ಆ್ಯಪ್ನಗರ

ಹೇರ್‌ಕಟ್ ವೇಳೆ ಕೆಂಡದಂತಹ ಕೋಪ : ಮುದ್ದು ಬಾಲಕನ ವಿಡಿಯೋ ಮೂಲಕ ಪೊಲೀಸರ ಜಾಗೃತಿ!

ಮುಂಬೈ ಪೊಲೀಸರು ಹಂಚಿಕೊಂಡಿರುವ ಬಾಲಕನ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ವೈರಲ್ ವಿಡಿಯೋವನ್ನು ಪೊಲೀಸರು ಜಾಗೃತಿಗಾಗಿ ಬಳಸಿದ್ದಾರೆ.

Vijaya Karnataka Web 8 Dec 2020, 12:33 pm
ನೀವು ಇಂಟರ್‌ನೆಟ್‌ನಲ್ಲಿ ಸಕ್ರಿಯರಾಗಿದ್ದವರಾದರೆ ಖಂಡಿತಾ ಈ ಪುಟಾಣಿಯನ್ನು ನೋಡದೆ ಇರಲು ಸಾಧ್ಯವೇ ಇಲ್ಲ. ಕಳೆದ ತಿಂಗಳು ಈ ಪುಟಾಣಿ ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದ. ತನ್ನ ಸುಂದರ ತಲೆ ಕೂದಲನ್ನು ಕಟ್ ಮಾಡುವಾಗ ಕೋಪದಿಂದ ಕೊತ ಕೊತ ಕುಡಿಯುತ್ತಿದ್ದ ಬಾಲಕ ಕ್ಷೌರಿಕರ ವಿರುದ್ಧ ತನ್ನ ಮುದ್ದಾದ ಕೋಪ ಪ್ರದರ್ಶಿಸಿದ್ದ. ತಲೆ ಕೂದಲು ಸ್ವಲ್ಪ ಜಾಸ್ತಿಯೇ ಕಟ್ ಮಾಡಿದರು ಎಂದು ಕೋಪಗೊಂಡ ಪುಟಾಣಿಯ ಮುಖಭಾವ ಅಂದು ಎಲ್ಲರ ಗಮನ ಸೆಳೆದಿತ್ತು. ಫೇಸ್‌ಬುಕ್, ಟ್ವಿಟ್ಟರ್, ವಾಟ್ಸಾಪ್ ಸೇರಿದಂತೆ ಹಲವು ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹರಿದಾಡುತ್ತಿತ್ತು. ಇದೀಗ ಈ ಪುಟಾಣಿಯ ವಿಡಿಯೋವನ್ನು ಮುಂಬೈ ಪೊಲೀಸರೂ ತಮ್ಮ ಇನ್‌ಸ್ಟಾಗ್ರಾಂ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ...
Vijaya Karnataka Web Anushrut
| Screengrab from video | Courtesy : @Anup20992699/Twitter


Also Read : ಹೇರ್‌ಕಟ್ ವೇಳೆ ಬಾಲಕನ ಕೆಂಡದಂತಹ ಕೋಪ : ವೈರಲ್ ವಿಡಿಯೋಗೆ ಬಾಲಿವುಡ್ ಹಾಡಿನ ಟಚ್...!

View this post on Instagram A post shared by Mumbai Police (@mumbaipolice)

ಮಾಸ್ಕ್‌ ಧರಿಸುವುದು ಈಗ ಕಡ್ಡಾಯ. ಕೊರೊನಾ ಅಬ್ಬರ ಶುರುವಾದ ಬಳಿಕ ಮಾಸ್ಕ್‌ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿ ಹೋಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಇದು ಕೂಡಾ ಒಳ್ಳೆಯ ಉಪಾಯವಾಗಿದೆ. ಪರಿಸ್ಥಿತಿ ಹೀಗಿರುವಾಗ ಕೆಲವರಿಗೆ ಮಾಸ್ಕ್‌ನ ಗಂಭೀರತೆಯ ಬಗ್ಗೆಯ ಗೊತ್ತಿಲ್ಲ. ಹೀಗಾಗಿ, ಫೇಸ್‌ಮಾಸ್ಕ್‌ ಧರಿಸದೆಯೂ ಜನ ಮನೆಯಿಂದ ಆಚೆ ಹೋಗುತ್ತಿದ್ದಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಮುಂಬೈ ಪೊಲೀಸರು ಈ ಪುಟಾಣಿಯ ವಿಡಿಯೋವನ್ನು ಬಳಸಿಕೊಂಡಿದ್ದಾರೆ.


Also Read : ಬಿಳಿ ಸಿಂಹವನ್ನು ನೋಡಿದ್ದೀರಾ? : ಎಲ್ಲರನ್ನೂ ಸೆಳೆಯುತ್ತಿದೆ ಈ ಗಾಂಭೀರ್ಯದ ನೋಟ!


ಈ ಮುದ್ದು ಪುಟಾಣಿ ತನ್ನ ಕೋಪ ಪ್ರದರ್ಶಿಸುವ ವಿಡಿಯೋವನ್ನು ಬಳಸಿಕೊಂಡಿರುವ ಪೊಲೀಸರು `ಫೇಸ್‌ಮಾಸ್ಕ್‌ ಧರಿಸದೆ ಹೊರಗೆ ಹೋಗುವ ಜನರನ್ನು ಕಂಡಾಗ ಜವಾಬ್ದಾರಿಯುತ ಮುಂಬೈ ವಾಸಿಗಳು ಹೀಗೆ ಕೋಪಗೊಳ್ಳುತ್ತಾರೆ' ಎಂಬರ್ಥದಲ್ಲಿ ಕ್ಯಾಪ್ಶನ್ ಬರೆದಿದ್ದಾರೆ. ಸದ್ಯ ಈ ಪೋಸ್ಟ್‌ ಕೂಡಾ ವೈರಲ್ ಆಗುತ್ತಿದೆ.


Also Read : ಅಡುಗೆ ಕೋಣೆಯ ಬಾಗಿಲ ಹಿಂದೆ ಕಾಣಿಸಿತ್ತಂತೆ ವಿಚಿತ್ರ ಆಕೃತಿ! : ಮನೆ ತೊರೆಯಲು ನಿರ್ಧರಿಸಿದ ವ್ಯಕ್ತಿ...!

ಈ ಪುಟಾಣಿಯ ಹೆಸರು ಅನುಶ್ರುತ್. ತನ್ನ ಪುತ್ರನ ಈ ವಿಡಿಯೋವನ್ನು ಅನುಪ್ ಎಂಬವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗೆ ಎಲ್ಲರೂ ಫಿದಾ ಆಗಿದ್ದರು. ಸೆಲೆಬ್ರಿಟಿಗಳು ಕೂಡಾ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ಇದಾದ ಬಳಿಕ ಯುಟ್ಯೂಬರ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರ ಜಾಯ್ ರಾಯ್ ಎಂಬವರು ಪುಟಾಣಿಯ ಈ ಮಾತಿಗೆ ಹಿಂದಿಯ ಎರಡು ಜನಪ್ರಿಯ ಹಾಡುಗಳನ್ನು ಹಾಕಿದ್ದರು. ಈ ವಿಡಿಯೋ ಕೂಡಾ ಸಾಕಷ್ಟು ಗಮನ ಸೆಳೆದಿತ್ತು.

View this post on Instagram A post shared by JAY R (@jayroy_11)

View this post on Instagram A post shared by JAY R (@jayroy_11)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ