ಕಾರುಗಳು ಇದ್ದಕ್ಕಿಂತಂತೆ ವಿಚಿತ್ರಾಕೃತಿ ಪಡೆಯುವ ದೃಶ್ಯವನ್ನು ನೀವು ಸಿನೆಮಾಗಳಲ್ಲಿ ನೋಡಬಹುದು. ರಸ್ತೆಯಲ್ಲಿ ಸಾಗುತ್ತಿದ್ದ ಕಾರೇ ದೈತ್ಯ ರೂಪ ಪಡೆದು ಅಬ್ಬರಿಸುವ ದೃಶ್ಯವಿರುವ ಒಂದಷ್ಟು ಚಿತ್ರಗಳು ಬಂದಿವೆ. ಟ್ರಾನ್ಸ್ಫಾರ್ಮರ್ಸ್ ಚಿತ್ರಗಳಲ್ಲಿ ಇಂತಹ ಅನೇಕ ಸನ್ನಿವೇಶವಿದೆ. ಇವೆಲ್ಲಾ ಸೈನ್ಸ್ ಫಿಕ್ಷನ್ ಚಿತ್ರಗಳು. ಆದರೆ, ಈ ಕಾಲ್ಪನಿಕ ಸನ್ನಿವೇಶಗಳನ್ನೇ ಕೆಲ ಮಕ್ಕಳು ಬಲು ಇಷ್ಟಪಡುತ್ತಾರೆ.
ನಿಜ ಜೀವನದಲ್ಲಿ ಈ ರೀತಿಯೆಲ್ಲಾ ಆಗಲು ಸಾಧ್ಯವಿಲ್ಲ. ಆದರೆ, ಇಲ್ಲೊಬ್ಬ ಬಾಲಕನ ಕನಸಿಗೆ ಹೆತ್ತವರು ಸಹಕಾರ ನೀಡಿದ್ದಾರೆ. ಹೀಗಾಗಿ, ಈ ಬಾಲಕ ಕಣ್ಣು ಮುಚ್ಚಿ ಕಣ್ಣು ತೆರೆಯುವುದರೊಳಗೆ ಎಲೆಕ್ಟ್ರಿಕ್ ವಾಹನದಂತೆ ಬದಲಾಗುತ್ತಾನೆ...! ಈಗಂತೂ ಹೆತ್ತವರು ಮಕ್ಕಳ ಛದ್ಮವೇಷಕ್ಕೆ ಹಲವು ಕಾನ್ಸೆಪ್ಟ್ಗಳನ್ನು ಹುಡುಕುತ್ತಿರುತ್ತಾರೆ. ಏನಾದರೂ ಭಿನ್ನವಾಗಿರುವ ಪ್ರಯತ್ನ ಮಾಡಬೇಕೆಂದು ಇವರೆಲ್ಲಾ ಹಾತೊರೆಯುತ್ತಿರುತ್ತಾರೆ. ಹೀಗೆ ಹುಡುಕುವ ಹೆತ್ತವರಿಗೆ ಈ ವಾಹನದ ಕಾನ್ಸೆಪ್ಟ್ ಕೂಡಾ ಇಷ್ಟವಾಗಬಹುದು.
Also Read : ಪಾರ್ಟಿಯಲ್ಲಿ ಮದ್ಯಪಾನ ಮಾಡಿ ತೂರಾಡುತ್ತಾ ಮನೆಗೆ ಬಂದ ಮಾಲಕಿಯನ್ನು ಹಾಸಿಗೆಯಲ್ಲಿ ಮಲಗಿಸಿದ ಶ್ವಾನ!
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಡಿಫ್ರೆಂಟ್ ವಿಡಿಯೋ ವೈರಲ್ ಆಗುತ್ತಿದೆ. ಈ ಕ್ಲಿಪ್ನಲ್ಲಿ ಬಾಲಕ ಕ್ಷಣಾರ್ಧದಲ್ಲಿ ಸೈಬರ್ಟ್ರಕ್ ಎಂಬ ಎಲೆಕ್ಟ್ರಿಕ್ ವಾಹನದ ರೂಪ ಪಡೆಯುವ ಅದ್ಭುತ ದೃಶ್ಯವಿದೆ.
Also Read : ಎರಡು ಬೋಟ್ನಲ್ಲಿ ನಿಂತು ವಿವಾಹ ಪ್ರಸ್ತಾಪ...! : ಮುಖಕ್ಕೆ ಏಟು ತಿಂದು ನೀರಿಗೆ ಬಿದ್ದ ಪ್ರಿಯಕರ...!
ಟ್ರಾನ್ಸ್ಫಾರ್ಮರ್ಸ್ ಚಿತ್ರಗಳ ಸ್ಫೂರ್ತಿ ಖಂಡಿತಾ ಈ ಪ್ರಯತ್ನದ ಹಿಂದಿದೆ ಎಂಬುದು ಸ್ಪಷ್ಟ. ಬಾಲಕ ಇಲ್ಲಿ ಕೆಂಪು ವಾಹನದ ರೂಪ ಪಡೆಯುತ್ತಾನೆ. ತಂದೆ ತನ್ನ ಪುತ್ರನಿಗೆ `ಟ್ರಾನ್ಸ್ಫಾರ್ಮ್' ಎಂದು ಹೇಳುತ್ತಾರೆ. ಇದನ್ನು ಕೇಳಿದ ತಕ್ಷಣ ವಿಭಿನ್ನ ದಿರಿಸುಗಳನ್ನು ತೊಟ್ಟಿದ್ದ ಬಾಲಕ ಕುಳಿತುಕೊಳ್ಳುತ್ತಾನೆ. ನೋಡ ನೋಡುತ್ತಿದ್ದಂತೆಯೇ ಟ್ರಾನ್ಸ್ಫಾರ್ಮರ್ಸ್ ಚಿತ್ರದಂತೆಯೇ ಬಾಲಕ ಕಾರಿನ ರೂಪ ಪಡೆದಿದ್ದ.
Also Read : ಕೋರ್ಟ್ನಿಂದಲೇ ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಡ್ರಗ್ ವ್ಯಸನಿ : ಇದು ಪಕ್ಕಾ ಫಿಲ್ಮಿ ಸ್ಟೈಲ್ ಚೇಸಿಂಗ್
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಎಲ್ಲರೂ ಬಲು ಕುತೂಹಲದಿಂದಲೇ ಇದನ್ನು ವೀಕ್ಷಿಸಿದ್ದಾರೆ. ಎಲ್ಲರಿಗೂ ಈ ಪ್ರಯತ್ನ ಬಲು ಇಷ್ಟವಾಗಿದೆ.