ಆ್ಯಪ್ನಗರ

ಕಾಣಸಿಕ್ಕಿದೆ 2000 ವರ್ಷಗಳಷ್ಟು ಹಿಂದೆ ಮರುಭೂಮಿಯ ಬೆಟ್ಟದಲ್ಲಿ ಕೆತ್ತಲಾದ ಬೃಹತ್ ಬೆಕ್ಕಿನ ಚಿತ್ರ...!

ಇದು ಇತಿಹಾಸ ಅಧ್ಯಯನಕ್ಕೆ ಪ್ರಮುಖ ಆಕರವಾಗಲಿದೆ. ಪುರಾತತ್ತ್ವಜ್ಞರ ಈ ಸಂಶೋಧನೆ ಈಗ ಎಲ್ಲರ ಗಮನ ಸೆಳೆದಿದೆ.

Vijaya Karnataka Web 19 Oct 2020, 4:52 pm
ಇದು ಬೆಕ್ಕನ್ನು ಬಹುವಾಗಿ ಇಷ್ಟಪಡುವವರಿಗೆ ಖುಷಿಕೊಡುವಂತಹ ಸುದ್ದಿ... ಇತಿಹಾಸ ಅಧ್ಯಯನಕ್ಕೂ ಇದು ಸಹಕಾರಿಯಾಗಲಿದೆ. ಸದ್ಯ ಬೃಹತ್ ಗಾತ್ರದ ಬೆಕ್ಕಿನ ಚಿತ್ರವೊಂದು ಎಲ್ಲರ ಗಮನ ಸೆಳೆದಿದೆ.
Vijaya Karnataka Web Image by Monika Neumann from Pixabay
| Representative image | Image by Monika Neumann from Pixabay


ಪೆರುವಿನ ಪುರಾತತ್ತ್ವಜ್ಞರು ಪ್ರಮುಖ ವಿಷಯವೊಂದನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಇದೇ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಸಾವಿರಾರು ವರ್ಷಗಳ ಹಿಂದೆ ಇಲ್ಲಿನ ಮರುಭೂಮಿಯ ಬೆಟ್ಟದಂತಹ ಪ್ರದೇಶದಲ್ಲಿ ಕೆತ್ತಲಾದ ಬೃಹತ್ ಗಾತ್ರದ ಬೆಕ್ಕಿನ ಚಿತ್ರವೊಂದು ಈಗ ಕಾಣಸಿಕ್ಕಿದೆ.

Also Read : ಮಹಿಳೆಯ ಕಾಲಿಗೆ ಸುತ್ತಿಕೊಂಡ ಹೆಬ್ಬಾವು! : ರಕ್ಷಣೆಗೆಂದು ಹೋದಾಕೆಯ ರಕ್ಷಣೆಗೆ ಪೊಲೀಸರೇ ಬರಬೇಕಾಯಿತು!

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣವಾದ ನಾಜ್ಕಾ ಲೈನ್ಸ್‌ನ ಬೆಟ್ಟದ ಮೇಲೆ ಬೃಹತ್ ವಿನ್ಯಾಸವನ್ನು ಕಂಡುಹಿಡಿಯಲಾಗಿದೆ. 1994ರಿಂದ ನಾಜ್ಕಾ ಲೈನ್ಸ್‌ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಿಕೊಂಡಿದೆ.

Also Read : ಅಯ್ಯೋ... ಪಾಪ... ಜಿರಾಫೆಗೆ ಹುಲ್ಲು ತಿನ್ನಲು ಏನೆಲ್ಲಾ ಮಾಡ್ಬೇಕು ನೋಡಿ...!

ನಾಜ್ಕಾ ಲೈನ್ಸ್‌ ಅಪೂರ್ವ ಪ್ರಾಣಿಗಳು, ಸಸ್ಯಗಳು ಮತ್ತು ಇತರ ವಿವಿಧ ಆಕಾರಗಳಿಗೆ ಪ್ರಸಿದ್ಧ. ಸದ್ಯ ಲಭ್ಯವಾಗಿರುವ ಬೆಕ್ಕಿನ ವಿನ್ಯಾಸವು 37 ಮೀಟರ್ ಉದ್ದ ಇದೆ. ಇದರ ಕಾಲಮಾನ ಸುಮಾರು ಕ್ರಿ.ಪೂ 200 ರಿಂದ ಕ್ರಿ.ಪೂ 100 ಎಂದು ಅಂದಾಜಿಸಲಾಗಿದೆ. ಬೆಟ್ಟಕ್ಕೆ ಸಾಗುವ ದಾರಿಯನ್ನು ಅಭಿವೃದ್ಧಿಪಡಿಸುವ ಕೆಲಸದ ಸಮಯದಲ್ಲಿ ಈ ಬೆಕ್ಕಿನ ಆಕೃತಿ ಕಾಣ ಸಿಕ್ಕಿದೆ. ಇದನ್ನು ಪೆರುವಿನ ಸಂಸ್ಕೃತಿ ಸಚಿವಾಲಯವೂ ದೃಢಪಡಿಸಿದೆ. ಕ್ರಿ.ಪೂ 800 ಮತ್ತು ಕ್ರಿ.ಪೂ 100ರ ನಡುವೆ ಅಸ್ತಿತ್ವದಲ್ಲಿದ್ದ ಪ್ಯಾರಾಕಾಸ್ ಯುಗದ ಚಿತ್ರ ಇದಾಗಿರಬಹುದು ಎಂದೂ ತಜ್ಞರು ಲೆಕ್ಕಾಚಾರ ನಡೆಸಿದ್ದಾರೆ. ಸದ್ಯ ಈ ಬಗೆಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.


Also Read : ನಿರಂತರ 11 ದಿನಗಳಲ್ಲಿ ಅತೀ ಹೆಚ್ಚು ದೂರ ಸಂಚರಿಸಿ ದಾಖಲೆ ಬರೆದ ಹಕ್ಕಿ!

`ನೈಸರ್ಗಿಕ ಸವೆತಕ್ಕೆ ಗುರಿಯಾದ ಇಳಿಜಾರಿನ ಪ್ರದೇಶದಲ್ಲಿ ಇದು ಇರುವುದರಿಂದ ಇದು ಇಷ್ಟರವರೆಗೆ ಗೋಚರಿಸಿರಲಿಲ್ಲ. ಕಳೆದ ವಾರ ಇದನ್ನು ಸ್ವಚ್ಛಗೊಳಿಸಲಾಗಿದ್ದು, ಇದನ್ನು ಸಂರಕ್ಷಿಸಲಾಗುತ್ತಿದೆ' ಎಂದು ಸಚಿವಾಲಯ ಹೇಳಿಕೊಂಡಿದೆ. ಇದಲ್ಲದೆ, ಕಳೆದ ಹಲವು ವರ್ಷಗಳಲ್ಲಿ ನಾಜ್ಕಾ ಮತ್ತು ಪಾಲ್ಪಾ ಕಣಿವೆಗಳಲ್ಲಿ 80 ರಿಂದ 100ರಷ್ಟು ಇಂತಹ ಹೊಸ ಆಕಾರಗಳು ಕಾಣಸಿಕ್ಕಿವೆಯಂತೆ. ಸದ್ಯ ಈ ಬೆಕ್ಕಿನ ಚಿತ್ರ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗುತ್ತಿದ್ದು, ಎಲ್ಲರೂ ಬಲು ಕುತೂಹಲ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ