ಆ್ಯಪ್ನಗರ

ನಿರ್ಭಯಾಗೆ ನ್ಯಾಯ : ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರ ಸಂತಸ...

ನಿರ್ಭಯಾ ಹಂತಕರು ನೇಣುಗಂಬಕ್ಕೇರಿದ್ದಾರೆ. ಈ ಮೂಲಕ ನಿರ್ಭಯಾಗೆ ನ್ಯಾಯ ಸಿಕ್ಕಿದೆ. ಇದು ನೆಟ್ಟಿಗರಲ್ಲಿ ಸಮಾಧಾನ ತಂದಿದೆ.

Vijaya Karnataka Web 20 Mar 2020, 2:05 pm
2012ರ ಡಿಸೆಂಬರ್... ರಾಜಧಾನಿ ದೆಹಲಿಯಲ್ಲಿ ಅದೊಂದು ಪೈಶಾಚಿಕ ಕೃತ್ಯ ನಡೆದಿತ್ತು. ಅದೇ ನಿರ್ಭಯಾಳದ ಅತ್ಯಾಚಾರ ಮತ್ತು ಕೊಲೆ. ಮಾನವೀಯತೆಯನ್ನೇ ಮರೆತು ಕಾಮುಕರು ಅಂದು ಹಸಿದ ಹೆಬ್ಬುಲಿಗಳಂತೆ ಚಲಿಸುತ್ತಿದ್ದ ಬಸ್ಸಿನಲ್ಲೇ ನಿರ್ಭಯಾಳ ಮೇಲೆರಗಿದ್ದರು. ಅತ್ಯಂತ ಭೀಕರವಾಗಿ ಯುವತಿಯ ಅತ್ಯಾಚಾರವೆಸಗಿದ್ದ ಪಾಪಿಗಳು ಬಳಿಕ ಆಕೆಯ ಸಾವಿಗೂ ಕಾರಣರಾಗಿದ್ದರು.
Vijaya Karnataka Web nirbhaya
ನಿರ್ಭಯಾ ಹಂತಕರು| Image Courtesy : Times of India


Also Read : ಬೇಕಿತ್ತಾ ಇದೆಲ್ಲಾ...? ಸುಮ್ಮನೆ ದೂರದಲ್ಲಿ ನಿಂತಿದ್ದರೂ ಏನೂ ಆಗುತ್ತಿರಲಿಲ್ಲ...!

ಅಂದು ಈ ಘಟನೆ ಇಡೀ ದೇಶವೇ ಕೆರಳಿ ಕೆಂಡವಾಗಿತ್ತು. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂಬ ಕೂಗು ಬಲವಾಗಿತ್ತು. ಈಗ ಆ ಕೂಗಿಗೆ ಜಯ ಸಿಕ್ಕಿದೆ. ನೇಣು ಕುಣಿಕೆಯಲ್ಲಿ ನಾಲ್ವರು ಪಾಪಿಗಳು ಉಸಿರು ಚೆಲ್ಲಿದ್ದಾರೆ. ಈ ಮೂಲಕ ಅತ್ಯಾಚಾರದಂತಹ ಹೀನ ಕೃತ್ಯಕ್ಕೆ ಮುಂದಾಗುವ ಕ್ರಿಮಿಗಳ ಎದೆಯಲ್ಲಿ ಭಯ ಹುಟ್ಟಲು ಕಾರಣರಾಗಿದ್ದಾರೆ.

Also Read : ಪಾರ್ಟಿ ಮಾಡಿ ಫುಲ್ ಟೈಟಾಗಿ ಮಲಗಿವೆಯಂತೆ ಈ ಎರಡು ಆನೆಗಳು...!

ಸುಮಾರು ಎಂಟು ವರ್ಷಗಳ ಕಾನೂನು ಹೋರಾಟದ ಬಳಿಕ ನಿರ್ಭಯಾ ಕುಟುಂಬಕ್ಕೆ ಜಯ ಸಿಕ್ಕಿದೆ. ಗಲ್ಲಿನಿಂದ ಪಾರಾಗಲು ಕಡೇ ಕ್ಷಣದವರೆಗೂ ಬಗೆಬಗೆ ಕಸರತ್ತು ನಡೆಸಿದ್ದ ಹಂತಕರ ಪ್ರಯತ್ನ ಕೈಗೂಡದೆ ನ್ಯಾಯದ ಕೈ ಮೇಲಾಗಿದೆ. ಈ ಮೂಲಕ ದೇಶದ ಬಹುತೇಕ ಮಂದಿಯ ಮನಸ್ಸಿನಲ್ಲಿ ಸಮಾಧಾನ ಮೂಡಿದೆ. ಇದೇ ಸಂಭ್ರಮ ನೆಟ್ಟಿಗರ ಟ್ವೀಟ್‌ನಲ್ಲಿ ವ್ಯಕ್ತವಾಗಿದೆ.

Also Read : ವ್ಹಾವ್ ಸೂಪರ್...! : ಸಿಂಹದೊಂದಿಗೆ ಹೋರಾಡಿದ ಮಹಿಳಾ ಪೊಲೀಸ್

ಕೊಲೆ, ಅತ್ಯಾಚಾರದಂತಹ ಹೀನ ಕೃತ್ಯಗಳು ಕೊನೆಯಾಗಬೇಕು. ಇಂತಹ ಪ್ರಯತ್ನಕ್ಕೆ ಕೈಹಾಕುವವರಿಗೆ ಕಾನೂನಿನ ಭಯ ಇರಲೇಬೇಕು. ಕಾನೂನಿನ ಭಯ ಎದೆಯಲ್ಲಿ ಹುಟ್ಟಿದಾಗ ಮಾತ್ರ ಇಂತಹ ಪೈಶಾಚಿಕ ಕೃತ್ಯಗಳು ಕಡಿಮೆಯಾಗಲಿವೆ. ಅದನ್ನೇ ನೆಟ್ಟಿಗರು ಕೂಡಾ ಒತ್ತಿ ಒತ್ತಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ