ಆ್ಯಪ್ನಗರ

ಮತ್ತೊಂದು ಪ್ರಾಣಿಯ ಕಷ್ಟಕ್ಕೆ ಮರುಗಿದ ಕಾಗೆ : ಇದು ಮನಗೆಲ್ಲುವ ವಿಡಿಯೋ

ರಸ್ತೆಯ ಮಧ್ಯೆ ಕುಳಿತ್ತಿದ್ದ ಸಣ್ಣ ಪ್ರಾಣಿಯ ಕಷ್ಟಕ್ಕೆ ಕಾಗೆಯೊಂದು ಸ್ಪಂದಿಸಿದ ರೀತಿ ಈಗ ಎಲ್ಲರ ಗಮನ ಸೆಳೆದಿದೆ. ಈ ಹೃದಯಸ್ಪರ್ಶಿ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Vijaya Karnataka Web 26 May 2020, 8:14 pm
ಹಂಚಿ ತಿನ್ನುವುದನ್ನು ಕಾಗೆಯಿಂದ ಕಲಿಯಬೇಕು. ಏನೂ ಕಂಡರೂ ಮೊದಲು ತನ್ನ ಬಳಗವನ್ನು ಕರೆದು ಒಟ್ಟಾಗಿ ತಿನ್ನುತ್ತವೆ ಕಾಗೆಗಳು. ಕಾಗೆ ಎಂದರೆ ಹಾಗೇ. ಅದು ಸದಾ ತನ್ನ ಗುಂಪಿನೊಂದಿಗೇ ಇರಲು ಬಯಸುತ್ತವೆ. ಇಂತಹ ಕಾಗೆ ಬುದ್ಧಿವಂತಿಕೆಯ ವಿಚಾರದಲ್ಲೂ ಒಮ್ಮೊಮ್ಮೆ ನಮ್ಮ ಗಮನ ಸೆಳೆಯುತ್ತದೆ.
Vijaya Karnataka Web crow
| Screengrab from video | Courtesy : StanceGrounded/Twitter


ಕಾಗೆಯನ್ನು ಜನ ಬೇರೆ ಪಕ್ಷಿಗಳಷ್ಟು ಇಷ್ಟಪಡಲ್ಲ. ಆದರೆ, ಈ ಕಾಗೆಗಳು ಒಮ್ಮೊಮ್ಮೆ ತೋರುವ ಬುದ್ಧಿವಂತಿಕೆಯನ್ನು ನೋಡಿದಾಗ ಖಂಡಿತಾ ಇವುಗಳೂ ನಮಗೆ ಇಷ್ಟವಾಗಿ ಹೋಗುತ್ತವೆ. ಇದು ಕೂಡಾ ಅಂತಹದ್ದೇ ಒಂದು ವಿಡಿಯೋ. ಈ ವಿಡಿಯೋದಲ್ಲಿ ಕಾಗೆಯೊಂದು ಹೃದಯವಂತಿಕೆ ಮರೆದಿದೆ. ಈ ಮೂಲಕ ಮನುಷ್ಯರಿಗೂ ಪಾಠ ಕಲಿಸಿದೆ.

Also Read : ಬಾಲ್ಕನಿಯಲ್ಲಿ ಆಯತಪ್ಪಿ ಜಾರಿ ನೇತಾಡುತ್ತಿದ್ದ ಬಾಲಕಿ! : ರಕ್ಷಣೆಗೆ ಯುವಕನ ಸಾಹಸ

ಅದೊಂದು ರಸ್ತೆ. ಈ ರಸ್ತೆಯಲ್ಲಿ ಕಾರೊಂದು ಸಾಗಿ ಬರುತ್ತಿತ್ತು. ಆದರೆ, ದಾರಿ ಮಧ್ಯೆಯಲ್ಲಿ ಸಣ್ಣದೊಂದು ಜೀವಿ ಮಲಗಿತ್ತು. ಇಂಗ್ಲೀಷ್‌ನಲ್ಲಿ ಈ ಜೀವಿಯನ್ನು ಹೆಡ್ಗೆಹಾಗ್ ಅಂತಾರೆ. ಈ ಹೆಡ್ಗೆಹಾಗ್ ಅದೇಕೋ ಚುರುಕಾಗಿರಲಿಲ್ಲ. ಇದನ್ನು ಕಂಡ ಕಾಗೆ ಅಲ್ಲಿಗೆ ಓಡಿ ಬಂದು ಹೆಡ್ಗೆಹಾಗ್ ಅನ್ನು ತನ್ನ ಕೊಕ್ಕಿನ ಸಹಾಯದಿಂದ ಎಬ್ಬಿಸಿ ಎಬ್ಬಿಸಿ ರಸ್ತೆಯ ಬದಿಗೆ ಕರೆತಂದಿದೆ. ರಸ್ತೆ ಮಧ್ಯದಲ್ಲಿದ್ದಾರೆ ಯಾವುದಾದರೂ ವಾಹನದಡಿಗೆ ಬಿದ್ದು ಜೀವ ಕಳೆದುಕೊಳ್ಳಬಾರದು ಎಂಬ ಒಂದೇ ಒಂದು ಕಾರಣಕ್ಕೆ ಕಾಗೆ ಇಲ್ಲಿ ಈ ಬುದ್ಧಿವಂತಿಕೆಯನ್ನು ಮತ್ತು ಹೃದಯವೈಶಾಲ್ಯತೆಯನ್ನು ಪ್ರದರ್ಶಿಸಿತ್ತು...

Also Read : ಅತ್ಯಾಚಾರ ಮತ್ತು ಕೊಲೆ ಕೇಸ್‌ನ ಪ್ರಮುಖ ಸಾಕ್ಷಿಯಾಗಲಿದೆಯಾ ಈ ಗಿಳಿ...?

ಕಾಗೆ ಮನಸ್ಸು ಮಾಡಿದ್ದರೆ ಹೆಡ್ಗೆಹಾಗ್ ಅನ್ನು ಹೊತ್ತೊಯ್ದು ತಿನ್ನುವುದು ತುಂಬಾ ಕಷ್ಟದ ಕೆಲಸವೇನು ಆಗಿರಲಿಲ್ಲ. ಆದರೆ, ಅದು ಹಾಗೆ ಮಾಡಲಿಲ್ಲ. ಬದಲಾಗಿ, ಪ್ರಾಣ ಉಳಿಸುವ ಕೆಲಸವನ್ನು ಮಾಡಿದೆ. ಎಷ್ಟು ಉದಾತ್ತ ಚಿಂತನೆಯಲ್ವಾ...? ಒಮ್ಮೊಮ್ಮೆ ಬುದ್ಧಿವಂತರೆಂದು ಕರೆಸಿಕೊಳ್ಳುವ ನಾವು ಮನುಷ್ಯರು ಕೂಡಾ ಹೀಗೆ ಯೋಚಿಸುತ್ತೇವೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಕಾಗೆ ಮಾತ್ರ ಈ ಪ್ರಾಣಿಯ ಜೀವ ಉಳಿಸುವ ಕೆಲಸವನ್ನು ಯಶಸ್ವಿಯಾಗಿದೆ ಮಾಡಿದೆ.

Also Read : ಹಲಸಿನ ಹಣ್ಣಿಗಾಗಿ ಆನೆಯ ಸರ್ಕಸ್, ಮಗನ ಜತೆ ತಂದೆಯ ಫೈಟ್: ಬನ್ನಿ ಸೊಬಗಿನ ಲೋಕಕ್ಕೆ


ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ವಿಡಿಯೋವನ್ನು ಕಂಡು ಎಲ್ಲರೂ ಕಾಗೆಯ ಹೃದಯವೈಶಾಲ್ಯತೆಯನ್ನು ಕೊಂಡಾಡಿದ್ದಾರೆ. ಅಲ್ಲದೆ, ವಿವಿಧ ಸೋಶಿಯಲ್ ಮೀಡಿಯಾಗಳಲ್ಲೂ ಈ ವಿಡಿಯೋ ವೈರಲ್ ಆಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ