ಆ್ಯಪ್ನಗರ

ಅನಾಥ ಆನೆಮರಿಯ ಪಕ್ಕದಲ್ಲೇ ಮಲಗುವ ಪ್ರಾಣಿಪಾಲಕ : ಹೃದಯವಂತನ ಪ್ರೀತಿಯ ಹಿಂದಿದೆ ಭಾವನಾತ್ಮಕ ಕಾರಣ

ಪ್ರಾಣಿಪಾಲಕರೊಬ್ಬರು ಅನಾಥ ಆನೆ ಮರಿಯನ್ನು ಬಲು ಪ್ರೀತಿಯಿಂದ ಆರೈಕೆ ಮಾಡುವ ಭಾವನಾತ್ಮಕ ಫೋಟೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ. ಈ ಫೋಟೋ ಕಂಡ ಎಲ್ಲರೂ ಈ ಹೃದಯವಂತನ ಪ್ರಾಣಿ ಪ್ರೀತಿಗೆ ಫಿದಾ ಆಗಿದ್ದಾರೆ.

Vijaya Karnataka Web 29 Aug 2020, 5:37 am
ಹುಟ್ಟಿ ಕೆಲವೇ ದಿನಗಳಾಗಿವೆ ಅಷ್ಟೇ. ಆಗಲೇ ಈ ಕಂದಮ್ಮ ಅನಾಥವಾಗಿದೆ. ಅಮ್ಮನೊಂದಿಗೆ ಖುಷಿಯಾಗಿ ಆಡುತ್ತಾ ಇರಬೇಕಾಗಿದ್ದ ಈ ಕಂದಮ್ಮ ಈಗ ಬೇರೆಯವರ ಆರೈಕೆಯಲ್ಲಿದೆ. ಆದರೆ, ತಾಯಿಯ ಪ್ರೀತಿಯಿಂದ ವಂಚಿತನಾಗಿದ್ದೇನೆ ಎಂದು ಈ ಮರಿಗೆ ಅನಿಸದಷ್ಟು ಅಕ್ಕರೆಯಿಂದ ಇದನ್ನು ನೋಡಲಾಗುತ್ತಿದೆ. ಈ ಪ್ರೀತಿಗೆ ಸದ್ಯ ವೈರಲ್ ಆಗುತ್ತಿರುವ ಒಂದು ಫೋಟೋ ಸಾಕ್ಷಿ.
Vijaya Karnataka Web Baby Elephant
| Image Courtesy : Sheldrick Wildlife Trust/Facebook


ಪ್ರಾಣಿಗಳನ್ನು ಪ್ರೀತಿಯಿಂದ ಸಾಕುವ ಖುಷಿಯೇ ಬೇರೆ. ಯಾಕೆಂದರೆ, ಎಂತಹ ಪ್ರಾಣಿಗಳೇ ಆಗಿದ್ದರೂ ಪ್ರೀತಿಗೆ ಕರಗುತ್ತವೆ. ಜೊತೆಗೆ, ಕೆಲವೊಂದು ಪ್ರಾಣಿಗಳು ಮನುಷ್ಯನಿಗೆ ಬಹುಬೇಗ ಆಪ್ತವಾಗಿ ಬಿಡುತ್ತವೆ. ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಅದೆಷ್ಟೋ ವಿಡಿಯೋಗಳು ಕಾಣಸಿಗುತ್ತವೆ. ಇದು ಕೂಡಾ ಅಂತಹದ್ದೇ ಒಂದು ಅಪೂರ್ವ ದೃಶ್ಯ.

Also Read : 17 ಸಲ ದೇಹ ಮಾರ್ಪಾಡು, 5.8 ಲಕ್ಷ ರೂ ಖರ್ಚು, ಫ್ಯಾಷನ್ ಮೋಹಕ್ಕೆ ಕಿವಿಯನ್ನೇ ತೆಗೆಸಿದ ವ್ಯಕ್ತಿ...!

ಇದು ಸೆರೆಯಾಗಿದ್ದು ಕೀನ್ಯಾದ ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನಲ್ಲಿ. ಇಲ್ಲಿ ಅನಾಥ ಪ್ರಾಣಿಗಳನ್ನು ಅತ್ಯಂತ ಪ್ರೀತಿಯಿಂದ ಸಾಕಲಾಗುತ್ತದೆ. ಪ್ರಾಣಿಗಳು ಪ್ರೀತಿಯಿಂದ ವಂಚಿತವಾಗಬಾರದು ಎಂಬ ಕಾರಣಕ್ಕೆ ಸ್ವತಃ ಪ್ರಾಣಿಪಾಲಕರು ಇಲ್ಲಿ ಬಹು ಜಾಗರೂಕತೆ ವಹಿಸುತ್ತಾರೆ. ಇತ್ತೀಚೆಗೆ ಇದೇ ಟ್ರಸ್ಟ್‌ನ ವನ್ಯಜೀವಿ ಪಾಲಕರೊಬ್ಬರು ಜೀಬ್ರಾದ ಪುಟ್ಟ ಮರಿಗೆ ಹಾಲು ಕೊಡಲು ಹೋಗುವಾಗ ಜೀಬ್ರಾದ ಚರ್ಮವನ್ನೇ ಹೋಲುವ ಬಟ್ಟೆಯನ್ನು ಧರಿಸಿಹೋಗಿದ್ದ ಫೋಟೋ, ವಿಡಿಯೋಗಳು ವೈರಲ್ ಆಗಿತ್ತು. ಇದೀಗ ಇದೇ ರೀತಿಯ ಇನ್ನೊಂದು ಭಾವನಾತ್ಮಕ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


ಇದು ಇದೇ ಟ್ರಸ್ಟ್‌ನ ಪ್ರಾಣಿಪಾಲಕರೊಬ್ಬರು ಅನಾಥ ಆನೆ ಮರಿಯ ಪಕ್ಕದಲ್ಲೇ ಮಲಗಿರುವ ಫೋಟೋ. ಕಂದನಿಗೆ ಬೆಚ್ಚಗಿನ ಹೊದಿಕೆ ಹಾಕಿದ್ದರೆ, ಈ ಹೃದಯವಂತ ಬರೀ ದಿಂಬು ಇಟ್ಟುಕೊಂಡು ಮಲಗಿದ್ದಾರೆ. ಈ ಫೋಟೋ ನೋಡುವಾಗಲೇ ಹೃದಯ ತುಂಬಿ ಬರುತ್ತದೆ.

Also Read : ನೀರಿನಲ್ಲಿ ಒದ್ದಾಡುತ್ತಿದ್ದ ಮಿಡತೆಯನ್ನು ರಕ್ಷಿಸಿದ ಮುದ್ದು ಶ್ವಾನ : ಪ್ರಾಣಿಗಳೂ ಕಲಿಸುತ್ತವೆ ಬದುಕಿನ ಪಾಠ

ಇಷ್ಟಕ್ಕೂ ಇವರು ಇಷ್ಟು ಪ್ರೀತಿಯಿಂದ ಈ ಕಂದನನ್ನು ನೋಡಿಕೊಳ್ಳಲು ಕಾರಣವೂ ಇದೆ. ಅದೇನೆಂದರೆ, ಈ ಕಂದಮ್ಮ ಕಾಡಿನಲ್ಲಿ ತಾಯಿಯ ಜೊತೆ ಇದ್ದಿದ್ದರೆ ಬಹಳ ರಕ್ಷಣೆಯಿಂದ ಇರುತ್ತಿತ್ತು. ಯಾವಾಗಲೂ ಆನೆಗಳು ತಮ್ಮ ಮರಿಗಳು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತವೆ. ಮರಿಗಳ ಮೇಲೆ ಸದಾ ಎಚ್ಚರಿಕೆಯ ಕಣ್ಣುಗಳನ್ನಿಟ್ಟಿರುತ್ತವೆ. ಜೊತೆಗೆ, ಮಲಗುವಾಗಲೂ ಆನೆಗಳ ಹಿಂಡಿನ ಮಧ್ಯದಲ್ಲಿ ಮರಿಗಳು ಮಲಗುತ್ತವೆ. ಹೀಗಾಗಿ, ಈ ಅನಾಥ ಮರಿ ಇಂತಹ ರಕ್ಷಣೆಯ ಪ್ರೀತಿಯಿಂದ ವಂಚಿತವಾಗಬಾರದು ಮತ್ತು ತಾಯಿ ಜೊತೆಗಿದ್ದ ನೆನಪುಗಳು ಹಾಗೆಯೇ ಅಚ್ಚಳಿಯದೆ ಉಳಿಯಲಿ ಎಂಬ ಕಾರಣಕ್ಕೆ ಈ ವನ್ಯಪಾಲಕರು ಈ ಕಂದನನ್ನು ಇನ್ನಷ್ಟು ಜಾಗರೂಕತೆಯಿಂದ, ರಾತ್ರಿ ಹಗಲು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ.

Also Read : ಸಂಕಷ್ಟದಲ್ಲಿದ್ದ ಪ್ರಾಣಿಯನ್ನು ರಕ್ಷಿಸುವ ಆನೆ : ಗಜಪಡೆಯಿಂದ ಕಲಿಯುವ ಪಾಠಗಳು ಹಲವಿವೆ

ಈ ಮರಿ ತನ್ನ ಹಿಂಡಿನಿಂದ ಬೇರ್ಪಟ್ಟಿತ್ತು ಅಥವಾ ದಾರಿ ತಪ್ಪಿ ಭಯದಲ್ಲಿ ಓಡಾಡುತ್ತಿತ್ತು. ಈ ವೇಳೆ, ವನ್ಯಪಾಲಕರು ಈ ಮರಿಯನ್ನು ರಕ್ಷಿಸಿ ಇಲ್ಲಿ ಆರೈಕೆ ಮಾಡುತ್ತಿದ್ದಾರೆ. ಈ ಹೃದಯವಂತರು ತೋರುವ ಪ್ರೀತಿ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿದೆ. ಇದೇ ಕಾರಣಕ್ಕೆ ಈ ಫೋಟೋ ಈಗ ಎಲ್ಲರಿಗೂ ಬಲು ಇಷ್ಟವಾಗಿದೆ. ಎಲ್ಲರೂ ಇವರ ಕಾರ್ಯವೈಖರಿಯನ್ನು ಮನಸಾರೆ ಕೊಂಡಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ