ಆ್ಯಪ್ನಗರ

ಗ್ರೇಟ್ ಎಸ್ಕೇಪ್: ಮೆಚ್ಚಲೇಬೇಕು ಬೇಟೆಯ ಬಾಯಿಯಿಂದ ತಪ್ಪಿಸಿಕೊಂಡ ಜಿಂಕೆ ಜಾಣ್ಮೆಯನ್ನು

ಇದು ಜಿಂಕೆಯ ಜಾಣ್ಮೆಯ ಕತೆ. ಈ ವಿಡಿಯೋವನ್ನು ನೋಡಿದಾಗ ಹೇಗೆ ಸದಾ ಕಾಲ `ಅಲರ್ಟ್' ಆಗಿರಬೇಕು ಎಂದು ಗೊತ್ತಾಗುತ್ತದೆ. ವನ್ಯಲೋಕದ ಈ ವಿಡಿಯೋ ನಿಜಕ್ಕೂ ಅದ್ಭುತವಾಗಿದೆ.

Vijaya Karnataka Web 19 Jun 2020, 5:08 pm
ಮತ್ತೊಂದು ಜೀವಿಯನ್ನು ತಿಂದು ಇನ್ನೊಂದು ಜೀವಿ ಬದುಕುವುದು ಕಾಡಿನ ವ್ಯವಸ್ಥೆ. ಇದು ವನ್ಯಲೋಕದ ಆಹಾರ ಚಕ್ರವೂ ಹೌದು. ಆದರೆ, ಪ್ರತಿಯೊಂದು ಜೀವಿಗಳಿಗೆ ಬದುಕುವ ಆಸೆಯಂತೂ ಖಂಡಿತಾ ಇರುತ್ತದೆ. ಹೀಗಾಗಿ, ತಾನು ಯಾವುದೇ ಪ್ರಾಣಿಯ `ಬೇಟೆಯಾಗಬಾರದು' ಎಂದೇ ಎಲ್ಲಾ ಪ್ರಾಣಿಗಳು ಬಲು ಎಚ್ಚರಿಕೆಯಿಂದ ಓಡಾಡುತ್ತಿರುತ್ತವೆ.
Vijaya Karnataka Web Image by Birgit Röhrs from Pixabay
| Representative image | Image by Birgit Röhrs from Pixabay


ಪ್ರಾಣಿಗಳು ಸದಾ ಕಾಲ ಮೈಯೆಲ್ಲಾ ಕಣ್ಣಾಗಿರಿಸಿಕೊಂಡು ಹೇಗೆ ಬದುಕುತ್ತಿರುತ್ತವೆ ಎಂಬುದಕ್ಕೆ ಸಾಕ್ಷಿ ಇದು. ನಿರೀಕ್ಷೆಯೇ ಮಾಡದೆ ಇರುವಂತೆ ಕೆಲವೊಮ್ಮೆ ಅಪಾಯಗಳು ಕಣ್ಣೆದುರಿಗೆ ಬರುತ್ತವೆ. ಬೇಟೆಯಾಡುವಂತಹ ಪ್ರಾಣಿಗಳು ಧುತ್ತನೆ ಎದುರಿಗೆ ಪ್ರತ್ಯಕ್ಷವಾಗಿ ಸಣ್ಣ ಪ್ರಾಣಿಗಳಲ್ಲಿ ಭೀತಿ ಮೂಡಿಸುತ್ತವೆ. ಆದರೆ, ಈ ಸಂದರ್ಭದಲ್ಲಿ ಶಕ್ತಿಶಾಲಿ ಪ್ರಾಣಿಯ ಎದುರು ದುರ್ಬಲ ಪ್ರಾಣಿ ಆ ಒಂದು ಸೆಕೆಂಡಿನಲ್ಲಿ ಹೇಗೆ ಜಾಣ್ಮೆ ಪ್ರದರ್ಶಿಸುತ್ತದೆ ಎಂಬುದರ ಮೇಲೆ ಆ ಪ್ರಾಣಿಯ ಬದುಕು ಉಳಿದಿರುತ್ತದೆ. ಅಂತಹದ್ದೇ ಒಂದು ಜಾಣ್ಮೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : ಡ್ರೋನ್ ಮೂಲಕ ಮಕ್ಕಳ ಕೈ ಸೇರುತ್ತಿದೆ ಪುಸ್ತಕ : ಲೈಬ್ರೇರಿಯನ್ ಮಾದರಿ ಹೆಜ್ಜೆ

ಅದೊಂದು ಕೊಳ. ಮುದ್ದು ಜಿಂಕೆ ಆ ಕೊಳದಲ್ಲಿ ನೀರು ಕುಡಿಯುತ್ತಿದೆ. ಆ ಕ್ಷಣಕ್ಕೆ ಅಲ್ಲಿ ಭಯಗೊಳ್ಳುವ ಯಾವುದೇ ಸನ್ನಿವೇಶ ಇರುವುದಿಲ್ಲ. ಹೀಗಾಗಿ, ಧೈರ್ಯದಿಂದಲೇ ಜಿಂಕೆ ನೀರು ಕುಡಿಯುತ್ತಿತ್ತು. ಆದರೆ, ಅರೆಕ್ಷಣದಲ್ಲಿ ಅಲ್ಲಿ ಪರಿಸ್ಥಿತಿಯೇ ಬದಲಾಗಿ ಹೋಗಿತ್ತು. ಆ ದೃಶ್ಯ ಒಂದು ಕ್ಷಣ ನಮ್ಮನ್ನೂ ಬೆಚ್ಚಿ ಬೀಳಿಸುವಂತಿದೆ...!

Also Read : ಅಂಗೈಯಲ್ಲಿ ಹಿಡಿದ ನೀರು ಕುಡಿಯುವ ಹಾವು : ಅಚ್ಚರಿಯ ವಿಡಿಯೋಗೆ ನೆಟ್ಟಿಗರು ಫಿದಾ


ನೋಡಿದಿರಲ್ಲಾ ಮೊಸಳೆಯ ದಾಳಿಯನ್ನು. ಇಲ್ಲಿ ಜಿಂಕೆಯನ್ನು ಮೆಚ್ಚಲೇಬೇಕು. ಅರೆಕ್ಷಣ ಜಿಂಕೆ ಮೈಮರೆತಿದ್ದರೂ ಮೊಸಳೆಯ ಹೊಟ್ಟೆ ಸೇರಬೇಕಾಗಿತ್ತು. ಇದೇ ಕಾರಣಕ್ಕೆ ಈ ವಿಡಿಯೋ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಜಿಂಕೆಯ ಜಾಣ್ಮೆಯನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

Also Read : ಖರೀದಿಸಿದ ಅರೆಕ್ಷಣದಲ್ಲೇ ಶೋರೂಮ್ ಗೇಟ್‌ ಬಳಿಯೇ ಹೊಸ ಕಾರು ಪಲ್ಟಿ!

ಕೆಲ ದಿನಗಳ ಹಿಂದೆ ಸುಸಂತ ನಂದ ಅವರು ಇದೇ ತೆರನಾದ ಇನ್ನೊಂದು ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋದಲ್ಲಿ ಮುದ್ದು ಜಿಂಕೆ ಸಿಂಹದ ಬಾಯಿಯಿಂದ ಜಾಣತನದಿಂದ ತಪ್ಪಿಸಿಕೊಂಡಿತ್ತು. ಭರ್ಜರಿ ಬೇಟೆಯ ಆಸೆಯಲ್ಲಿ ಧೂಳೆಬ್ಬಿಸಿ ಬೆನ್ನಟ್ಟಿಕೊಂಡು ಬಂದಿದ್ದ ಸಿಂಹ ಜಿಂಕೆಯ ಜಾಣ್ಮೆ ಎದುರು ಏನೂ ಸಿಗದೆ ಮರಳಬೇಕಾಗಿತ್ತು...!

ಖಂಡಿತಾ ಜಿಂಕೆಯ ಜಾಣ್ಮೆ ಮೆಚ್ಚಬೇಕಾಗಿದ್ದೇ. ಪ್ರಾಣ ಹೋಗುವ ಸಂದರ್ಭ ಬಂದಾಗ ಬಲು ಚಾಕಚಕ್ಯತೆಯಿಂದ ಇವುಗಳು ತಮ್ಮ ಜೀವನವನ್ನು ಉಳಿಸಿಕೊಂಡಿವೆ. ಇದೇ ಕಾರಣಕ್ಕೆ ಈ ವಿಡಿಯೋ ನೆಟ್ಟಿಗರಿಗೆ ಬಲು ಇಷ್ಟವಾಗಿದ್ದು, ಎಲ್ಲರೂ ಕುತೂಹಲದಿಂದಲೇ ಈ ವಿಡಿಯೋ ನೋಡಿ ಖುಷಿಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ