ಆ್ಯಪ್ನಗರ

42ನೇ ಹುಟ್ಟುಹಬ್ಬಕ್ಕೆ ಪುತ್ರ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡನ್ನೇ ಪುತ್ರನ 42ನೇ ಬರ್ತ್‌ಡೇಗೆ ಕೊಟ್ಟ ತಂದೆ

ನಿಜಕ್ಕೂ ಇದೊಂದು ಹೃದಯಸ್ಪರ್ಶಿ ನಡೆ. ಪುತ್ರ ತನಗೆ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡನ್ನು ಅತ್ಯಂತ ಜತನದಿಂದ ಕಾಪಾಡಿದ್ದ ತಂದೆ ಈಗ ಆತನ ಹುಟ್ಟುಹಬ್ಬಕ್ಕೆ ಅದೇ ಕಾರ್ಡನ್ನು ಕೊಟ್ಟಿದ್ದಾರೆ.

Vijaya Karnataka Web 15 Sep 2020, 10:06 am
ಹುಟ್ಟಿದ ಹಬ್ಬ ಎಂದರೆ ಆ ಖುಷಿಯೇ ಬೇರೆ. ಬಹಳಷ್ಟು ಮಂದಿ ಪ್ರತಿವರ್ಷ ತಮ್ಮ ಹುಟ್ಟು ಹಬ್ಬವನ್ನು ಕುಟುಂಬದವರೊಂದಿಗೆ ಅದ್ಭುತವಾಗಿ ಆಚರಿಸುತ್ತಾರೆ. ಈ ವೇಳೆ ಖುಷಿ ಮೇರೆ ಮೀರಿರುತ್ತದೆ. ಜೊತೆಗೆ, ಪ್ರೀತಿಪಾತ್ರರು ಕೂಡಾ ಉಡುಗೊರೆಗಳನ್ನು ಕೊಟ್ಟು ಶುಭ ಹಾರೈಸುತ್ತಾರೆ. ಗ್ರೀಟಿಂಗ್ ಕಾರ್ಡುಗಳ ಮೂಲಕ ಶುಭ ಕೋರುತ್ತಾರೆ. ಆದರೆ, ಇನ್ನು ಕೆಲವರು ಈ ಕ್ಷಣವನ್ನು ಇನ್ನಷ್ಟು ಸ್ಮರಣೀಯವನ್ನಾಗಿಸುತ್ತಾರೆ. ಸಾಮಾನ್ಯವಾಗಿ ವರ್ಷಗಳುರುಳಿದಂತೆ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ಬಂದ ಗ್ರೀಟಿಂಗ್ ಕಾರ್ಡುಗಳು ಹಾಳಾಗಿ ಕಸದ ಬುಟ್ಟಿ ಸೇರುತ್ತವೆ. ಆದರೆ, ಒಂದಷ್ಟು ಜನ ತಮಗೆ ಬಂದ ಶುಭಾಶಯದ ಪತ್ರಗಳನ್ನು ಬಲು ಎಚ್ಚರಿಕೆಯಿಂದ ಕಾಪಾಡಿಕೊಂಡು ಬರುತ್ತಾರೆ. ಅಂತಹ ಅಪರೂಪದ ವ್ಯಕ್ತಿಗಳಲ್ಲಿ ಈ ತಂದೆ ಕೂಡಾ ಒಬ್ಬರು.
Vijaya Karnataka Web birthday
| Image Courtesy : @robwitts/Twitter


ಇವರು ಬರೀ ತಮ್ಮ ಶುಭಾಶಯಗಳ ಕಾರ್ಡುಗಳನ್ನು ಕಾಪಾಡಿಕೊಂಡು ಬಂದಿಲ್ಲ. ಬದಲಾಗಿ, ತನ್ನ ಪುತ್ರ ಚಿಕ್ಕವನಿದ್ದಾಗ ಅಂದರೆ 28 ವರ್ಷಗಳ ಹಿಂದೆ ಆತ ತನ್ನ ಹುಟ್ಟುಹಬ್ಬಕ್ಕೆ ಕೊಟ್ಟಿದ್ದ ಕಾರ್ಡನ್ನೇ ಈಗ ಪುತ್ರನ ಹುಟ್ಟುಹಬ್ಬಕ್ಕೆ ಕೊಟ್ಟು ಖುಷಿ ಮೂಡಿಸಿದ್ದಾರೆ. ಈ ಕತೆಯೇ ಹೃದಯಸ್ಪರ್ಶಿಯಾಗಿದೆ.

Also Read : ತನ್ನನ್ನು ಹಲವು ಸಲ ಬಂಧಿಸಿದ್ದ ಪೊಲೀಸ್ ಅಧಿಕಾರಿಗೆ ಕಿಡ್ನಿ ದಾನ ನೀಡಿ ಬದುಕಿಸಿದ ಮಹಿಳೆ!

ರಾಬ್ ವಿಟ್ಸ್‌ ಎಂಬವರು ಇತ್ತೀಚೆಗೆ 42ನೇ ವರ್ಷಕ್ಕೆ ಕಾಲಿಟ್ಟಿದ್ದರು. ಈ ಹುಟ್ಟುಹಬ್ಬಕ್ಕೆ ಇವರು ತನ್ನ ತಂದೆಯಿಂದ ಸ್ಪೆಷಲ್ ಗಿಫ್ಟನ್ನು ಪಡೆದಿದ್ದಾರೆ. ಅದು ತಾನು 14ನೇ ವಯಸ್ಸಿನಲ್ಲಿ ತನ್ನ ತಂದೆಯ 42ನೇ ಹುಟ್ಟುಹಬ್ಬಕ್ಕೆ ಕೊಟ್ಟಿದ್ದ ಗ್ರೀಟಿಂಗ್ ಕಾರ್ಡನ್ನು ಇವರು ಮರಳಿ ಕೊಡುಗೆಯಾಗಿ ಪಡೆದಿದ್ದಾರೆ...!

Also Read : 1920ರಲ್ಲಿ ಬರೆದಿದ್ದ ಪತ್ರ ನೂರು ವರ್ಷಗಳ ಬಳಿಕ ಮಹಿಳೆಯ ಕೈ ಸೇರಿತು...!

ಎಷ್ಟು ಅದ್ಭುತವಲ್ವಾ...? ಖಂಡಿತಾ ಇದು ಬೆಲೆಯೇ ಕಟ್ಟಲಾಗದಂತಹ ಅಪೂರ್ವ ಪ್ರೀತಿಪೂರ್ವಕ ಗಿಫ್ಟ್‌. ಯಾಕೆಂದರೆ, ಇದರಲ್ಲಿ ನೆನಪುಗಳ ಸರಮಾಲೆಯೇ ಇದೆ. ಬರೋಬ್ಬರಿ 28 ವರ್ಷಗಳ ಹಿಂದಿನ ನೆನಪು ಈ ಕಾರ್ಡಿನಲ್ಲಿದೆ. ಪುತ್ರನ ಹೆಸರಿದ್ದ ಜಾಗದಲ್ಲಿ ತನ್ನ ಹೆಸರನ್ನು ಹಾಕಿ ತಂದೆ ಈ ಶುಭಾಶಯದ ಪತ್ರವನ್ನು ರಾಬ್ ಅವರಿಗೆ ನೀಡಿದ್ದರು. ಈ ಅಪೂರ್ವ ಫೋಟೋವನ್ನು ರಾಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : ಒಂದೇ ಸ್ಥಳ... ಎರಡು ಫೋಟೋ... ಈ ಚಿತ್ರದಲ್ಲಿರುವ 10 ವ್ಯತ್ಯಾಸಗಳನ್ನು ಹುಡುಕುವಿರಾ...?

ಸದ್ಯ ಈ ಫೋಟೋ ಎಲ್ಲರ ಗಮನ ಸೆಳೆದಿದೆ. ಈ ಅಚ್ಚರಿಯ ಕೊಡುಗೆಗೆ ಎಲ್ಲರಿಗೂ ಇಷ್ಟವಾಗಿದೆ. ಎಲ್ಲರೂ ತಂದೆಯ ಈ ಪ್ರೀತಿಯನ್ನು ಕೊಂಡಾಡಿದ್ದಾರೆ. ಜೊತೆಗೆ ರಾಬ್ ಅವರಿಗೂ ಶುಭಕೋರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ