ಆ್ಯಪ್ನಗರ

ತಂದೆಯೇ ಕಾರ್ಟೂನ್ ಕ್ಯಾರೆಕ್ಟರ್ ಆಗಿ ಬದಲಾದಾಗ...! : ಇಲ್ಲಿದೆ ಫನ್ನಿ ವಿಡಿಯೋ

ಈ ಕ್ರಿಯೇಟಿವಿಟಿಗೆ ಮೆಚ್ಚಬೇಕು. ಕಾಡಿ ಬೇಡಿ ಯುವಕನೊಬ್ಬ ತನ್ನ ತಂದೆಯನ್ನೇ ಕಾರ್ಟೂನ್ ಕ್ಯಾರೆಕ್ಟರ್ ಆಗಿ ಬದಲಾಯಿಸಿದ್ದಾನೆ. ಈ ವಿಡಿಯೋ ನಿಮ್ಮಲ್ಲಿ ನಗೆಯುಕ್ಕಿಸುವುದು ಪಕ್ಕಾ...!

Vijaya Karnataka Web 3 Apr 2020, 11:27 am
ಈಗೋ... ಪ್ರಸಿದ್ಧ ಆನಿಮೇಟೆಡ್ ಸಿನೆಮಾ ಒಂದರ ಕ್ಯಾರೆಕ್ಟರ್. ಈ ಸಿನೆಮಾದ ಆಹಾರ ವಿಮರ್ಶಕನ ಪಾತ್ರವೇ ಈ ಈಗೋ. ಇಂತಹ ಪಾತ್ರ ನಿಜಜೀವನದಲ್ಲಿ ಎದುರಾದರೆ ಹೇಗಿರುತ್ತದೆ...? ಡೌಟೇ ಇಲ್ಲ, ಖಂಡಿತಾ ಈ ಕ್ಯಾರೆಕ್ಟರನ್ನು ಇಷ್ಟಪಡುವವರಿಗೆ ಖುಷಿ ಆಗಿಯೇ ಆಗುತ್ತದೆ.
Vijaya Karnataka Web cartoon
| Screengrab from video | Courtesy : TikTok/@JoeMele


Also Read : ಹಗಲಲ್ಲಿ ಸುಂದರ ಸ್ವರ್ಗದಂತೆ ಕಾಣುವ ಆ ಬೀಚ್‌ನಲ್ಲಿ ರಾತ್ರಿ ಆತ್ಮಗಳು ಓಡಾಡುತ್ತವಾ?

ಸದ್ಯ ಪುತ್ರನೊಬ್ಬ ಇದೇ ಖುಷಿಯನ್ನು ಪಡೆದಿದ್ದಾನೆ. ಅದೂ ತನ್ನ ತಂದೆಯನ್ನೇ ಈಗೋ ಕ್ಯಾರೆಕ್ಟರ್ ಆಗಿ ಬದಲಾಯಿಸಿ ಸಂಭ್ರಮಿಸಿರುವ ಯುವಕ ಈಗ ಎಲ್ಲರ ಗಮನ ಸೆಳೆದಿದ್ದಾನೆ. ಸದ್ಯ ಇಂತಹ ಖುಷಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿಯಾಗಿ ಹರಿದಾಡುತ್ತಿದೆ. ನಾನು ಈ ಪಾತ್ರ ಮಾಡಲ್ಲ ಮಾಡಲ್ಲ ಎಂದು ಹೇಳುತ್ತಲೇ ಪಾತ್ರದೊಳಗೆ ಪರಕಾರ ಪ್ರವೇಶ ಮಾಡುವ ತಂದೆಯೂ ಇಷ್ಟವಾಗುತ್ತಾರೆ. ಹೀಗಾಗಿ, ಈ ತಂದೆ ಪಾತ್ರವಾಗಿ ಬದಲಾಗುವ ವಿಡಿಯೋ ನೆಟ್ಟಿಗರಿಗೆ ನಗಲು ಇನ್ನೊಂದು ಕಾರಣವಾಗಿದೆ.

Also Read : ಕ್ಯಾನ್ಸರ್ ಪೀಡಿತ ಸೋದರಿಗಾಗಿ ಈ ತ್ಯಾಗ ! : ದೇವರೇ ಯಾರಿಗೂ ಕೊಡದಿರು ಇಂತಹ ಕಷ್ಟ!


ಟಿಕ್‌ಟಾಕ್ ಬಳಕೆದಾರ ಜೋ ಮಿಲೇ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ಈಗೋ ಕ್ಯಾರೆಕ್ಟರ್‌ನಂತೆ ಕಾಣುವ ಈ ವ್ಯಕ್ತಿ ಹಂತ ಹಂತವಾಗಿ ಪಾತ್ರಕ್ಕಾಗಿ ಬದಲಾಗುತ್ತಾ ಹೋಗುತ್ತಾರೆ. ಮೊದಲು ಮೂಲ ಪಾತ್ರದಂತೆ ಇವರಿಗೂ ಡ್ರೆಸ್ ತೊಡಿಸಿ, ತಲೆ ಕೂದಲನ್ನೂ ಚೆನ್ನಾಗಿ ಬಾಚಲಾಗಿತ್ತು. ಈಗೋ ರೀತಿಯೇ ಕೊಂಚ ಮೇಕಪ್ ಮಾಡಿಕೊಂಡು ಡೈನಿಂಗ್ ಟೇಬಲ್ ಮೇಲೆ ಆ ಕಲಾವಿದ ಕುಳಿತರೆ ಸಾಕ್ಷ್ಯಾತ್ ಆಹಾರ ವಿಮರ್ಶಕ ಈಗೋನೇ ಬಂದು ಕುಳಿತಿದ್ದಂತೆ ಕಾಣುತ್ತಿತ್ತು.

Also Read : 6 ತಿಂಗಳ ಗರ್ಭಿಣಿಯನ್ನು ಕೊಂದವರು ಯಾರು? : ಕೊನೆವರೆಗೂ ಸಿಗಲಿಲ್ಲ ಉತ್ತರ...!

ಈ ವಿಡಿಯೋ ವೈರಲ್ ಆಗುವುದಕ್ಕೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. ಯಾಕೆಂದರೆ, ಬಹುತೇಕರು ಈಗೋ ಎಂಬ ಕ್ಯಾರೆಕ್ಟರನ್ನು ಫಿಲಂನಲ್ಲಿ ಬಹುವಾಗಿ ಇಷ್ಟಪಟ್ಟಿದ್ದರು. ಹೀಗಾಗಿ, ಥೇಟ್ ಈಗೋ ತದ್ರೂಪವೇ ಎದುರಿಗಿದೆ ಎಂದರೆ ಬಿಡ್ತಾರಾ...? ಬಗೆಬಗೆ ಕಮೆಂಟ್ ಹಾಕಿ ಖುಷಿಪಟ್ಟಿದ್ದಾರೆ. ಇಷ್ಟಕ್ಕೂ ಮೂಲ ಚಿತ್ರದಲ್ಲಿ ಈಗೋ ಕ್ಯಾರೆಕ್ಟರ್ ಹೇಗಿದೆ..? ಇಲ್ಲಿದೆ ನೋಡಿ ಯುಟ್ಯೂಬ್ ದೃಶ್ಯ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ