ಆ್ಯಪ್ನಗರ

Adorable Video : ಯುವಕನೊಂದಿಗೆ ಮರಿಯಾನೆಯ ಆಟ : ಇದು ಮುದ ನೀಡುವ ವಿಡಿಯೋ

ಮರಿಯಾನೆಯೊಂದು ಯುವಕನೊಂದಿಗೆ ಆಟ ಆಡುವ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಮನಸ್ಸಿನಲ್ಲೇನಾದರೂ ಬೇಜಾರಿದ್ದಾಗ ಈ ವಿಡಿಯೋ ನೋಡಿದರೆ ಎಲ್ಲಾ ನೋವೂ ಒಂದು ಕ್ಷಣಕ್ಕೆ ದೂರವಾಗುತ್ತದೆ.

Vijaya Karnataka Web 28 Jan 2020, 10:43 am
ಸಾಮಾಜಿಕ ಮಾಧ್ಯಮಗಳು ಈಗ ಜನರ ಅಚ್ಚುಮೆಚ್ಚಿನ ಫ್ರೆಂಡ್. ಸದಾ ಕಾಲ ಬಹುತೇಕ ಜನ ಈ ಸೋಶಿಯಲ್ ಮೀಡಿಯಾದಲ್ಲಿ ಬ್ಯುಸಿ ಇರುತ್ತಾರೆ. ಇಂತಹ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಮನಸ್ಸಿಗೆ ಹಿತ ನೀಡುವ ವಿಡಿಯೋಗಳಿರುತ್ತವೆ. ಇಂತಹ ಅದ್ಭುತ ವಿಡಿಯೋಗಳನ್ನು ನೋಡಿದಾಗ ನಮ್ಮ ಮುಖದಲ್ಲೊಂದು ಮಂದಹಾಸ ಮೂಡುತ್ತದೆ. ಸದ್ಯ ಇಂತಹದ್ದೇ ಮುದ ನೀಡುವ ವಿಡಿಯೋವೊಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿದೆ.
Vijaya Karnataka Web elephant
| Screengrab from video |


Also Read : ವಿಮಾನವನ್ನು ಮದುವೆಯಾಗುತ್ತಾರಂತೆ ಈ ಯುವತಿ...! : ಮಾರ್ಚಿನಲ್ಲಿ ನಡೆಯಲಿದೆ ಕಲ್ಯಾಣ...!

ರಾಜ್ಯಸಭಾ ಸದಸ್ಯ ಜಾರ್ಖಂಡಿನ ಪರಿಮಳ್ ನಥ್ವಾನಿ ಇಂತಹದ್ದೊಂದು ಸುಂದರ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮರಿಯಾನೆಯೊಂದು ಅಲ್ಲೇ ಪಕ್ಕದಲ್ಲಿದ್ದ ಯುವಕನನ್ನು ತನ್ನ ಸೊಂಡಿಲಿನಲ್ಲಿ ಎಳೆದು ಆಟ ಆಡುವ ದೃಶ್ಯವಿದೆ.

Also Read : ಫುಲ್ ಟೈಟಾಗಿ ಮತ್ತೊಬ್ಬರ ಮನೆಗೆ ಹೋಗಿ ನೂಡಲ್ಸ್‌ ಮಾಡಿ ತಿಂದು ಮಲಗಿದ ವ್ಯಕ್ತಿ : ಮುಂದಿನದ್ದು ಇಂಟ್ರೆಸ್ಟಿಂಗ್...!


ಫುಲ್ ಆಟ ಆಡುವ ಮೂಡ್‌ನಲ್ಲಿದ್ದ ಮರಿ ಅಲ್ಲೇ ಫೆನ್ಸಿಂಗ್‌ಗೆ ಪೇಂಟ್ ಬಳಿಯುತ್ತಿದ್ದ ಯುವಕನನ್ನು ಆಟವಾಡಲು ತನ್ನತ್ತ ಸೆಳೆದಿದೆ. ಜೊತೆಗೆ, ಸ್ವಚ್ಛಂದವಾಗಿ ಆಟವಾಡಲು ಫೆನ್ಸಿಂಗ್ ದಾಟುವುದಕ್ಕೂ ಆನೆ ಯತ್ನಿಸಿದೆ. ಈ ಮುಗ್ಧ ವಿಡಿಯೋವನ್ನು ನೋಡಿದಾಗ ಮನಸ್ಸಿನ ನೋವೆಲ್ಲಾ ದೂರವಾಗುತ್ತದೆ.

Also Read : ಕಾರಿನ ಮುಂದಿನ ಸೀಟ್‌ನಲ್ಲಿತ್ತು ಅಸ್ಥಿಪಂಜರ...! : `ಸತ್ಯ' ಕಥೆ ಕೇಳಿ ಪೊಲೀಸರಿಗೇ ಶಾಕ್...!

ಈ ವಿಡಿಯೋ ಎಲ್ಲರಿಗೂ ಇಷ್ಟವಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ನೆಟ್ಟಿಗರು ಬಗೆಬಗೆ ಕಮೆಂಟ್ ಹಾಕಿ ಈ ಆನೆಯ ತುಂಟಾಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಜಕ್ಕೂ ಈ ವಿಡಿಯೋ ಮುಖದಲ್ಲೊಂದು ನಗು ತರಿಸುತ್ತದೆ. ಮಗುವಿನ ಮನಸ್ಸಿನ ಆನೆಯ ಆಟ ಮನಸ್ಸಿನ ನೋವನ್ನು ಮರೆಸುತ್ತದೆ...

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ