ಆ್ಯಪ್ನಗರ

ವರ್ಕ್ ಫ್ರಮ್ ಹೋಮ್‌ನಲ್ಲಿರುವ ತಾಯಿ ಮಾಡಿದ ಐಡಿಯಾಕ್ಕೆ ನೀವು ಫಿದಾ ಆಗ್ತೀರಿ

ವರ್ಕ್‌ ಫ್ರಮ್‌ ಹೋಮ್‌ನಲ್ಲಿರುವ ಹೆತ್ತವರಿಗೆ ತಮ್ಮ ಮಕ್ಕಳನ್ನು ನಿಭಾಯಿಸುವುದು ತುಂಬಾ ಕಷ್ಟದ ಕೆಲಸ. ಆದರೆ, ಇದಕ್ಕೆ ಈ ತಾಯಿ ಕಂಡುಕೊಂಡ ಪರಿಹಾರ ಈಗ ಸಖತ್ ವರ್ಕೌಟ್ ಆಗಿದೆ.

Vijaya Karnataka Web 1 Apr 2020, 9:09 pm
ಕೊರೊನಾ ವೈರಸ್ ಭೀತಿ ಶುರುವಾದ ಮೇಲೆ ಬಹುತೇಕ ಕಂಪನಿಗಳು ತಮ್ಮ ಸಿಬ್ಬಂದಿಗೆ ವರ್ಕ್‌ ಫ್ರಮ್ ಹೋಮ್ ಅವಕಾಶ ನೀಡಿದೆ. ಹೀಗಾಗಿ, ಎಲ್ಲರೂ ಮನೆಯಿಂದಲೇ ಕಚೇರಿ ಕೆಲಸ ನಿರ್ವಹಿಸುತ್ತಿದ್ದಾರೆ. ಆದರೆ, ಮನೆಯಿಂದಲೇ ಕಚೇರಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ವರ್ಕ್‌ ಫ್ರಮ್ ಹೋಮ್ ಅದೆಷ್ಟು ಕಷ್ಟ ಎಂಬುದನ್ನು ಅದೆಷ್ಟೋ ಮೀಮ್ಸ್‌ಗಳು ಬಿಚ್ಚಿಟ್ಟಿವೆ.
Vijaya Karnataka Web idea
| Image Credit : reddit.com/r/funny/


Also Read : ಪ್ರಾಣಿಗಳಿಂದ ನಾವು ಕಲಿಯಬೇಕಾದ ವಿಷಯಗಳು ತುಂಬಾ ಇವೆ...!

ಅದರಲ್ಲೂ ಪುಟ್ಟ ಮಕ್ಕಳಿದ್ದ ಹೆತ್ತವರಿಗೆ ಮಕ್ಕಳನ್ನು ನಿಭಾಯಿಸಿಕೊಂಡು ಕೆಲಸ ಮಾಡುವುದು ಅಷ್ಟು ಸುಲಭವೇ ಅಲ್ಲ. ಆದರೆ, ಇದಕ್ಕೆ ಇಲ್ಲೊಬ್ಬರು ತಾಯಿ ಸಖತ್ತಾಗಿಯೇ ಐಡಿಯಾ ಮಾಡಿದ್ದಾರೆ. ಇವರ ಈ ಐಡಿಯಾ ಸಖತ್ ಆಗಿ ವರ್ಕೌಟ್ ಕೂಡಾ ಆಗಿದೆ. ಒಂದೆರಡು ದಿನಗಳಿಂದ ರೆಡ್ಡಿಟ್‌ನಲ್ಲಿ ತಾಯಿ ಬರೆದ ಪತ್ರವೊಂದು ವೈರಲ್ ಆಗುತ್ತಿದೆ.

Also Read : ಪೌರ ಕಾರ್ಮಿಕರಿಗೆ ಹೂಮಳೆಯ ಸ್ವಾಗತ : ಹೃದಯವಂತಿಕೆಗೆ ನೆಟ್ಟಿಗರು ಫಿದಾ

The joys of working from home. from r/funny
ಬಿಳಿ ಹಾಳೆಯಲ್ಲಿ ಈ ತಾಯಿ ತನ್ನ ಮಕ್ಕಳಿಗೆ ಒಂದಷ್ಟು ಸೂಚನೆಗಳನ್ನು ಬರೆದಿದ್ದಾರೆ. ಸೂಚನೆ ಎನ್ನುವುದಕ್ಕಿಂತಲೂ ಇವುಗಳು ಮಕ್ಕಳು ಆಗಾಗ ಕೇಳಬಹುದಾದ ಪ್ರಶ್ನೆಗಳಿಗೆ ಉತ್ತರಗಳು...! ತಾಯಿಗೆ ತನ್ನ ಮಕ್ಕಳು ಹೇಗಿರುತ್ತಾರೆಂದು ಗೊತ್ತಿರುತ್ತದೆ. ಮಕ್ಕಳು ಸಾಮಾನ್ಯವಾಗಿ ಕೇಳಬಹುದಾದಂತಹ ಪ್ರಶ್ನೆಗಳು ಏನೂ ಎಂಬುದೂ ಗೊತ್ತಿರುತ್ತದೆ. ಹೀಗಾಗಿ, ಮಕ್ಕಳು ತಾನು ಕೆಲಸ ಮಾಡುವ ಕೋಣೆಗೆ ಬಂದು ಪ್ರಶ್ನೆ ಕೇಳುವ ಮೊದಲೇ ಈ ತಾಯಿ ಬಾಗಿಲಿಗೆ `ಸಂಭಾವ್ಯ' ಪ್ರಶ್ನೆಗಳಿಗೆ ಉತ್ತರ ಬರೆದು ಅಂಟಿಸಿದ್ದರು.

Also Read : ಮೊಮ್ಮಗಳೊಂದಿಗೆ ಅಜ್ಜನ ಭರ್ಜರಿ ಸ್ಟೆಪ್ಸ್‌ : ಇದು ಮನಸೆಳೆಯುವ ವಿಡಿಯೋ

ಇದರಲ್ಲಿ ಮೊದಲ ಸೂಚನೆ `ಅಮ್ಮ 9: 30 ಗಂಟೆಯಿಂದ 11ರ ವರೆಗೆ ಮೀಟಿಂಗ್‌ನಲ್ಲಿ ಇರುತ್ತಾರೆ. ಹೀಗಾಗಿ, ಕೋಣೆಯೊಳಗೆ ಬರಬೇಡಿ' ಎಂದು ಸ್ಪಷ್ಟ ಸೂಚನೆ ಇದೆ. ಇದಾದ ಬಳಿಕ ಎರಡನೇ ಹಾಳೆಯಲ್ಲಿ ಒಂದಷ್ಟು ಉತ್ತರಗಳಿವೆ. ಇವೆಲ್ಲಾ ಒಂದು ಪದ ಉತ್ತರಗಳು...! ಸದ್ಯ ಈ ತಾಯಿಯ ಐಡಿಯಾಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಈ ಬಗ್ಗೆ ನೆಟ್ಟಿಗರು ಬಗೆಬಗೆ ಕಮೆಂಟ್‌ಗಳನ್ನೂ ಹಾಕಿದ್ದಾರೆ. ಜೊತೆಗೆ, ನಾವು ಎದುರಿಸುತ್ತಿರುವ ಸಮಸ್ಯೆಗಳಿಗೂ ಇದೊಂದು ಸೂಕ್ತ ಪರಿಹಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ