ಆ್ಯಪ್ನಗರ

ಸುಸ್ತಾಗಿ ಕಾಲುಜಾರಿ ಬೀಳುತ್ತಿದ್ದರೂ ಪ್ರಯತ್ನ ಬಿಡದ ಮರಿಯಾನೆ : ಈ ಓಟ, ಆಟದ ದೃಶ್ಯವೇ ಸುಂದರ

ಇದೊಂದು ಅಪೂರ್ವ ದೃಶ್ಯ. ಆನೆಯೊಂದು ಎರಡು ಹಂದಿ ಮರಿಗಳನ್ನು ಓಡಿಸಿ ಆಟ ಆಡುವ ಈ ತುಂಟತನದ ದೃಶ್ಯವೇ ಸುಂದರವಾಗಿದೆ.

Vijaya Karnataka Web 21 Nov 2020, 9:54 am
ಕಾಡಿನಲ್ಲಿ ಓಡುವ ಆಟ... ಕಾಡು ಹಂದಿಗಳಿಗೆ ಆನೆಗೆ ಸಿಗಬಾರದು ಎಂಬ ಹಠ... ಆನೆಗೆ ಕಾಡು ಹಂದಿಗಳನ್ನು ಬಿಡಬಾರದು ಎಂದು ಛಲ...
Vijaya Karnataka Web Image by Andrea Bohl from Pixabay
| Representative image | Image by Andrea Bohl from Pixabay


ಆನೆಗಳು ಸದಾ ಖುಷಿ ಖುಷಿಯಾಗಿ ಇರುವ ಪ್ರಾಣಿಗಳು. ಇವುಗಳು ತುಂಟಾಟವನ್ನು ನೋಡುವುದೇ ಒಂದು ಸುಂದರ ಅನುಭವ. ಅದರಲ್ಲೂ ಮರಿಯಾನೆಗಳ ತುಂಟಾಟ ನಿಜಕ್ಕೂ ಮನಸ್ಸಿಗೆ ಹಿತ ನೀಡುತ್ತದೆ. ಈ ಮರಿಯಾನೆಗಳ ಆಟಗಳನ್ನು ಎಷ್ಟು ನೋಡಿದರೂ ಮನಸ್ಸು ತಣಿಯದು. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲೂ ಒಂದಲ್ಲ ಒಂದು ಆನೆಗಳ ಇಂತಹ ಅಪೂರ್ವ ವಿಡಿಯೋಗಳು ಪ್ರತಿದಿನ ಕಾಣಸಿಗುತ್ತವೆ. ಈ ಎಲ್ಲಾ ದೃಶ್ಯಗಳನ್ನು ಕ್ಷಣಾರ್ಧದಲ್ಲಿ ನಮ್ಮ ಮನಸೂರೆಗೊಳ್ಳುತ್ತವೆ. ಇದೀಗ ಇಂತಹದ್ದೇ ಇನ್ನೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದಿದೆ.

Also Read : Caught On Camera : ಪಿಜ್ಜಾದಿಂದ ಪೊಲೀಸರಿಗೆ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ...!

ಇದು ಆನೆಯೊಂದು ತನ್ನ `ಏರಿಯಾ'ದಲ್ಲಿದ್ದ ಎರಡು ಕಾಡುಹಂದಿಗಳನ್ನು ಬೆನ್ನಟ್ಟುವ ವಿಡಿಯೋ. ಇದು ಆನೆಯ ಆಟವೇ ಆದರೂ ಇಲ್ಲಿ ಈ ಮರಿಯಾನೆಯ ಛಲ ಮಾತ್ರ ಎದ್ದು ಕಾಣುತ್ತದೆ. ಓಡಿ ಓಡಿ ಸುಸ್ತಾದರೂ ಈ ಆನೆ ಕೊನೆತನಕ ತನ್ನ ಪ್ರಯತ್ನವನ್ನು ಬಿಡುವುದಿಲ್ಲ...

Also Read : ಬೇರೊಬ್ಬರ ದೇಹದಲ್ಲಿದ್ದ ತನ್ನ ಮಗನ ಹೃದಯದ ಬಡಿತ ಆಲಿಸಿದ ತಾಯಿ! : ಭಾವನಾತ್ಮಕ ದೃಶ್ಯವಿದು

View this post on Instagram A post shared by Sheldrick Wildlife Trust (@sheldricktrust)

ಕಾಡಿನ ಜೀವಿಗಳ ಬದುಕೇ ಆಸಕ್ತಿದಾಯಕ. ಈ ಕ್ಲಿಪ್ ಕೂಡಾ ವನ್ಯಜೀವಿಗಳ ಬದುಕನ್ನು ನೋಡುವ ಆಸಕ್ತಿಯನ್ನು ಇನ್ನೂ ಹೆಚ್ಚು ಮಾಡುತ್ತದೆ. ಇದು ನೈರೋಬಿ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಯಾದ ದೃಶ್ಯ. ಇಲ್ಲಿನ ಬೊಂಡೆನಿ ಎಂಬ ಆನೆ ಇದೇ ಅರಣ್ಯದಲ್ಲಿರುವ ಎರಡು ಕಾಡುಹಂದಿಗಳನ್ನು ಬೆನ್ನಟ್ಟುತ್ತಾ ಆಟ ಆಡಿದೆ. ತಾನೇ ಶುರು ಮಾಡಿದ ಈ ಆಟದಲ್ಲಿ ಯಶಸ್ಸು ಕಾಣಬೇಕು ಎಂಬುದು ಬೊಂಡೆನಿ ಛಲ. ಹೀಗಾಗಿ, ಈ ಓಟದ ವೇಳೆ ಕೆಲವು ಸಲ ಸುಸ್ತಾಗಿ ಕಾಲು ಜಾರಿ ಬಿದ್ದರೂ ಇವನು ತನ್ನ `ಕೆಲಸ'ವನ್ನು ನಿಲ್ಲಿಸಲಿಲ್ಲ. ಈ ವಿಶಿಷ್ಟ ವಿಡಿಯೋವನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್‌ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದೆ.

Also Read : 2020ರ ಕೊನೆಯ ಸೂರ್ಯಾಸ್ತ! : ಇಲ್ಲಿ 2021ರ ಜನವರಿ 22ರವರೆಗೆ ಸೂರ್ಯ ಉದಯಿಸುವುದೇ ಇಲ್ಲ!

ತನ್ನ ಪ್ರದೇಶದಿಂದ ಅವುಗಳನ್ನು ತೆರವುಗೊಳಿಸುವುದು ಬೊಂಡೆನಿಯ ಪ್ರಮುಖ ಉದ್ದೇಶವಾಗಿತ್ತು. ಹೀಗಾಗಿ, ತನ್ನ ಈ `ತೆರವು ಕಾರ್ಯಾಚರಣೆ'ಯ ಬಗ್ಗೆ ಬೊಂಡೆನಿ ಸಖತ್ ಆಸಕ್ತಿ ಹೊಂದಿದ್ದ. ತಾನು ನೆಲಕ್ಕೆ ಉರುಳುತ್ತಿದ್ದರೂ ಇವನು ಪ್ರಯತ್ನವನ್ನು ಬಿಟ್ಟಿರಲಿಲ್ಲ.

ಶೆಲ್ಡ್ರಿಕ್ ವೈಲ್ಡ್‌ಲೈಫ್‌ ಟ್ರಸ್ಟ್‌ನ ಆರೈಕೆಯಲ್ಲಿರುವ ಕಿರಿಯ ಅನಾಥ ಆನೆಗಳಲ್ಲಿ ಬೊಂಡೆನಿ ಕೂಡಾ ಸೇರಿದ್ದಾನೆ. ಸದ್ಯ ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ಹಲವರ ಗಮನ ಸೆಳೆದಿದೆ. ಎಲ್ಲರಿಗೂ ಬೊಂಡೆನಿ ಛಲ ಇಷ್ಟವಾಗಿದೆ. ಲಕ್ಷಾಂತರ ವೀಕ್ಷಣೆ ಮತ್ತು ಲೈಕ್ಸ್‌ ಗಳಿಸುವಲ್ಲಿ ಈ ವಿಡಿಯೋ ಸಕ್ಸಸ್ ಆಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ