ಆ್ಯಪ್ನಗರ

Viral Video : ಈ ಕಂದನ ಎಕ್ಸ್‌ಪ್ರೆಶನ್‌ ಕಂಡು ನೀವು ಖಂಡಿತಾ ಫಿದಾ ಆಗ್ತೀರಿ

ಬಾಟಲ್ ಫ್ಲಿಪ್ ಚಾಲೆಂಜ್ ಬಳಿಕ ಹಾಲುಗಲ್ಲದ ಕಂದ ತೋರುವ ಪ್ರತಿಕ್ರಿಯೆಗೆ ಈಗ ನೆಟ್ಟಿಗರು ಫಿದಾ ಆಗಿದ್ದಾರೆ. ಎಲ್ಲರೂ ವಾಟ್ಸಾಪ್, ಫೇಸ್‌ಬುಕ್‌ನಲ್ಲೂ ಈಗ ಇದೇ ವಿಡಿಯೋ ಬಳಸುತ್ತಿದ್ದಾರೆ...!

Vijaya Karnataka Web 21 Apr 2020, 7:33 pm
ಸೋಶಿಯಲ್ ಮೀಡಿಯಾಗಳಲ್ಲಿ ಚಾಲೆಂಜ್‌ಗಳಿಗೇನು ಕೊರತೆ ಇಲ್ಲ. ಒಂದಲ್ಲ ಒಂದು ಚಾಲೆಂಜ್‌ಗಳು ಇಲ್ಲಿ ಬರುತ್ತಲೇ ಇರುತ್ತವೆ. ಅದರಲ್ಲೂ ಈಗಂತೂ ಈ ಚಾಲೆಂಜ್‌ಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಕಾರಣ ಕೊರೊನಾ ವೈರಸ್ ಭಯ. ಈ ರಕ್ಕಸ ವೈರಾಣುವಿನ ಕಾರಣದಿಂದ ಎಲ್ಲರೂ ಈಗ ಮನೆಯಲ್ಲಿದ್ದಾರೆ. ಹೀಗಾಗಿ, ಕೆಲವರು ಮನೆಯ ಕೆಲಸದಲ್ಲಿ ತೊಡಗಿದ್ದರೆ, ಇನ್ನು ಕೆಲವರು ಬಿಡುವಿನ ಸಮಯದಲ್ಲಿ ಈ ಚಾಲೆಂಜ್‌ಗಳನ್ನು ಪೂರೈಸುತ್ತಾ ಎಂಜಾಯ್ ಮಾಡುತ್ತಾರೆ.
Vijaya Karnataka Web baby
| Screengrab from video | Courtesy : Rachael Marie Baheza/Facebook


Also Read : ಮನೆ ಬಾಲ್ಕನಿಯಲ್ಲಿ ನಿಂತೇ ಸಮುದ್ರದ ಮೀನು ಹಿಡಿಯುತ್ತಾನೆ ಈತ!: ಹೇಗೆ ಗೊತ್ತಾ?

ಸದ್ಯ ಇಂತಹದ್ದೇ ಬಾಟಲ್ ಫ್ಲಿಪ್ ಚಾಲೆಂಜ್ ಕೂಡಾ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಬಹುತೇಕರು ಈ ಚಾಲೆಂಜ್ ಪೂರ್ಣಗೊಳಿಸಲು ಯತ್ನಿಸಿದ್ದಾರೆ, ಯತ್ನಿಸುತ್ತಿದ್ದಾರೆ. ಅಂತೆಯೇ, ಇಲ್ಲಿ ಒಂದು ಹಾಲುಗಲ್ಲದ ಪುಟಾಣಿ ಕೂಡಾ ಬಾಟಲಿ ಎಸೆದು ಸಕ್ಸಸ್ ಆಗಿದ್ದಾಳೆ. ಆದರೆ, ಅದಕ್ಕಿಂತಲೂ ಬಾಟಲ್ ಚಿಮ್ಮಿ ನೆಲದಲ್ಲಿ ನೇರ ನಿಂತಾಗ ಕಂದ ತೋರುವ ಎಕ್ಸ್‌ಪ್ರೆಶನ್ ಸಖತ್ ಮಜವಾಗಿದೆ.

Also Read : 13 ವರ್ಷದ ಬಾಲಕಿಯನ್ನು ಕೊಂದವರು ಯಾರು...? : ಪಕ್ಕದಲ್ಲೇ ಇದ್ದನಾ ಹಂತಕ...?


ಈ ವಿಡಿಯೋ ಎಲ್ಲರ ಗಮನ ಸೆಳೆಯುವುದಕ್ಕೆ ಇರುವ ಕಾರಣ ಎರಡು. ಒಂದು ಈ ಪುಟಾಣಿ ಈ ಚಾಲೆಂಜನ್ನು ಪೂರ್ಣಗೊಳಿಸಿದ್ದು ಮತ್ತು ಚಾಲೆಂಜ್ ಪೂರ್ಣಗೊಳಿಸಿದ ಬಳಿಕ ಅದ್ಭುತ ಎಕ್ಸ್‌ಪ್ರೆಶನ್ ತೋರಿದ್ದು. ಈ ಒಂದು ಎಕ್ಸ್‌ಪ್ರೆಶನ್ ಕಾರಣಕ್ಕೆ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಎಲ್ಲರೂ ಈ ಕಣ್ಣರಳಿಸುವ ಕಂದನನ್ನು ನೋಡಿ ಖುಷಿಪಟ್ಟಿದ್ದಾರೆ.

Also Read : ಪುರುಷರೇ ಈತನ ಟಾರ್ಗೆಟ್! : 16 ಮಂದಿಯನ್ನು ಕೊಂದವನು ಯಾರೆಂದೇ ಗೊತ್ತಿಲ್ಲ!

ಈ ಪುಟಾಣಿಯ ಹೆಸರು ಲೈಲಾ ರೇ. ಕಂದನ ತಾಯಿ ಈ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಎಸೆದ ಬಾಟಲ್ ಚಿಮ್ಮಿ ನೇರವಾಗಿ ನಿಲ್ಲಬೇಕು ಎಂಬುದೇ ಈ ಚಾಲೆಂಜ್. ಕೆಲ ದಿನಗಳಿಂದ ಈ ಚಾಲೆಂಜ್ ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿದ್ದರೂ ಈ ಕಂದನ ವಿಡಿಯೋ ವೈರಲ್ ಆದ ಬಳಿಕ ಇದು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದೆ. ಲಕ್ಷಾಂತರ ಜನ ಈ ವಿಡಿಯೋ ನೋಡಿ ಖುಷಿಪಟ್ಟಿದ್ದಾರೆ. ಕೆಲವರಂತೂ ವಾಟ್ಸಾಪ್‌ ಸ್ಟೇಟಸ್‌ನಲ್ಲೂ ಪುಟಾಣಿಯ ವಿಡಿಯೋಗಳನ್ನು ಹಾಕಿ ಎಂಜಾಯ್ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ