ಆ್ಯಪ್ನಗರ

ಕೊರೊನಾ ವೈರಸ್‌ ವಿರುದ್ಧ ಜಯಗಳಿಸಿ ಬಿಯರ್ ಕುಡಿದು ಸಂಭ್ರಮಿಸಿದ 103ರ ಅಜ್ಜಿ!

103ರ ಅಜ್ಜಿಯೊಬ್ಬರು ಕೊರೊನಾ ವೈರಸ್ ವಿರುದ್ಧ ಗೆದ್ದು ಸಂಭ್ರಮಿಸಿದ್ದಾರೆ. ಅಲ್ಲದೆ ಈ ಅಜ್ಜಿ ಬಿಯರ್ ಸವಿದು ತಮ್ಮ ಖುಷಿಯನ್ನು ಅನುಭವಿಸಿದ ಫೋಟೋಗಳು ಈಗ ವೈರಲ್ ಆಗುತ್ತಿವೆ.

Vijaya Karnataka Web 29 May 2020, 2:06 pm
ರಕ್ಕಸ ಕೊರೊನಾ ವೈರಸ್ ವೃದ್ಧರಿಗೆ ಕಾಡಿದರೆ ಬಲು ಅಪಾಯ. ಯಾಕೆಂದರೆ, ವೃದ್ಧರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ, ಎಲ್ಲಾ ಕಡೆ ವೃದ್ಧರನ್ನು, ಮಕ್ಕಳನ್ನು ತುಂಬಾ ಜಾಗರೂಕತೆಯಿಂದ ಆರೈಕೆ ಮಾಡಲಾಗುತ್ತದೆ. ಆದರೆ, ಕೆಲವೊಮ್ಮೆ ಈ ವೃದ್ಧರು ಕೂಡಾ ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಿ ಅಚ್ಚರಿ ಮತ್ತು ಖುಷಿ ಮೂಡಿಸುತ್ತಾರೆ. ಶತಾಯುಷಿಗಳೇ ಕೊರೊನಾ ವೈರಸ್ ವಿರುದ್ಧ ಸೆಣಸಾಡಿ ಜಯಗಳಿಸಿದ ಉದಾಹರಣೆಗಳು ಹಲವಿವೆ. ಇದೀಗ ಈ ಸಾಲಿಗೆ ಮತ್ತೊಬ್ಬರು ಶತಾಯುಷಿ ಅಜ್ಜಿ ಸೇರ್ಪಡೆಯಾಗಿದ್ದಾರೆ. ಈ ಅಜ್ಜಿ ಕೊರೊನಾ ವೈರಸ್ ವಿರುದ್ಧ ಜಯಗಳಿಸಿದ್ದೇ ಅಲ್ಲದೆ ಬಿಯರ್ ಕುಡಿದು ತಮ್ಮ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
Vijaya Karnataka Web Jennie Stejna
| Image Credit : Craig Paulsen/Twitter


ಮ್ಯಾಸಚೂಸೆಟ್ಸ್‌ನ ಜೆನ್ನಿ ಸ್ಟೆಂಜಾ ಈ ಉತ್ಸಾಹಿ ಅಜ್ಜಿ. ಕೊರೊನಾ ವಿರುದ್ಧ ಜಯಗಳಿಸಿದ ಖುಷಿಯಲ್ಲಿ ಈ ಅಜ್ಜಿ ಆಸ್ಪತ್ರೆ ಬೆಡ್‌ನಲ್ಲೇ ಬಿಯರ್ ಹೀರಿ ಖುಷಿಪಟ್ಟಿದ್ದಾರೆ. ಈ ಮೂಲಕ ಕೊರೊನಾ ವೈರಸ್ ವಿರುದ್ಧ ಸೆಣಸಾಡುವ ಭರವಸೆಯನ್ನು ಮೂಡಿಸುವ ಜೊತೆಗೆ ಆತ್ಮವಿಶ್ವಾಸದಿಂದ ಈ ವೈರಸ್ಸನ್ನು ಹೊಡೆದೋಡಿಸಬಹುದು ಎಂಬ ಧೈರ್ಯವನ್ನು ಎಲ್ಲರಿಗೂ ತುಂಬಿದ್ದಾರೆ.

Also Read : ಸಂದರ್ಶನದ ನಡುವೆಯೇ ಕೋತಿ `ಭಯ'ಕ್ಕೆ ಓಡಿದ ನಿರೂಪಕಿ...!

ಈ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದ ಮೊದಲ ಕೊರೊನಾ ಸೋಂಕಿತ ಅಜ್ಜಿ ಇವರು. ತೀವ್ರ ಜ್ವರದಿಂದ ಬಳಲುತ್ತಿದ್ದ ಜೆನ್ನಿ ಅವರ ಆರೋಗ್ಯದ ಬಗ್ಗೆ ಕುಟುಂಬಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಅಲ್ಲದೆ, ಜೆನ್ನಿ ಅವರ ಆರೋಗ್ಯ ತೀವ್ರ ಹದಗೆಟ್ಟಾದ ಇವರ ಇಬ್ಬರು ಮಕ್ಕಳು, ಮೂವರು ಮೊಮ್ಮಕ್ಕಳು, ನಾಲ್ಕು ಮರಿ ಮೊಮ್ಮಕ್ಕಳು ಮತ್ತು ಮೂವರು ಮರಿಮೊಮ್ಮಕ್ಕಳ ಮಕ್ಕಳು ಸೇರಿ ಎಲ್ಲರೂ ಅಜ್ಜಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ವೈದ್ಯರು ಕೂಡಾ ತಮ್ಮ ಪ್ರಯತ್ನದಲ್ಲಿ ಸೋಲಾಗಬಹುದು ಎಂದೇ ಅಂದುಕೊಂಡಿದ್ದರು. ಆದರೆ, ಜೆನ್ನಿ ಅವರು ಮಾತ್ರ ತಮ್ಮ ಜೀವನೋತ್ಸಾಹದಿಂದಲೇ ಮತ್ತೆ ಎಲ್ಲರಲ್ಲೂ ನಗು ಚೆಲ್ಲಿದ್ದಾರೆ. ಈ ಮೂಲಕ ಮತ್ತೆ ಕುಟುಂಬದಲ್ಲಿ ಖುಷಿ ತಂದಿದ್ದಾರೆ.

Also Read : ಅಮ್ಮನ ಬೆನ್ನೇರಿ ಮರಿಯಾನೆಯ ಆಟ... : ವ್ಹಾವ್... ಇದು ಅದ್ಭುತ ದೃಶ್ಯ...

ಈ ಕೊರೊನಾ ಸೋಂಕಿಗೊಳಗಾದ ಮೂರು ವಾರಗಳ ಬಳಿಕ ಶತಾಯುಷಿ ಜೆನ್ನಿ ಅವರು ಚೇತರಿಸಿಕೊಂಡಿದ್ದಾರೆ. ಜೆನ್ನಿ ಅವರ ಆರೋಗ್ಯ ಪವಾಡಸದೃಶ್ಯ ರೀತಿಯಲ್ಲಿ ಚೇತರಿಕೆ ಕಂಡಿದ್ದಕ್ಕೆ ಬರೀ ಕುಟುಂಬಸ್ಥರಷ್ಟೇ ಅಲ್ಲ, ವೈದ್ಯರು ಕೂಡಾ ಅಚ್ಚರಿಪಟ್ಟಿದ್ದರು.

Also Read : 76 ವರ್ಷದ ಅಜ್ಜಿಯ ಜೋಕಾಲಿಯಾಟ...! : ವೃದ್ಧೆಯ ಉತ್ಸಾಹಕ್ಕೆ ನೆಟ್ಟಿಗರು ಫಿದಾ

ಈ ಹಿಂದೆ ಆಸ್ಪತ್ರೆಯಲ್ಲಿ 58 ದಿನಗಳನ್ನು ಕಳೆದಿದ್ದ ಎರಡನೇ ವಿಶ್ವಯುದ್ಧದಲ್ಲಿ ಭಾಗಿಯಾಗಿದ್ದ ಅಮೆರಿಕದ ಶತಾಯುಷಿಯೊಬ್ಬರು ಕೋವಿಡ್-19ನನ್ನು ಸೋಲಿಸಿದರು. ಇದಕ್ಕೂ ಮೊದಲು, ಸ್ಪೇನ್‌ನ ಮಹಿಳೆಯೊಬ್ಬರು 113ನೇ ವಯಸ್ಸಿನಲ್ಲಿ ಈ ರಕ್ಕಸ ರೋಗದ ವಿರುದ್ಧ ಜಯಗಳಿಸಿ ಖುಷಿ ಹಂಚಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ