ಆ್ಯಪ್ನಗರ

ಬೆರಗು ಮೂಡಿಸುವಂತಹ ಜಿಮ್ನಾಸ್ಟಿಕ್ ಕೌಶಲ್ಯ : ಅಚ್ಚರಿಯ ವಿಡಿಯೋ ಇದು

ಒಲಿಂಪಿಕ್ ಪದಕ ವಿಜೇತೆಯೊಬ್ಬರ ಜಿಮ್ನಾಸ್ಟಿಕ್ ಕೌಶಲ್ಯ ಎಲ್ಲರನ್ನೂ ಬೆರಗುಗೊಳಿಸಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಗಮನ ಸೆಳೆದಿದೆ.

Vijaya Karnataka Web 16 Nov 2020, 5:30 pm
ಜಿಮ್ನಾಸ್ಟಿಕ್... ಇದೊಂದು ಅದ್ಭುತ ಕೌಶಲ್ಯ. ಎಲ್ಲರನ್ನೂ ಬೆರಗು ಮೂಡಿಸುವ ತಾಕತ್ತು ಜಿಮ್ನಾಸ್ಟ್‌ಗಳಿಗಿರುತ್ತದೆ. ಆದರೆ, ಈಗ ಈ ಜಿಮ್ನಾಸ್ಟಿಕ್‌ನ ವ್ಯಾಪ್ತಿ ಇನ್ನಷ್ಟು ವಿಸ್ತಾರವಾಗಿದೆ. ಫಿಟ್ನೆಸ್‌ ಪ್ರಿಯರಿಗೂ ಇದು ಬಲು ಆಪ್ತವಾದ ಕೌಶಲ್ಯ. ಅಭ್ಯಾಸಿಗಳ ಮನೋಬಲವನ್ನು ಹೆಚ್ಚಿಸುವ ಜೊತೆಗೆ ಮೂಳೆಗಳು, ಸ್ನಾಯುಗಳಿಗೆ ಉತ್ತಮ ವ್ಯಾಯಾಮವನ್ನೂ ನೀಡುವ ಕಲೆ ಇದು. ಇದೇ ಕಾರಣಕ್ಕೆ ಇತ್ತೀಚಿಗೆ ಜಿಮ್‌ ಕೇಂದ್ರಗಳಲ್ಲೂ ಜಿಮ್ನಾಸ್ಟಿಕ್‌ನನ್ನು ಪರಿಚಯಿಸಲಾಗುತ್ತದೆ. ಫಿಟ್ನೆಸ್ ಪ್ರಿಯರು ಹೆಚ್ಚೆಚ್ಚು ಜಿಮ್ನಾಸ್ಟಿಕ್‌ನತ್ತ ವಾಲುತ್ತಿದ್ದಾರೆ.
Vijaya Karnataka Web Chellsie Memmel
| Screengrab from video | Courtesy : @CMemmel/Twitter


Also Read : ಈ ಹಕ್ಕಿ ನೀರು ಕುಡಿಯುವ ಸ್ಟೈಲೇ ಡಿಫ್ರೆಂಟ್: ನೆನಪಾಗುತ್ತದೆ ನೀರಿನ ಬಿಂದಿಗೆಗೆ ಕಲ್ಲು ಹಾಕುವ ಕಾಗೆಯ ಕತೆ

ಇಂತಹ ಅಪೂರ್ವ ಕ್ಷೇತ್ರದಲ್ಲಿ ಕೆಲವರು ಇನ್ನಷ್ಟು ಪರಿಪಕ್ವತೆ ಪಡೆದುಕೊಂಡಿರುತ್ತಾರೆ. ಸತತ ಅಭ್ಯಾಸ, ಪರಿಶ್ರಮದಿಂದ ಮಾತ್ರ ಈ ಪರಿಪಕ್ವತೆ ಗಳಿಸಲು ಸಾಧ್ಯ. ಇಂತಹ ಪ್ರತಿಭಾವಂತರ ಹಲವು ವಿಡಿಯೋಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತದೆ. ಈ ಎಲ್ಲಾ ವಿಡಿಯೋಗಳು ಒಂದು ಕ್ಷಣ ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಬಹುಶಃ ಈ ವಿಡಿಯೋವನ್ನು ಬಹುತೇಕರು ಎರಡೆರಡು ಬಾರಿ ನೋಡಿ ಖುಷಿಪಟ್ಟಿದ್ದಾರೆ.


Also Read : ಮಡಿಲಲ್ಲಿ ಮಲಗಿರುವ ಮುದ್ದು ತಂಗಿಗಾಗಿ ಪುಟಾಣಿ ಅಣ್ಣನ ಲಾಲಿ ಹಾಡು: ಅದ್ಭುತ ದೃಶ್ಯವಿದು

ಇದು ಒಲಿಂಪಿಕ್ ಪದಕ ವಿಜೇತೆ ಚೆಲ್ಸಿ ಮೆಮೆಲ್ ಅವರ ವಿಡಿಯೋ. ಇವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ದೈನಂದಿನ ಅಭ್ಯಾಸದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಚೆಲ್ಸಿ ಪ್ರದರ್ಶಿಸುವ ಕಸರತ್ತಿನ ವಿಡಿಯೋ ಎಲ್ಲರ ಗಮನ ಸೆಳೆದಿದೆ.


Also Read : ನಿಜಕ್ಕೂ ಹೃದಯ ವಿದ್ರಾವಕ! : ಹೃದಯ ರವಾನೆ ಮಾಡುತ್ತಿದ್ದ ಹೆಲಿಕಾಪ್ಟರ್ ಅಪಘಾತ!

ನವೆಂಬರ್ 15ರಂದು ಅಪ್ಲೋಡ್ ಆದ ವಿಡಿಯೋ ಇದು. ಇದುವರೆಗೆ ಸಾವಿರಾರು ಜನ ಈ ವಿಡಿಯೋವನ್ನು ನೋಡಿದ್ದಾರೆ. ಅಲ್ಲದೆ, ಎಲ್ಲರೂ ಮೆಮೆಲ್ ಅವರ ನಿತ್ಯದ ಅಭ್ಯಾಸದ ಬಗೆಗೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಹಲವರು ಇನ್ನೂ ಇಂತಹ ಅನೇಕ ವಿಡಿಯೋಗಳನ್ನು ಹಂಚಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ. ಒಲಿಂಪಿಕ್ ಪದಕ ವಿಜೇತ ನಾಡಿಯಾ ಕೋಮನೆಸಿ ಕೂಡಾ ಇವರ ಈ ಸಾಧನೆ, ಪ್ರಯತ್ನವನ್ನು ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ