ಆ್ಯಪ್ನಗರ

Best Reaction : ಮೊದಲ ಬಾರಿ ಐಸ್‌ಕ್ರೀಮ್ ತಿಂದ ಪುಟ್ಟ ಕಂದ : ಪುಟಾಣಿಯ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ...?

9 ತಿಂಗಳ ಕಂದನ ವಿಡಿಯೋವೊಂದು ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಮೊದಲ ಬಾರಿಗೆ ಐಸ್‌ಕ್ರೀಮ್ ರುಚಿ ನೋಡಿದ ಮಗುವಿನ ಪ್ರತಿಕ್ರಿಯೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Vijaya Karnataka Web 22 Jan 2020, 10:31 am
ಹಾಲುಗಲ್ಲದ ಕಂದಮ್ಮಗಳ ಬೆಳವಣಿಗೆಗಳನ್ನು ನೋಡುವುದೇ ಕಣ್ಣಿಗೆ ಹಬ್ಬ... ಮುದ್ದು ನಗುವಿನಲ್ಲಿ, ನಿಷ್ಕಲ್ಮಷ ಹೃದಯದಲ್ಲಿ ದೇವರಂತಹ ಪುಟಾಣಿಗಳು ಎಲ್ಲರನ್ನೂ ಸೆಳೆಯುತ್ತಾರೆ. ಅದರಲ್ಲೂ ಮಕ್ಕಳ ಮೊದಲ ಹೆಜ್ಜೆ, ಮೊದಲ ಮಾತು, ಮೊದಲ ನಗು ಎಲ್ಲವೂ ಆಪ್ಯಾಯಮಾನ.
Vijaya Karnataka Web first ice cream taste
| Screengrab from video |


ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ಮಗು ಮೊದಲ ಬಾರಿಗೆ ಐಸ್ ಕ್ರೀಮ್ ಸವಿಯುವ ಕ್ಷಣ. ಮೊದಲ ಬಾರಿಗೆ ಐಸ್‌ ಕ್ರೀಮ್ ರುಚಿ ಕಂಡ ಕಂದನ ಆ ಖುಷಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Also Read : ಸೆಕೆಂಡ್ ಹ್ಯಾಂಡ್ ಫರ್ನಿಚರ್‌ನೊಳಗಿತ್ತು 30.6 ಲಕ್ಷ ರೂಪಾಯಿ...!

ಬ್ರಿಟಾನಿ ಮತ್ತು ಬ್ಲೇಕ್ಲಿ ದಂಪತಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕರೆದುಕೊಂಡು ವಿಹಾರಕ್ಕೆಂದು ಬಂದಿದ್ದರು. ಈ ವೇಳೆ, ತಮ್ಮ 9 ತಿಂಗಳ ಎರಡನೇ ಮಗಳಿಗೆ ಐಸ್ ಕ್ರೀಮ್ ತಿನ್ನಿಸುವ ಆಸೆ ಈ ದಂಪತಿಗಾಗಿತ್ತು. ಇದೇ ಮೊದಲ ಬಾರಿಗೆ ಕಂದಮ್ಮ ಐಸ್‌ ಕ್ರೀಮ್‌ನ ರುಚಿ ನೋಡುತ್ತಿದ್ದಳು. ಹೀಗಾಗಿ, ಈ ಕ್ಷಣವನ್ನು ತಾಯಿ ಬ್ರಿಟಾನಿ ತನ್ನ ಮೊಬೈಲ್‌ ಫೋನ್‌ನಲ್ಲಿ ಸೆರೆಹಿಡಿಯುತ್ತಿದ್ದರು. ತಂದೆ ಬ್ಲೇಕ್ಲಿ ಮಗುವನ್ನು ಹಿಡಿದುಕೊಂಡು ಐಸ್ ಕ್ರೀಮ್ ತಿನ್ನಿಸುತ್ತಿದ್ದರು. ಐಸ್‌ಕ್ರೀಮ್‌ ಬಾಯಿಗಿಡುತ್ತಿದ್ದಂತೆಯೇ ಕಂದ ಈ ರುಚಿಗೆ ಮಾರು ಹೋಗಿದ್ದಳು. ಹೀಗಾಗಿ, ಕಣ್ಣರಳಿಸಿ ಐಸ್‌ ಕ್ರೀಮ್‌ ಅನ್ನು ಮತ್ತೆ ಎಳೆದು ತಿನ್ನುವುದಕ್ಕೆ ಆರಂಭಿಸಿದ್ದಳು ಪುಟಾಣಿ. ಕಂದನ ಈ ಮೊದಲ ಪ್ರತಿಕ್ರಿಯೆ ಕಂಡು ದಂಪತಿ ಬಿದ್ದು ಬಿದ್ದು ನಕ್ಕಿದ್ದರು.

Also Read : ಮದುಮಗಳ ರೂಪದಲ್ಲಿದ್ದ ಪುರುಷ...! : ಮದುವೆಯಾದ 2 ವಾರದ ಬಳಿಕ ಗಂಡನಿಗೆ ಗೊತ್ತಾಯ್ತು ರಹಸ್ಯ...!

@mamabritti #cute #funny #waitforit #love ♬ original sound - mamabritti
ಸದ್ಯ ಇದೇ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ನೆಟ್ಟಿಗರೂ ಈ ವಿಡಿಯೋ ಕಂಡು ಸಖತ್ ಖುಷಿಪಟ್ಟಿದ್ದಾರೆ. ಮಗುವಿನ ಈ ಮುಗ್ಧ ಪ್ರತಿಕ್ರಿಯೆ ಎಲ್ಲರನ್ನು ಬಹುವಾಗಿಯೇ ಸೆಳೆದಿದೆ.

Also Read : ನೋಡು ನೋಡುತ್ತಿದ್ದಂತೆಯೇ ರಸ್ತೆಯಲ್ಲಿ ಬಾವಿಯಾಳದ ಗುಂಡಿಯೊಳಗೆ ಬಿದ್ದ ಬಸ್: 9 ಮಂದಿ ದುರ್ಮರಣ...!

ಆರಂಭದಲ್ಲಿ ಈ ವಿಡಿಯೋ ಟಿಕ್‌ಟಾಕ್‌ನಲ್ಲಿ ಅಪ್ಲೋಡ್ ಆಗಿತ್ತು. ಬಳಿಕ ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲೂ ಇದು ಹರಿದಾಡುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ