ಆ್ಯಪ್ನಗರ

ನ್ಯೂಯಾರ್ಕ್‌ ಝೂಗೆ ಹೊಸ ಅತಿಥಿಯ ಆಗಮನ : ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಬಿಳಿ ಕಾಂಗರೂ!

ಈ ಅಪರೂಪದ ಕಾಂಗರೂ ಈಗ ಆ ಮೃಗಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಸದ್ಯ ಈ ಮುದ್ದು ಮರಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 23 Jan 2021, 5:38 pm
ಕಾಂಗರೂ ಬಲು ಅಪೂರ್ವ ಜೀವಿಗಳು... ಹೊಟ್ಟೆಯಲ್ಲಿ ಮುದ್ದು ಮರಿಯನ್ನು ಬೆಚ್ಚಗೆ ಕುಳ್ಳಿರಿಸಿ ಓಡಾಡುವ ಕಾಂಗರೂಗಳನ್ನು ನೋಡುವುದೇ ಒಂದು ಖುಷಿ. ಬಹುತೇಕ ಎಲ್ಲರೂ ಈ ಕಾಂಗರೂಗಳನ್ನು ನೋಡಿರುತ್ತೀರಿ. ಆದರೆ, ಎಂದಾದರೂ ಬಿಳಿ ಕಾಂಗರೂ ಮರಿಯನ್ನು ನೋಡಿದ್ದೀರಾ...? ಸದ್ಯ ಇಂತಹದ್ದೊಂದು ಅಪರೂಪದ ಮರಿಯನ್ನು ನೋಡುವ ಅವಕಾಶ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪರೂಪದ ಬಿಳಿ ಕಾಂಗರೂ ಮರಿಯ ಫೋಟೋ ಈಗ ವೈರಲ್ ಆಗುತ್ತಿದೆ.
Vijaya Karnataka Web White Kangaroo
| Image Courtesy : Instagram/@animaladventurepark


ನಮ್ಮ ಪ್ರಕೃತಿ ನಮ್ಮನ್ನು ಅಚ್ಚರಿಗೊಳಿಸುವುದರಲ್ಲಿ ಯಾವತ್ತೂ ಹಿಂದೆ ಬೀಳುವುದಿಲ್ಲ. ಒಂದಲ್ಲ ಒಂದು ವಿಸ್ಮಯಗಳನ್ನು ಪ್ರಕೃತಿ ನಮಗೆ ಕಾಣುವಂತೆ ಮಾಡುತ್ತಿದೆ. ಅಂತೆಯೇ, ಸದ್ಯ ಬಿಳಿ ಕಾಂಗರೂ ಇಂತಹ ಅಚ್ಚರಿಗೆ ಸಾಕ್ಷಿಯಾಗಿದೆ.

Also Read : ಎಲ್ಲರ ಅದೃಷ್ಟ ಚೆನ್ನಾಗಿತ್ತು, ಯಾರಿಗೂ ಏನೂ ಆಗಲಿಲ್ಲ! : ಇದು ಎದೆ ನಡುಗಿಸುವಂತಹ ದೃಶ್ಯ

ಆನಿಮಲ್ ಅಡ್ವೆಂಚರ್ ಪಾರ್ಕ್‌ನಲ್ಲಿ ಇಂತಹದ್ದೊಂದು ಅಪರೂಪದ ಕಾಂಗರೂ ಮರಿಯ ಜನನವಾಗಿದೆ. ಬೂಮರ್ ಮತ್ತು ರೋಸಿ ಜೋಡಿಯ ಮರಿ ಇದು. ಈ ಮುದ್ದು ಪುಟಾಣಿಯ ಹೆಸರು ಜೋಯಿ. ಈ ಜೋಯಿ ತನ್ನ ಬಿಳಿ ಬಣ್ಣದ ಮೂಲಕ ಎಲ್ಲರ ಗಮನ ಸೆಳೆದಿದೆ. ನ್ಯೂಯಾರ್ಕ್‌ ಮೂಲದ ಈ ಮೃಗಾಲಯ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜೋಯಿಯ ಫೋಟೋವನ್ನು ಹಂಚಿಕೊಂಡಿದೆ.

Also Read : ಕಬಾಬ್ ತರಲು ಮಕ್ಕಳೊಂದಿಗೆ 350 ಮೈಲು ಕಾರಿನಲ್ಲಿ ಸಾಗಿದ ತಂದೆ: ಹಿಂದಿರುವಾಗ ಅಪಘಾತ, ಕಟ್ಟಬೇಕಾಯಿತು ದಂಡ!
View this post on Instagram A post shared by Animal Adventure Park (@animaladventurepark)

Also Read : 70 ವರ್ಷದ ಸುಖ ದಾಂಪತ್ಯ ಅಂತ್ಯ : ಕೆಲವೇ ನಿಮಿಷಗಳ ಅಂತರದಲ್ಲಿ ಕೊನೆಯುಸಿರೆಳೆದ ಕೊರೊನಾ ಸೋಂಕಿತ ದಂಪತಿ!


ಸದ್ಯ ಈ ಕಾಂಗರೂ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಮೃಗಾಲಯದ ಅಧಿಕಾರಿಗಳೂ ಈ ಗಂಡು ಕಾಂಗರೂ ಮರಿಯ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಇದು ಬಲು ಅಪರೂಪವಾಗಿದ್ದು, ನೆಟ್ಟಿಗರು ಕೂಡಾ ಬಲು ಕುತೂಹಲದಿಂದ ಜೋಯಿಯನ್ನು ನೋಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಈಗಾಗಲೇ ಸಾವಿರಾರು ವೀಕ್ಷಣೆ ಗಳಿಸುವಲ್ಲಿ ಈ ಫೋಟೋ ಯಶಸ್ವಿಯಾಗಿದೆ. ಈ ಫೋಟೋವನ್ನು ಕಂಡ ಸಾಕಷ್ಟು ಜನ ಈ ಬಗ್ಗೆ ಅಚ್ಚರಿಯ ಪ್ರತಿಕ್ರಿಯೆ ನೀಡಿದ್ದಾರೆ. ಬಹುಶಃ ಈ ಮುದ್ದು ಮರಿ ನಿಮ್ಮಲ್ಲೂ ಅಚ್ಚರಿ ತಂದಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ