Please enable javascript.Super Cute Video,ಶ್ವಾನ ಮತ್ತು ಮಗುವಿನ ಆಟದ ಸೊಬಗು : ಅರೆಕ್ಷಣದಲ್ಲಿ ಸೆಳೆದು ಬಿಡುತ್ತದೆ ಮುದ್ದಾದ ಈ ವಿಡಿಯೋ - video of a 2 year old kid joyfully playing fetch with neighbour's dog is going viral - Vijay Karnataka

ಶ್ವಾನ ಮತ್ತು ಮಗುವಿನ ಆಟದ ಸೊಬಗು : ಅರೆಕ್ಷಣದಲ್ಲಿ ಸೆಳೆದು ಬಿಡುತ್ತದೆ ಮುದ್ದಾದ ಈ ವಿಡಿಯೋ

Vijaya Karnataka Web 22 Sep 2020, 10:47 am
Subscribe

ಮಗು ಮತ್ತು ಶ್ವಾನ ಆಟ ಆಡುವ ಮುದ್ದಾದ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸೊಬಗಿನ ದೃಶ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

baby
| Screengrab from video | Courtesy : @HopkinsBRFC/Twitter
ಮಕ್ಕಳ ಆಟವನ್ನು ನೋಡುವುದೇ ಸೊಗಸು... ತಮ್ಮದೇ ಸ್ವಚ್ಛಂದ ಲೋಕದಲ್ಲಿ ವಿಹರಿಸುತ್ತಿರುವ ಈ ಪುಟಾಣಿಗಳಿಗೆ ಪ್ರತಿ ಗಳಿಗೆಯೂ ಖುಷಿಯ ಕ್ಷಣವೇ. ಇಂತಹ ಪುಟಾಣಿಗಳ ಖುಷಿಯ ಕ್ಷಣಕ್ಕೆ ಒಮ್ಮೊಮ್ಮೆ ಶ್ವಾನಗಳೂ ಜೊತೆಯಾಗುತ್ತವೆ. ಶ್ವಾನಗಳೊಂದಿಗೆ ಮಕ್ಕಳು ಬಹುಬೇಗ ಆಪ್ತರಾಗುತ್ತಾರೆ. ಶ್ವಾನಗಳೂ ಅಷ್ಟೇ ಪ್ರೀತಿಯಿಂದ ಇರುತ್ತವೆ. ಹೀಗೆ ಮುಗ್ಧ ಮಕ್ಕಳು ಮತ್ತು ಮುದ್ದಾದ ಶ್ವಾನದ ಆಟವೂ ಮನಸ್ಸಿಗೆ ಹಿತ ನೀಡುತ್ತವೆ.

ಇಂಟರ್‌ನೆಟ್‌ನಲ್ಲಿ ಇಂತಹ ಸೂಪರ್ ಕ್ಯೂಟ್ ವಿಡಿಯೋಗಳು ಬೇಕಾದಷ್ಟು ಕಾಣಸಿಗುತ್ತವೆ. ಈ ಅಪೂರ್ವ ವಿಡಿಯೋಗಳು ಕ್ಷಣಾರ್ಧದಲ್ಲಿ ನಮ್ಮನ್ನು ಸೆಳೆದು ಬಿಡುತ್ತದೆ. ಜೊತೆಗೆ, ನಮ್ಮ ಮನಸ್ಸಿನ ಬೇಸರವನ್ನೂ ದೂರ ಮಾಡಿ ಮನಸ್ಸು ಉಲ್ಲಾಸಗೊಳ್ಳುವಂತೆ ಮಾಡುತ್ತದೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನಮನ ಗೆದ್ದಿದೆ.

Also Read : ಬೋರ್‌ವೆಲ್‌ನಿಂದ ನೀರು ಕುಡಿಯುವ ಎಮ್ಮೆ : ಬೆರಗು ಮೂಡಿಸುತ್ತದೆ ಈ ಜಾಣತನ

ಇದು ಪಕ್ಕದ ಮನೆಯ ಶ್ವಾನ ಮತ್ತು ಮುದ್ದಾದ ಮಗುವಿನ ಆಟದ ವಿಡಿಯೋ. ಮಗು ತನ್ನ ಮನೆಯ ಬಳಿ ಇದ್ದರೆ, ಶ್ವಾನ ಇನ್ನೊಂದು ಮನೆಯ ಬಳಿ ಇತ್ತು. ಆದರೆ, ಈ ಇಬ್ಬರು ಗೆಳೆಯರು ಬೇಲಿಯ ಆಚೆ ಚೆಂಡನ್ನು ಎಸೆದು ಅದ್ಭುತವಾಗಿ ಆಡುತ್ತಾ ಕಾಲ ಕಳೆದಿದ್ದಾರೆ. ಕಂದ ಬೇಲಿಯ ಆಚೆ ಚೆಂಡನ್ನು ಎಸೆದರೆ, ಜಾಣ ಶ್ವಾನ ಅದನ್ನು ಕ್ಯಾಚ್ ಹಿಡಿದು ಮತ್ತೆ ಕಂದನಿದ್ದಲ್ಲಿಗೆ ಎಸೆಯುತ್ತಿತ್ತು. ಈ ದೃಶ್ಯವೇ ಅಪೂರ್ವವಾಗಿದೆ.


Also Read : Humanity : ಕಂದನನ್ನು ಅಪಾಯದಿಂದ ಪಾರು ಮಾಡಿದ ಹೃದಯವಂತ : ತನ್ನ ಜೀವದ ಹಂಗು ತೊರೆದು ಸಾಹಸ...!

20 ಸೆಕೆಂಡುಗಳ ವಿಡಿಯೋ ಕ್ಲಿಪ್ ಇದು. ಈ ಸಣ್ಣ ವಿಡಿಯೋ ಅರೆಕ್ಷಣದಲ್ಲಿ ನಮ್ಮನ್ನು ಸೆಳೆದು ಬಿಡುವುದು ಪಕ್ಕಾ. ಸೈಮನ್ ಬಿಆರ್‌ಎಫ್‌ಸಿ ಹಾಪ್‌ಕಿನ್ಸ್ ಎಂಬ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದೆ. ತನ್ನ ಮುದ್ದು ಫ್ರೆಂಡ್ ಜೊತೆ ಆಡುವ ಪ್ರತಿಕ್ಷಣವನ್ನೂ ಮಗು ಎಂಜಾಯ್ ಮಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಶ್ವಾನದೊಂದಿಗೆ ಆಡುವ ಉಲ್ಲಾಸದಲ್ಲಿ ಕಂದನಿದ್ದರೆ, ಕಂದನೊಂದಿಗೆ ಆಡುವ ಖುಷಿಯಲ್ಲಿ ಶ್ವಾನವಿತ್ತು. ಇದನ್ನು ದೃಶ್ಯದಲ್ಲಿ ಸ್ಪಷ್ಟವಾಗಿ ನೋಡಬಹುದಾಗಿದೆ.

Also Read : Shocking Video : ಹೋವರ್‌ಬೋರ್ಡ್‌ನಲ್ಲಿ ಸಾಗುತ್ತಲೇ ರೋಗಿಯ ಹಲ್ಲು ತೆಗೆದ ದಂತವೈದ್ಯನಿಗೆ ಶಿಕ್ಷೆ!

ಇಂತಹ ಅದ್ಭುತ ವಿಡಿಯೋ ವೈರಲ್ ಆಗದೇ ಇರುವುದೇ...? ಎರಡು ವರ್ಷದ ಕಂದ ಮತ್ತು ಶ್ವಾನದ ಈ ಆಟದ ಸೊಬಗು ಎಲ್ಲರಲ್ಲೂ ಖುಷಿ ಕೊಟ್ಟಿದೆ. ಎಲ್ಲರೂ `ಕ್ಯೂಟ್' ಎಂದು ಮೆಚ್ಚುಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು `ಅದ್ಭುತವಾಗಿದೆ' ಎಂದೂ ಬಣ್ಣಿಸಿದ್ದಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ