ಆ್ಯಪ್ನಗರ

ಸುದೀರ್ಘ ಜೀವನದ ಮೂಲಕ ಗಿನ್ನಿಸ್ ದಾಖಲೆ ಬರೆದ ಉಡ : ಫೋಟೋ ವೈರಲ್

ಉಡವೊಂದು ಗಿನ್ನಿಸ್ ದಾಖಲೆ ಪುಟದಲ್ಲಿ ಸ್ಥಾನ ಪಡೆದಿದೆ. ಈ ಫೋಟೋವನ್ನು ಆಸ್ಟ್ರೇಲಿಯಾ ಮೃಗಾಲಯ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.

Vijaya Karnataka Web 20 Jan 2021, 3:07 pm
ಕೆಲವೊಂದು ಜೀವಿಗಳು ತಮ್ಮ ಸುದೀರ್ಘ ಜೀವನದ ಮೂಲಕ ಗಮನ ಸೆಳೆಯುತ್ತವೆ. ಸಹಜ ಜೀವಿತಾವಧಿಗಿಂತಲೂ ಹೆಚ್ಚು ಬದುಕಿದ ಪ್ರಾಣಿಗಳು ಅಥವಾ ಇನ್ನಾವುದೇ ಜೀವಿಗಳು ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತವೆ. ಇಂತಹ ಜೀವಿಗಳನ್ನು ಕಂಡಾಗ ಕುತೂಹಲದ ಜೊತೆಗೆ ಖುಷಿಯಾಗುತ್ತದೆ. ಸದ್ಯ ಅಂತಹದ್ದೇ ಒಂದು ಹಲ್ಲಿ ಜಾತಿಯ ಜೀವಿ ತನ್ನ ಸುದೀರ್ಘ ಜೀವನದಿಂದ ಗಿನ್ನಿಸ್ ವಿಶ್ವ ದಾಖಲೆಯ ಪುಟದಲ್ಲಿ ಸ್ಥಾನ ಪಡೆದಿದೆ.
Vijaya Karnataka Web Crikey
| Image Courtesy : @AustraliaZoo/Twitter


Also Read : ಏರ್‌ಪೋರ್ಟ್‌ ರನ್‌ ವೇನಲ್ಲಿ ಕಾರು ಚಲಾಯಿಸಿದ ಭೂಪ...! : ವಿಡಿಯೋ ವೈರಲ್

ಆಸ್ಟ್ರೇಲಿಯಾ ಮೃಗಾಲಯದಲ್ಲಿ ಈ ದಾಖಲೆ ಬರೆದ ಜೀವಿ ಇದೆ. ಇಲ್ಲಿನ ಉಡ ಈ ಮೃಗಾಲಯದಲ್ಲಿರುವ ಅತ್ಯಂತ ಹಿರಿಯ ಸದಸ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸದ್ಯ ಇತಿಹಾಸ ಬರೆದಿರುವ ಈ ಉಡ ಗಿನ್ನಿಸ್ ವಿಶ್ವ ದಾಖಲೆಯಲ್ಲೂ ಸ್ಥಾನ ಪಡೆದಿದೆ. ಸಾಮಾನ್ಯವಾಗಿ ಈ ಉಡಗಳು ಇಪ್ಪತ್ತು ವರ್ಷಗಳಷ್ಟು ಬದುಕುತ್ತವೆ. ಆದರೆ, ಈ ಉಡ ಸಹಜ ಜೀವಿತಾವಧಿಗಿಂತಲೂ ಎರಡು ಪಟ್ಟು ವರ್ಷದಷ್ಟು ಬದುಕಿ ಎಲ್ಲರ ಗಮನ ಸೆಳೆದಿದೆ. ಸದ್ಯ ಈ ಉಡದ ವಯಸ್ಸು 41.


Also Read : ಮೀನುಗಾರನನ್ನು ರಾತ್ರೋರಾತ್ರಿ ಸಿರಿವಂತನನ್ನಾಗಿಸಿದ ತಿಮಿಂಗಿಲ ಹೊರಹಾಕಿದ್ದ ಮೇಣದಂತಹ ಉಂಡೆ...!

ಆಸ್ಟ್ರೇಲಿಯಾ ಮೃಗಾಲಯ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಉಡದ ಫೋಟೋವನ್ನು ಹಂಚಿಕೊಂಡಿದೆ. ಜನವರಿ 19ರಂದು ಈ ಉಡದ ಗಿನ್ನಿಸ್ ದಾಖಲೆಯ ಪ್ರಮಾಣಪತ್ರ ಸೇರಿದಂತೆ ಒಟ್ಟು ಮೂರು ಚಿತ್ರಗಳನ್ನು ಶೇರ್ ಮಾಡಲಾಗಿದೆ. ಈ ವರ್ಷ ಈ ಉಡ 41ನೇ ವರ್ಷಕ್ಕೆ ಕಾಲಿಟ್ಟಿದೆ ಎಂದು ಈ ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Also Read : ಅಧಿಪತ್ಯ ಸಾಧಿಸಲು ಎರಡು ಬಲಶಾಲಿ ಹುಲಿಗಳ ಘನಘೋರ ಕದನ!: ಇಲ್ಲಿದೆ ವಿಡಿಯೋ

ಈ ಉಡ 1980ರ ಫೆಬ್ರವರಿ 23ರಂದು ಸಿಡ್ನಿಯ ತಾರೊಂಗಾ ಮೃಗಾಲಯದಲ್ಲಿ ಜನಿಸಿತ್ತು. ಬಳಿಕ 1993ರಲ್ಲಿ ಇದನ್ನು ಆಸ್ಟ್ರೇಲಿಯಾ ಮೃಗಾಲಯಕ್ಕೆ ವರ್ಗಾಯಿಸಲಾಯಿತು. ಸದ್ಯ ಈ ಫೋಟೋ ನೆಟ್ಟಿಗರ ಗಮನ ಸೆಳೆದಿದೆ. ಎಲ್ಲರೂ ಬಲು ಕುತೂಹಲದಿಂದ ಈ ಉಡವನ್ನು ನೋಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ