ಆ್ಯಪ್ನಗರ

ಸುಕ್ಕುಗಟ್ಟಿದ ಅಂಗೈ ಹೇಳುತ್ತಿದೆ ನಮಗಾಗಿ ಕಷ್ಟಪಡುತ್ತಿರುವ ವೈದ್ಯರ ಕತೆ

ವೈದ್ಯರೊಬ್ಬರು ಪಿಪಿಇ ಕಿಟ್ ಧರಿಸಿ ತೆಗೆದ ಬಳಿಕ ತನ್ನ ಸುಕ್ಕುಗಟ್ಟಿದ ಅಂಗೈಯ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ವಾರಿಯರ್ಸ್ ಎದುರಿಸುತ್ತಿರುವ ಕಷ್ಟಕ್ಕೆ ಇದು ಸಾಕ್ಷಿಯಾಗಿದೆ.

Vijaya Karnataka Web 25 Aug 2020, 4:53 pm
ಯಾವಾಗ ಕೊರೊನಾ ವೈರಸ್ ಅಬ್ಬರ ಶುರುವಾಯಿತೋ ಅಲ್ಲಿಂದ ಬಿಡುವಿಲ್ಲದ ಕರ್ತವ್ಯ ನಿರ್ವಹಣೆಯಲ್ಲಿ ತೊಡಗಿದವರು ನಮ್ಮ ಪೊಲೀಸರು, ಡಾಕ್ಟರ್ಸ್, ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸರ್ಕಾರಿ ಅಧಿಕಾರಿಗಳು. ಈ ಕೊರೊನಾ ವಾರಿಯರ್ಸ್ ತಮ್ಮ ವೈಯಕ್ತಿಕ ಜೀವನದ ಖುಷಿಯನ್ನೂ ಬದಿಗಿಟ್ಟು ಜನರಿಗಾಗಿ ಸೇವೆ ಸಲ್ಲಿಸುತ್ತಾರೆ. ಹೀಗೆ ವಿಶ್ರಾಂತಿಯೇ ಇಲ್ಲದೆ ದುಡಿಯುತ್ತಿರುವ ಇವರೆಲ್ಲಾ ಅನೇಕ ಸವಾಲುಗಳನ್ನು ಎದುರಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಎದುರಿಸುವ ಕಷ್ಟವೇನು ಎಂಬುದಕ್ಕೆ ವೈದ್ಯರೊಬ್ಬರು ಹಂಚಿಕೊಂಡಿರುವ ಸುಕ್ಕುಗಟ್ಟಿದ ಅಂಗೈಯ ಫೋಟೋನೇ ಸಾಕ್ಷಿ.
Vijaya Karnataka Web Wrinkled Hand
| Image Courtesy : Dr Syed Faizan Ahmad/Twitter


Also Read : ಪಂಜಾಬಿ ಹಾಡಿಗೆ ಸ್ವಿಟ್ಜರ್ಲೆಂಡ್‌ನ ಮಹಿಳೆಯರ ಡಾನ್ಸ್‌ : ಸಖತ್ ವಿಡಿಯೋ ವೈರಲ್

ಕೊರೊನಾ ವಾರಿಯರ್ಸ್‌ಗಳಲ್ಲಿ ಹೆಚ್ಚಿನ ಸವಾಲು ಇರುವುದು ಅದು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ. ಯಾಕೆಂದರೆ, ಕೊರೊನಾ ಸೋಂಕಿತರಿಗೆ ಇವರು ಚಿಕಿತ್ಸೆ ನೀಡಬೇಕಾಗಿರುವುದರಿಂದ ಅಪಾಯಗಳು ಹೆಚ್ಚು. ಹೀಗಾಗಿ, ಇವರೆಲ್ಲಾ ಸುರಕ್ಷತೆಗಾಗಿ ಪಿಪಿಇ ಕಿಟ್ ಧರಿಸಬೇಕಾಗುತ್ತದೆ. ದಿನವಿಡೀ ಈ ವೈಯಕ್ತಿಕ ರಕ್ಷಣಾ ಸಾಧನಗಳಾದ ಪ್ಲಾಸ್ಟಿಕ್ ಸೂಟ್, ಫೇಸ್‌ಮಾಸ್ಕ್‌ ಮತ್ತು ಕೈಗೆ ಗ್ಲೌಸನ್ನು ಇವರು ಬಳಸಬೇಕಾಗುತ್ತದೆ. ಆದರೆ, ಇವುಗಳನ್ನು ಧರಿಸಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ದೆಹಲಿ ಮೂಲದ ವೈದ್ಯರಾದ ಡಾ. ಸೈಯದ್ ಫೈಜಾನ್ ಅಹ್ಮದ್ ಪಿಪಿಇ ಕಿಟ್ ಧರಿಸಿದ ನಂತರ ಸುಕ್ಕುಗಟ್ಟಿದ ಅವರ ಅಂಗೈಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Also Read : ಗಾಯಾಳು ಮಹಿಳೆಯರನ್ನು ಹೊತ್ತು 15 ಗಂಟೆ, 40 ಕಿಮೀ ನಡೆದ ಐಟಿಬಿಪಿ ಯೋಧರು...!

Also Read : ತನ್ನ ಸಮಾಧಿ ಬಳಿ ಆಟವಾಡುತ್ತಿದೆಯಾ 2 ವರ್ಷದ ಕಂದನ ಆತ್ಮ? ಆ ತಾಯಿಗೆ ಕಾಣಿಸಿದ್ದೇನು?

ಈ ಫೋಟೋವನ್ನು ನೋಡಿದಾಗಲೇ ಕೊರೊನಾ ವಾರಿಯರ್ಸ್ ಎದುರಿಸುತ್ತಿರುವ ಕಷ್ಟ ಎಂತಹದ್ದು ಎಂದು ಗೊತ್ತಾಗುತ್ತದೆ. ಈ ಹಿಂದೆ ಕೂಡಾ ವೈದ್ಯರು, ವೈದ್ಯಕೀಯ ಸಿಬ್ಬಂದಿ ಇಂತಹದ್ದೇ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ಫೋಟೋಗಳು ಕೂಡಾ ವೈರಲ್ ಆಗಿದ್ದವು. ಇದೀಗ ಡಾ. ಸೈಯದ್ ಫೈಜಾನ್ ಅಹ್ಮದ್ ಅವರು ಹಂಚಿಕೊಂಡಿರುವ ಫೋಟೋ ಕೂಡಾ ನೆಟ್ಟಿಗರ ಗಮನ ಸೆಳೆದಿದೆ. ಅಲ್ಲದೆ, ಕೊರೊನಾ ವೈರಸ್ ವಿರುದ್ಧ ಸಮರ್ಥವಾಗಿ ಹೋರಾಟ ನಡೆಸುತ್ತಿರುವ ಕೊರೊನಾ ವಾರಿಯರ್ಸ್‌ಗೆ ಧನ್ಯವಾದ ತಿಳಿಸಿದ್ದಾರೆ. ವೈದ್ಯರ ವಿಶ್ರಾಂತಿ ಇಲ್ಲದ ಕರ್ತವ್ಯ ನಿರ್ವಹಣೆಯನ್ನೂ ಕೊಂಡಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ