ಆ್ಯಪ್ನಗರ

ನಾಗರಹಾವಿಗೆ ಬಾಟಲಿಯಲ್ಲಿ ನೀರು ಕುಡಿಸಿದ್ದ ಧೈರ್ಯಶಾಲಿ: ಅಪೂರ್ವ ವಿಡಿಯೋ ವೈರಲ್

ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹಾವಿಗೆ ಬಾಟಲಿಯಲ್ಲಿ ನೀರು ಕುಡಿಸುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ. ಅಧಿಕಾರಿಯ ಈ ಧೈರ್ಯ ಮತ್ತು ಹೃದಯವಂತಿಕೆಯನ್ನು ಎಲ್ಲರೂ ಕೊಂಡಾಡಿದ್ದಾರೆ.

Vijaya Karnataka Web 21 May 2020, 5:26 pm
ನಾಗರಹಾವು ಇದೆ ಎಂದು ಹೇಳಿದರೇನೇ ನಮ್ಮ ಎದೆ ನಡುಗಿ ಹೋಗಿ ಬಿಡುತ್ತದೆ... ಅದೇ ಹಾವು ಎದುರಿಗೆ ಬಂದು ನಿಂತರೆ ಎದೆಯಲ್ಲಿ ಭತ್ತ ಕುಟ್ಟಿದ ಅನುಭವವಾಗುವುದಂತೂ ಸತ್ಯ. ಜೀವಂತ ಹಾವು ಬಿಡಿ, ವಿಡಿಯೋದಲ್ಲೂ ಹಾವುಗಳನ್ನು ನೋಡುವಾಗ ಭಯಪಡುವವರೂ ಇದ್ದಾರೆ.
Vijaya Karnataka Web Cobra
| Screengrab from video | Courtesy : Awanish Sharan/Twitter


Also Read : ಆಕಾಶದಲ್ಲಿ ಕಂಡ ಬಿಳಿಯ ಬೆಳಕೇನು...? ನೆಟ್ಟಿಗರಲ್ಲಿ ಯುಎಫ್‌ಓ ಬಗೆಬಗೆ ಚರ್ಚೆ!

ಆದರೆ, ಹಾವನ್ನು ಕಂಡರೆ ಭಯ ಪಡದ ಧೈರ್ಯದಿಂದ ಅದರ ಹತ್ತಿರ ಹೋಗುವವರು, ಜಾಗರೂಕತೆಯಿಂದ ಹಿಡಿದು ರಕ್ಷಣೆ ಮಾಡಿ ಕಾಡಿಗೆ ಬಿಡುವವರೂ ನಮ್ಮಲ್ಲಿ ಇದ್ದಾರೆ. ಅದಕ್ಕೆ ಸಾಕ್ಷಿ ಈ ವಿಡಿಯೋ. ಇಲ್ಲೊಬ್ಬರು ಧೈರ್ಯಶಾಲಿ ಅರಣ್ಯಾಧಿಕಾರಿ ಬಾಯಾರಿದ್ದ ನಾಗರಹಾವಿಗೆ ಬಾಟಲಿಯಲ್ಲಿ ನೀರು ಕುಡಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ.

Also Read : ಮಾಜಿ ಲವರ್‌ ವಿರುದ್ಧದ ಸೇಡಿಗೆ ಈಕೆ ಮಾಡಿದ್ದೇನು ಗೊತ್ತಾ?: ಯಾರ್ ಕೊಟ್ಟರೋ ಈ ಐಡಿಯಾ!

ಟ್ವಿಟ್ಟರ್ ಬಳಕೆದಾರರಾದ ಅವನೀಶ್ ಶರಣ್ ಈ ವಿಡಿಯೋವನ್ನು ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನಾನೆಂದೂ ಇಂತಹ ದೃಶ್ಯವನ್ನು ಈ ಮೊದಲು ಕಂಡಿಲ್ಲ ಎಂದು ಇವರು ಹೇಳಿಕೊಂಡಿದ್ದಾರೆ. ಹಾಗಂತ, ಇದು ಹೊಸ ವಿಡಿಯೋ ಅಲ್ಲ, ಅವನೀಶ್ ಅವರೇ ಉಲ್ಲೇಖಿಸಿದಂತೆ ಇದು ಹಳೆಯ ವಿಡಿಯೋ. ಆದರೆ, ಸದ್ಯ ಈ ವಿಡಿಯೋ ಮತ್ತೆ ಇಂಟರ್‌ನೆಟ್‌ನಲ್ಲಿ ಸಖತ್‌ ಆಗಿಯೇ ಹರಿದಾಡುತ್ತಿದ್ದು, ಎಲ್ಲರೂ ಈ ಧೈರ್ಯವಂತ ಹಾಗೂ ಹೃದಯವಂತ ಅಧಿಕಾರಿಯನ್ನು ಕೊಂಡಾಡಿದ್ದಾರೆ.

Also Read : ಲಾಕ್‌ಡೌನ್‌ನಲ್ಲಿ ಪತ್ನಿ ತವರು ಮನೆಯಲ್ಲಿ ಲಾಕ್‌! : ಸಂಬಂಧಿಯೊಂದಿಗೆ ಪತಿಯ ಮದುವೆ!

ಈ ವಿಡಿಯೋದಲ್ಲಿ ಈ ಅಧಿಕಾರಿ ಹಾವಿಗೆ ನೀರು ಕುಡಿಸುವುದನ್ನು ನೋಡಬಹುದು. ಅದಕ್ಕಿಂತಲೂ ಮುಖ್ಯವಾಗಿ, ಹಾವು ನೀರು ಕುಡಿಯಲು ಆರಂಭಿಸಿದ ತಕ್ಷಣ ಅದಕ್ಕೆ ನೀರು ಕುಡಿಯಲು ಇನ್ನಷ್ಟು ಸುಲಭವಾಗಲಿ ಎಂದು ಈ ಅಧಿಕಾರಿ ನೇರವಾಗಿ ಹಾವಿಗೆ ಹೆಡೆಯ ಬಳಿ ಕೈ ಕೊಂಡೊಯ್ದು ಹಾವನ್ನು ಬಾಟಲಿಯತ್ತ ನಿಧಾನಕ್ಕೆ ಬಾಗಿಸುವ ದೃಶ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅತ್ಯಂತ ಪ್ರೀತಿಯಿಂದ ಪುಟ್ಟ ಮಗುವಿಗೆ ನೀರುಣಿಸಿದಂತೆ ಈ ಅಧಿಕಾರಿ ಹಾವಿಗೆ ನೀರು ಕುಡಿಸುವುದನ್ನು ನೋಡುವಾಗಲೇ ಹೃದಯ ತುಂಬಿ ಬರುತ್ತದೆ...

ಇಂತಹ ದೃಶ್ಯ ಎಲ್ಲರಿಗೂ ಇಷ್ಟವಾಗಿದೆ. ಎಲ್ಲರೂ ಈ ಅಧಿಕಾರಿಯನ್ನು ಬಗೆಬಗೆಯಾಗಿ ಕೊಂಡಾಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ