ಆ್ಯಪ್ನಗರ

ಈ ಮಾಸ್ಕ್‌ ಎಲ್‌ಇಡಿ ಬಲ್ಬ್‌ಗಳಿಂದ ಬೆಳಗುತ್ತಿರುತ್ತದೆ...!

ಎಲ್‌ಇಡಿ ಬಲ್ಬ್‌ಗಳನ್ನೊಳಗೊಂಡ ಮಾಸ್ಕ್‌ ಧರಿಸಿದ ವ್ಯಕ್ತಿಯೊಬ್ಬರು ಈಗ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಇವರ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Vijaya Karnataka Web 20 Jul 2020, 4:44 pm
ಕೊರೊನಾ ವೈರಸ್ ಎಂಬ ಮಹಾಮಾರಿ ಈಗ ಜನರ ರಕ್ತ ಹೀರುತ್ತಿದೆ. ಈ ಡೆಡ್ಲಿ ಸೋಂಕಿನಿಂದ ಜನ ನೆಮ್ಮದಿಯನ್ನೇ ಕಳೆದುಕೊಂಡಿದ್ದಾರೆ. ಹೀಗಾಗಿ, ಫೇಸ್‌ಮಾಸ್ಕ್‌ ಎಂಬುದು ಈಗ ಎಲ್ಲರ ಜೀವನದ ಪ್ರಮುಖ ಭಾಗವಾಗಿದೆ. ಸಾಮಾನ್ಯವಾಗಿ ಮನೆಯಿಂದ ಹೊರಗೆ ಹೋಗುವಾಗ ಎಲ್ಲರೂ ಫೇಸ್‌ಮಾಸ್ಕ್‌ ಧರಿಸುತ್ತಾರೆ ಮತ್ತು ಫೇಸ್‌ಮಾಸ್ಕ್‌ ಧರಿಸುವುದು ಈಗ ಕಡ್ಡಾಯ ಕೂಡಾ ಆಗಿದೆ. ಇದರಿಂದ ಸೋಂಕು ಹರಡುವುದನ್ನು ತಡೆಗಟ್ಟಲು ಸಾಧ್ಯ ಎಂಬುದು ಸತ್ಯ.
Vijaya Karnataka Web LED Mask
| Screengrab from video | Courtesy : Bivas Das/Facebook


Also Read : ಸ್ವತಃ ತಾನೇ ಬಂದು ಯುವತಿಯರೊಂದಿಗೆ ಸೆಲ್ಫಿಗೆ ಪೋಸ್ ಕೊಟ್ಟ ಕರಡಿ...!

ಇದರ ನಡುವೆ ಈ ಫೇಸ್‌ ಮಾಸ್ಕ್‌ನಲ್ಲೂ ವಿಭಿನ್ನ ಪ್ರಯತ್ನಗಳ ನಡೆಯುತ್ತಿವೆ. ಒಂದಷ್ಟು ಸಿರಿವಂತರು ಚಿನ್ನದ ಫೇಸ್‌ ಮಾಸ್ಕ್ ಧರಿಸಿ ಇತ್ತೀಚಿಗೆ ಸುದ್ದಿಯಾಗಿದ್ದರು. ಕೆಲವು ಜ್ಯುವೆಲರಿಗಳು ಕೂಡಾ ಚಿನ್ನದ ಫೇಸ್‌ ಮಾಸ್ಕ್‌ ತಯಾರಿಸಿ ಎಲ್ಲರ ಗಮನ ಸೆಳೆದಿದ್ದವು. ಈ ನಡುವೆ, ಪಶ್ಚಿಮ ಬಂಗಾಳದ ವ್ಯಕ್ತಿಯೊಬ್ಬರು ಇದೇ ಫೇಸ್‌ ಮಾಸ್ಕ್‌ ವಿಚಾರದಲ್ಲಿ ಇನ್ನೂ ಕೊಂಚ ಭಿನ್ನವಾಗಿ ಗಮನ ಸೆಳೆಯುತ್ತಿದ್ದಾರೆ. ಈ ವ್ಯಕ್ತಿ ಎಲ್‌ಇಡಿ ಬಲ್ಸ್‌ಗಳಿರುವ ಮಾಸ್ಕ್ ತೊಟ್ಟು ಓಡಾಡುತ್ತಿದ್ದಾರೆ. ಸದ್ಯ ಇವರ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Also Read : ಸತ್ತಂತೆ ನಟಿಸಿ ಕಾಡುಕೋಣದ ದಾಳಿಯಿಂದ ಪಾರಾದ ಧೀರೆ! : ಇಲ್ಲಿದೆ ವಿಡಿಯೋ


ಪಶ್ಚಿಮ ಬಂಗಾಳದ ಕಾಂಚಪರಾ ಮೂಲದ ಗೌರ್ ನಾಥ್ ಈ ರೀತಿಯ ಮಾಸ್ಕ್‌ ಧರಿಸಿದವರು. ಇವರೇ ಈ ವಿಶಿಷ್ಟ ಮಾಸ್ಕ್‌ ಸಿದ್ಧಪಡಿಸಿದ್ದು, ಈ ವಿಡಿಯೋವನ್ನು ಫೇಸ್‌ಬುಕ್ ಬಳಕೆದಾರರಾದ ಬಿವಾಸ್ ದಾಸ್ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Also Read : ಐದನೇ ಮಹಡಿಯಿಂದ ಬಿದ್ದ ಕಂದ! : ಈ ದೃಶ್ಯ ನೋಡಿದರೆ ಎದೆ ಒಡೆದಂತಾಗುತ್ತದೆ!

ಈ ಕ್ಲಿಪ್‌ನಲ್ಲಿ ಗೌರ್‌ನಾಥ್ ಅವರು ತಮ್ಮೊಂದಿಗೆ ಇದ್ದ ವ್ಯಕ್ತಿಯೊಂದಿಗೆ ಈ ಫೇಸ್‌ಮಾಸ್ಕ್‌ ತಯಾರಿ ಹಿಂದಿನ ಕಲ್ಪನೆಯನ್ನು ವಿವರಿಸುವ ದೃಶ್ಯವಿದೆ. `ಜನರು ಈ ಮುಖವಾಡವನ್ನು ನೋಡಿದಾಗ, ಫೇಸ್‌ಮಾಸ್ಕ್‌ನ ಧರಿಸುವ ಅವಶ್ಯಕತೆ ಏನು ಎಂಬುದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುತ್ತಾರೆ. ಜೊತೆಗೆ, ಈ ವಿಭಿನ್ನ ಫೇಸ್‌ಮಾಸ್ಕ್‌ ನೋಡಿದ ನಂತರ, ಮಾಸ್ಕ್‌ ಧರಿಸದೇ ಇರುವವರು ಕೂಡಾ ಮಾಸ್ಕ್‌ ಧರಿಸಲು ಮನಸ್ಸು ಮಾಡುತ್ತಾರೆ' ಎಂದು ಗೌರ್‌ನಾಥ್ ಹೇಳುವುದು ಈ ವಿಡಿಯೋ ಕ್ಲಿಪ್‌ನಲ್ಲಿ ದಾಖಲಾಗಿದೆ. ಅಂತೆಯೇ, ಫೇಸ್‌ಮಾಸ್ಕ್‌ ಧರಿಸುವ ಅವಶ್ಯಕತೆಯ ಬಗೆಗಿನ ಜಾಗೃತಿ ಮೂಡಿಸಲು ಈ ಕ್ಲಿಪ್ ಕೂಡಾ ಹೊಸ ಮಾರ್ಗವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ