ಆ್ಯಪ್ನಗರ

ಮಾಸ್ಕ್‌ ಧರಿಸದೇ ಇರುವವರಿಗೆ `ಏಟು' : ತಮಾಷೆಯ ವಿಡಿಯೋ ಸಖತ್ ವೈರಲ್

ಮಾಸ್ಕ್‌ ಧರಿಸದೇ ಇದ್ದವರಿಗೆ `ಚುರುಕು' ಮುಟ್ಟಿಸುವ ತಮಾಷೆಯ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಪ್ರಾಂಕ್ ವಿಡಿಯೋಗೆ ನೆಟ್ಟಿಗರಿಂದ ಒಳ್ಳೆಯ ರೆಸ್ಪಾನ್ಸ್‌ ಸಿಕ್ಕಿದೆ.

Vijaya Karnataka Web 4 Jan 2021, 7:31 pm
ಕೊರೊನಾ ವೈರಸ್ ಜನರನ್ನು ಎಷ್ಟು ಕಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಕಳೆದ ವರ್ಷ ಶುರುವಾದ ಈ ರಕ್ಕಸ ವೈರಾಣುವಿನ ಆತಂಕ ಇನ್ನೂ ಕೊನೆಯಾಗಿಲ್ಲ. ಇದರ ನಡುವೆ ಈಗ ರೂಪಾಂತರಿ ವೈರಸ್ ಕೂಡಾ ದಾಂಗುಡಿ ಇಟ್ಟು ಭೀತಿ ಹುಟ್ಟಿಸಿದೆ. ಪರಿಸ್ಥಿತಿ ಹೀಗಿದ್ದರೂ ಕೆಲವರು ಈ ವೈರಾಣುವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಈಗಲೂ ಕಡ್ಡಾಯ. ಆದರೆ, ಒಂದಷ್ಟು ಮಂದಿ ಈ ಎರಡನ್ನೂ ಸಂಪೂರ್ಣ ಮರೆತಂತಿದೆ.
Vijaya Karnataka Web Image by leo2014 from Pixabay
| Representative image | Image by leo2014 from Pixabay


Also Read : ಪುತ್ರಿ ಡಿಎಸ್‌ಪಿ, ಅಪ್ಪ ಸರ್ಕಲ್‌ ಇನ್ಸ್‌ಪೆಕ್ಟರ್ : ಮಗಳಿಗೆ ಸೆಲ್ಯೂಟ್ ಮಾಡಿದ ತಂದೆಯ ಹೃದಯಸ್ಪರ್ಶಿ ಫೋಟೋ ವೈರಲ್

ಹೀಗೆ ಮಾಸ್ಕ್‌ ಇಲ್ಲದೆ ಓಡಾಡುವವರಿಗೆ ಇಲ್ಲೊಬ್ಬರು ಯುಟ್ಯೂಬರ್ ಬಿಸಿ ಮುಟ್ಟಿಸಿದ್ದಾರೆ. ಈ ತಮಾಷೆಯ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಯುಟ್ಯೂಬರ್ ಜುಬೇರ್ ಖಾನ್ ಅವರ `ಮಾಸ್ಕ್‌ ಕಾ ಚಲನ್' ಪ್ರಾಂಕ್ ವಿಡಿಯೋ ಈಗ ನೆಟ್ಟಿಗರ ಗಮನ ಸೆಳೆದಿದೆ. ಸಾರ್ವಜನಿಕ ಉದ್ಯಾನವನದಲ್ಲಿ ಮಾಸ್ಕ್‌ ಧರಿಸದೆ ಓಡಾಡುವ ಯುವಕನಿಗೆ ಪೊಲೀಸ್ ಒಬ್ಬರು ಹೊಡೆಯುವ ರೀತಿಯ ವಿಡಿಯೋ ಇದು. ಹೀಗೆ ಪೊಲೀಸ್ ವೇಷಧಾರಿ ಯುವಕ ಮಾಸ್ಕ್‌ ಧರಿಸದೇ ಓಡಾಡುವ ತಮ್ಮ ತಂಡದ ಸದಸ್ಯನಿಗೆ ಹೊಡೆದಾಗ ಮಾಸ್ಕ್ ಧರಿಸದೇ ಇದ್ದ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ದೃಶ್ಯ ಈ ತಮಾಷೆಯ ವಿಡಿಯೋದಲ್ಲಿದೆ.


Also Read : ಮಾಜಿ ಕೆಲಸಗಾರನ ಸೇಡಿಗೆ 43.80 ಕೋಟಿ ರೂ. ಮೌಲ್ಯದ ಐಷಾರಾಮಿ ವಾಹನಗಳು ಜಖಂ...!

ಸದ್ಯ ಯುಟ್ಯೂಬ್, ಟ್ವಿಟ್ಟರ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ. ಸಾಕಷ್ಟು ಜನ ಈ ವಿಡಿಯೋವನ್ನು ನೋಡಿ ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ.

Also Read : 2 ದಿನವಾದರೂ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್‌ ಸ್ವೀಕರಿಸದ ಹಳೇ ಬಾಸ್‌ಗೆ ಯುವಕನ ಕೊಲೆ ಬೆದರಿಕೆ!

ಈ ವಿಡಿಯೋವನ್ನು ನೋಡಿದಾಗ ಇದು ತಮಾಷೆ ಎನಿಸಿದರೂ ಇದು ಹೇಳಲು ಹೊರಟಿರುವ ವಿಷಯ ಮಾತ್ರ ಗಂಭೀರವಾಗಿದ್ದಾಗಿದೆ. ಯಾಕೆಂದರೆ, ಮಾಸ್ಕ್‌ ಧರಿಸದೇ ಓಡಾಡುವುದು ಖಂಡಿತಾ ಸರಿಯಲ್ಲ. ನಮ್ಮ ಸುರಕ್ಷತೆ ಮತ್ತು ನಮ್ಮ ಸುತ್ತಮುತ್ತ ಇರುವವರ ಸುರಕ್ಷತೆಯ ದೃಷ್ಟಿಯಿಂದ ಎಲ್ಲರೂ ಮಾಸ್ಕ್‌ ಧರಿಸುವುದು ತುಂಬಾ ಒಳ್ಳೆಯದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ