋಗಿದ್ದ ಪರ್ಸ್...!

ಕಳೆದು ಹೋಗಿದ್ದ ಪರ್ಸ್ ಬರೋಬ್ಬರಿ 20 ವರ್ಷದ ಬಳಿಕ ಮಾಲಿಕರ ಕೈ ಸೇರಿದೆ. ಈ ಫೋಟೋವನ್ನು ಪೊಲೀಸರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Vijaya Karnataka Web 27 Aug 2020, 5:45 pm
ಯಾವುದೇ ವಸ್ತುಗಳನ್ನು ಕಳೆದುಕೊಂಡಾಗ ಆಗುವ ಚಡವಡಿಕೆ, ಆತಂಕ ಎಂತಹದ್ದು ಎಂಬುದು ಎಲ್ಲರಿಗೂ ಒಂದಲ್ಲ ಒಂದು ಸಲ ಅನುಭವಕ್ಕೆ ಬಂದೇ ಬಂದಿರುತ್ತದೆ. ತಮ್ಮ ಬದುಕಿನ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡ ದಿನ ಆಗುವ ನೋವು ಅಷ್ಟಿಷ್ಟಲ್ಲ. ಆದರೆ, ಹೀಗೆ ತುಂಬಾ ಅಗತ್ಯವಾಗಿದ್ದ ವಸ್ತು ಕಳೆದು ಹೋಗಿ ಅದೆಷ್ಟೋ ವರ್ಷಗಳ ಬಳಿಕ ಸಿಕ್ಕರೆ ಆ ಖುಷಿ ಹೇಗಿರುತ್ತದೆ...? ಖಂಡಿತಾ ಈ ಖುಷಿಯನ್ನು ಬಣ್ಣಿಸಲು ಸಾಧ್ಯವಿಲ್ಲ.
Vijaya Karnataka Web Lost Wallet
| Image Courtesy : Facebook/@angardasiochana


ಇತ್ತೀಚಿನ ದಿನಗಳಲ್ಲಿ ಈ ರೀತಿ ಕೆಲವು ಘಟನೆಗಳು ನಡೆದಿದ್ದವು. ಒಂದು ತಿಂಗಳ ಹಿಂದೆ ಮುಂಬೈ ಪೊಲೀಸರು ಹದಿನಾಲ್ಕು ವರ್ಷದ ಹಿಂದೆ ರೈಲಿನಲ್ಲಿ ಕಳೆದು ಹೋಗಿದ್ದ ಪರ್ಸನ್ನು ಮಾಲಿಕರಿಗೆ ಒಪ್ಪಿಸಿದ್ದರು. ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು. ಇದೀಗ ಐರ್ಲೆಂಡ್ ಪೊಲೀಸರು ಕೂಡಾ ಇಂತಹದ್ದೇ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದಾರೆ. ಬರೋಬ್ಬರಿ 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ಪರ್ಸನ್ನು ಐರ್ಲೆಂಡಿನ ಪೊಲೀಸರು ಅದರ ಮಾಲಿಕರಿಗೆ ಒಪ್ಪಿಸಿದ್ದಾರೆ.

Also Read : ಬೆಕ್ಕಿಗೆ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಜವಾಬ್ದಾರಿ! : ಕ್ಯೂಟ್ ಫೋಟೋಗಳು ವೈರಲ್

ಈ ಬಗ್ಗೆ ಪೊಲೀಸರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. `20 ವರ್ಷ ಹಿಂದಿನ ರಹಸ್ಯವನ್ನು 24 ಗಂಟೆಗಳಲ್ಲಿ ಪರಿಹರಿಸಲಾಗಿದೆ' ಎಂಬ ವಾಕ್ಯದಿಂದ ಪೊಲೀಸರ ಈ ಪೋಸ್ಟ್‌ ಶುರುವಾಗುತ್ತದೆ. ವ್ಯಕ್ತಿಯೊಬ್ಬರು ತಮಗೆ ಸಿಕ್ಕ ಪರ್ಸನ್ನು ಸ್ಟೇಷನ್‌ಗೆ ತಂದು ಒಪ್ಪಿಸಿದ್ದರಿಂದ ಈ ಪರ್ಸ್‌ನ ಕತೆ ಹೊರಬಿದ್ದಿದೆ.

Also Read : `2020 ಅತ್ಯುತ್ತಮವಾಗಿಲ್ಲ'ವೆಂದು ಮದುವೆಯಲ್ಲಿ ವರ ತಮಾಷೆಗೆ ಹೇಳಿದಾಗಲೇ ಅಬ್ಬರಿಸಿತ್ತು ಗುಡುಗು, ಮಿಂಚು!


Also Read : ಅಬ್ಬಬ್ಬಾ...! ಕಮೋಡ್‌ನೊಳಗೆ ಹರಿದಾಡುತ್ತಿತ್ತು ಹಾವು...!

ದೀರ್ಘಕಾಲದವರೆಗೆ ಮಣ್ಣಿನಡಿ ಹುದುಗಿದ್ದ ಈ ಪರ್ಸನ್ನು ಮೊನ್ನೆ ವ್ಯಕ್ತಿಯೊಬ್ಬರು ಠಾಣೆಗೆ ತಂದೊಪ್ಪಿಸಿದ್ದರು. ಈ ಪರ್ಸನ್ನು ಕಂಡ ಪೊಲೀಸರು ಪರಿಶೀಲನೆ ನಡೆಸಿದಾಗ ಅದರಲ್ಲಿ ವೀಸಾ ಕ್ರೆಡಿಟ್ ಕಾರ್ಡ್ ಮತ್ತು ವಿದ್ಯಾರ್ಥಿ ಗುರುತಿನ ಚೀಟಿ ಇತ್ತು. ಹೀಗಾಗಿ, ಇದರಲ್ಲಿದ್ದ ಮಾಹಿತಿಯನ್ವಯ ಹುಡುಕಾಟ ನಡೆಸಿದ ಪೊಲೀಸರು ಈ ಪರ್ಸ್‌ನ್ನು ಮೂಲ ಮಾಲಿಕರಿಗೆ ಒಪ್ಪಿಸಿದ್ದಾರೆ. ಈ ಮೂಲಕ ಎರಡು ದಶಕದ ಹಿಂದೆ ಕಳೆದು ಹೋಗಿದ್ದ ಪರ್ಸ್ ಮತ್ತೆ ಮಾಲಿಕರ ಕೈಸೇರಿದೆ. ಖಂಡಿತಾ ಈ ಪರ್ಸ್ ಸ್ವೀಕರಿಸುವಾಗ ಈ ಮಾಲಿಕ ಪುಳಕಗೊಂಡಿರಬಹುದು. ಜೊತೆಗೆ, ಪರ್ಸ್ ಕಳೆದುಕೊಂಡ ದಿನ ಇವರು ಅನುಭವಿಸಿದ್ದ ಚಡಪಡಿಕೆಯ ನೆನಪುಗಳು ಸುರುಳಿ ಬಿಚ್ಚಿರಬಹುದು... ಸದ್ಯ ಪೊಲೀಸರ ಈ ಪೋಸ್ಟ್‌ ಸಾಕಷ್ಟು ವೈರಲ್ ಆಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ