ಆ್ಯಪ್ನಗರ

ಧೈರ್ಯವೊಂದಿದ್ದರೆ ಚಿರತೆಯನ್ನೂ ಹೆದರಿಸಿ ಓಡಿಸಬಹುದು...!

ಶ್ವಾನವೊಂದು ಚಿರತೆಯನ್ನು ಧೈರ್ಯದಿಂದ ಹೆದರಿಸಿ ಓಡಿಸುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಇದು ಹಳೆಯ ವಿಡಿಯೋವಾದರೂ ಈಗ ಮತ್ತೆ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.

Vijaya Karnataka Web 16 Jun 2020, 12:02 pm
ಆ ಮಣ್ಣಿನ ರಸ್ತೆಯಲ್ಲಿ ಶ್ವಾನವೊಂದು ಮಲಗಿದೆ... ಆದರೆ, ಈ ಶ್ವಾನದ ಸುಖ ನಿದ್ದೆಯನ್ನೆಲ್ಲಾ ಒಮ್ಮಿಂದೊಮ್ಮೆಗೇ ಓಡಿಸಿತ್ತು ಆ ಚಿರತೆ...! ಆದರೆ, ಧುತ್ತನೆ ಎದುರಿಗೆ ಬಂದು ನಿಂತ ಈ ಚಿರತೆಯನ್ನು ಶ್ವಾನ ಹೇಗೆ ಎದುರಿಸಿತ್ತು ಎಂಬುದೇ ಈ ಸ್ಟೋರಿಯ ಹೈಲೈಟ್ಸ್‌...
Vijaya Karnataka Web dog
| Screengrab from video | Courtesy : Digvijay Singh Khati/Twitter


Also Read : ತಂದೆ ಮೃತಪಟ್ಟ 10 ತಿಂಗಳ ಬಳಿಕ ಅವರು ಕಳುಹಿಸಿದ್ದ ಇಮೇಲ್ ಪುತ್ರಿಗೆ ಬಂದಿತ್ತು...!

ಜೀವನ ಎಂದರೆ ಕಷ್ಟಗಳು, ಸವಾಲುಗಳು ಎದುರಾಗುವುದು ಸಾಮಾನ್ಯ. ಆದರೆ, ಈ ಸವಾಲು, ಕಷ್ಟಗಳನ್ನು ಹೇಗೆ ಎದುರಿಸುತ್ತೇವೆ ಎಂಬುದೇ ಮುಖ್ಯ. ಒಂದೊಮ್ಮೆ ಸವಾಲುಗಳನ್ನು ನಾವು ಧೈರ್ಯದಿಂದ ಎದುರಿಸದಿದ್ದರೆ, ಆ ಸವಾಲುಗಳೇ ನಮ್ಮನ್ನು ಹೆದರಿಸಿ ಇನ್ನಷ್ಟು ಸಂಕಷ್ಟಕ್ಕೆ ದೂಡುತ್ತವೆ... ಹಾಗೆ ಆಗಲು ಬಿಡಬಾರದು... ದಿಢೀರ್ ಎದುರಾಗುವ ಕಷ್ಟಗಳನ್ನು ಹೇಗೆ ಎದುರಿಸಬೇಕು ಎಂಬುದಕ್ಕೆ ಈ ಶ್ವಾನ ಸಾಕ್ಷಿ...

Also Read : 32 ಮಹಡಿಯ ಕಟ್ಟಡದ ಮೇಲೆ ಮಕ್ಕಳ ಆಟ : ಭಯಾನಕ ವಿಡಿಯೋ ವೈರಲ್

ಹಾಯಾಗಿ ಮಲಗಿದ್ದಾಗ ಶ್ವಾನದ ಎದುರು ಕಾಣಿಸಿಕೊಂಡಿತ್ತು ಚಿರತೆ. ನಿರೀಕ್ಷೆಯೇ ಮಾಡದೇ ಇರುವಂತಹ ಸನ್ನಿವೇಶವಿದು. ಆದರೆ, ಚಿರತೆಯನ್ನು ಕಂಡೊಡನೆ ಶ್ವಾನ ಇಲ್ಲಿಂದ ಓಡಲಿಲ್ಲ. ಓಡಿದ್ದರೆ ಖಂಡಿತಾ ಅದು ಚಿರತೆಗೆ ಆಹಾರವಾಗುತ್ತಿತ್ತು. ಯಾಕೆಂದರೆ, ಓಡುವುದರಲ್ಲಿ ಚಿರತೆ ಸಖತ್ ಹುಷಾರ್. ಆದರೆ, ತಾನು ನಿಂತಲ್ಲಿಂದ ಓಡಿ ಹೋಗದೆ ಶ್ವಾನ ಚಿರತೆಯನ್ನು ಧೈರ್ಯದಿಂದ ಎದುರಿಸಿತ್ತು. ಬಹುಶಃ ಈ ಸವಾಲನ್ನು ಸ್ವತಃ ಚಿರತೆ ಕೂಡಾ ನಿರೀಕ್ಷೆ ಮಾಡಿರಲಿಲ್ಲವೇನೋ... ಹೀಗಾಗಿ, ಭರ್ಜರಿ ಬೇಟೆಯ ಕನಸಿನಲ್ಲಿ ಬಂದಿದ್ದ ಚಿರತೆಯೂ ಒಂದು ಕ್ಷಣ ತಬ್ಬಿಬ್ಬಾಗಿತ್ತು. ಒಂದು ಕ್ಷಣ ಚಿರತೆ ಹಿಂದಕ್ಕೆ ಹೆಜ್ಜೆ ಇಟ್ಟಂತೆಯೇ ಶ್ವಾನದ ಧೈರ್ಯವೂ ಸ್ವಲ್ಪ ಹೆಚ್ಚಾಯಿತು. ಹೀಗಾಗಿ, ತನ್ನ ಸೌಂಡನ್ನೂ ಸ್ವಲ್ಪ ಹೆಚ್ಚು ಮಾಡಿತ್ತು. ಪರಿಣಾಮ, ಅನಿವಾರ್ಯವಾಗಿ ಚಿರತೆ ಅಲ್ಲಿಂದ ಕಾಡು ಸೇರಿತು.

Also Read : ವಾಲ್‌ಪೇಪರ್‌ನಲ್ಲಿದ್ದ `ಸಂದೇಶ' ಎರಡು ದಶಕಗಳ ಬಳಿಕ ಮಹಿಳೆ ಕೈಸೇರಿತ್ತು...!

ರಾಜಸ್ಥಾನದಲ್ಲಿ ಸೆರೆಯಾದ ಈ ಹಳೆಯ ವಿಡಿಯೋವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ದಿಗ್ವಿಜಯ್ ಸಿಂಗ್ ಖತಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ, `ಇದರಲ್ಲಿ ಯಾರು ಶಕ್ತಿಶಾಲಿಗಳು...?' ಎಂದು ಇವರು ಪ್ರಶ್ನೆ ಕೇಳಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಐಎಫ್‌ಎಸ್ ಅಧಿಕಾರಿ ಸುಸಂತ ನಂದ ಅವರು ಈ ಟ್ವೀಟ್‌ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇದು ಬರೀ ಒಂದು ವಿಡಿಯೋ ಅಲ್ಲ. ಜೀವನ ಪಾಠವೂ ಹೌದು. ಸವಾಲುಗಳನ್ನು ಹೇಗೆ ಎದುರಿಸಬಹುದು ಎಂಬುದಕ್ಕೆ ಈ ಶ್ವಾನ ನಿದರ್ಶನ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ