ಆ್ಯಪ್ನಗರ

ಮೀನಿಗೆ ಜೀವದಾನ ನೀಡಿದ ಶ್ವಾನ : ಮುದ್ದು ಪ್ರಾಣಿಯ ಹೃದಯವಂತಿಕೆಗೆ ಬೆರಗಾಗಲೇಬೇಕು

ಇದು ಎಲ್ಲರನ್ನು ಬೆರಗುಗೊಳಿಸುವಂತಹ ಅದ್ಭುತ ದೃಶ್ಯ. ಮುದ್ದು ಶ್ವಾನದ ಈ ಹೃದಯವೈಶಾಲ್ಯತೆ ಎಲ್ಲರಿಗೂ ಮಾದರಿಯೂ ಆಗಿದೆ.

Vijaya Karnataka Web 30 Sep 2020, 9:58 am
ಮನುಷ್ಯರು ಕೆಲವೊಮ್ಮೆ ಮೃಗದಂತೆ ವರ್ತಿಸುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಪ್ರಾಣಿಗಳಿಗಿಂತಲೂ ಕೀಳಾಗಿವೆ ವರ್ತಿಸುವ ಜನರಿದ್ದಾರೆ, ರಕ್ಕಸರಿದ್ದಾರೆ. ಅದರಲ್ಲೂ ಯಾರಿಗಾದರೂ ಅಪಘಾತವಾದ ಸಂದರ್ಭದಲ್ಲಿ ಕೆಲವರು ವರ್ತಿಸುವ ರೀತಿ ಬೇಸರ ಮೂಡಿಸುತ್ತದೆ. ಅಪಘಾತಕ್ಕೀಡಾದವರ ಪ್ರಾಣ ರಕ್ಷಣೆಯ ಅವಕಾಶವಿದ್ದರೂ ಸೇರಿದ ಜನ ಅವರನ್ನು ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ಯದೆ ಜೀವ ಬಿಟ್ಟ ಅನೇಕರ ನತದೃಷ್ಟರ ಕತೆಯನ್ನು ನೀವು ಕೇಳಿರಬಹುದು. ಹೀಗೆ ಕೆಲವೊಮ್ಮೆ ಮಾನವೀಯತೆಯನ್ನು ಮರೆತಂತೆ ವರ್ತಿಸುವ ಎಲ್ಲರೂ ನೋಡಲೇಬೇಕಾದಂತಹ ವಿಡಿಯೋ ಇದು. ಮಾನವೀಯ ಗುಣವನ್ನು ಮರೆತು ಮೆರೆಯುವ ಜನರಿಗೆ ಇಲ್ಲೊಂದು ಶ್ವಾನ ಹೃದಯವಂತಿಕೆಯ ಪಾಠ ಮಾಡಿದೆ.
Vijaya Karnataka Web dog
| Screengrab from video | Courtesy : Susanta Nanda IFS/Twitter


Also Read : ಅಸ್ಥಿಪಂಜರದೊಂದಿಗೆ ಮುದ್ದು ಕಂದನ ಸ್ನೇಹ...! : ಅಚ್ಚರಿಯ ವಿಡಿಯೋ ವೈರಲ್

ಮುದ್ದು ಶ್ವಾನಗಳು ಜನರ ನೆಚ್ಚಿನ ಸ್ನೇಹಿತರು ಎಂಬುದರಲ್ಲಿ ಎರಡು ಮಾತಿಲ್ಲ. ಜನರೊಂದಿಗೆ ಇವುಗಳು ಆತ್ಮೀಯ ಸಂಬಂಧ ಹೊಂದಿರುತ್ತವೆ. ಇಂತಹ ಮುದ್ದು ಶ್ವಾನಗಳು ಕೆಲವೊಮ್ಮೆ ತೋರುವ ಹೃದಯವೈಶಾಲ್ಯತೆ ಬೆರಗು ಮೂಡಿಸುತ್ತದೆ. ಶ್ವಾನಗಳು ತೋರುವ ಹೃದಯವಂತಿಕೆಯ ಹಲವು ದೃಶ್ಯಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

Also Read : ಪಾರ್ಟಿಯಲ್ಲಿ ಮದ್ಯಪಾನ ಮಾಡಿ ತೂರಾಡುತ್ತಾ ಮನೆಗೆ ಬಂದ ಮಾಲಕಿಯನ್ನು ಹಾಸಿಗೆಯಲ್ಲಿ ಮಲಗಿಸಿದ ಶ್ವಾನ!

ಆ ಪ್ಲೇಟ್‌ನಲ್ಲಿ ಹಲವು ಮೀನುಗಳತ್ತು. ಆದರೆ, ಈ ಮೀನುಗಳು ಪೂರ್ಣ ಪ್ರಮಾಣದಲ್ಲಿ ಜೀವ ಬಿಟ್ಟಿರಲಿಲ್ಲ. ಅಲ್ಲೊಂದು ಮುದ್ದು ಶ್ವಾನವೂ ಇತ್ತು. ಮನಸ್ಸು ಮಾಡಿದ್ದರೆ ಎರಡೇ ನಿಮಿಷದಲ್ಲಿ ಈ ಶ್ವಾನ ಮೀನುಗಳನ್ನೆಲ್ಲಾ ತಿಂದು ಮುಗಿಸಬಹುದಿತ್ತು. ಆದರೆ, ಈ ಶ್ವಾನ ಹಾಗೆ ಮಾಡಲಿಲ್ಲ. ಬದಲಾಗಿ ಅದು ಹೃದಯವೈಶಾಲ್ಯತೆಯನ್ನು ಪ್ರದರ್ಶಿಸಿತ್ತು. ಆ ಪ್ಲೇಟ್‌ನಲ್ಲಿದ್ದ ಮೀನು ಜೀವ ಇದೆ ಎಂದು ಗಮನಿಸಿದ ಶ್ವಾನ ಸೀದಾ ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಬಂದು ನೀರಿಗೆ ಬಿಟ್ಟಿದೆ. ನೀರಲ್ಲಿ ಬಂದ ಬಿದ್ದ ಕೂಡಲೇ ಮೀನು ಉಲ್ಲಾಸದಿಂದ ಈಜಿದೆ...


Also Read : ಉತ್ತರ ಪ್ರದೇಶ ಯುವಕನ `ಕಪಲ್ ಚಾಲೆಂಜ್‌ಗೆ' ಬಂತು ಹಾಲಿವುಡ್ ನಟಿಯಿಂದ ಪ್ರತಿಕ್ರಿಯೆ...!

ಎಷ್ಟು ಅದ್ಭುತವಾಗಿದೆಯಲ್ವಾ ಈ ದೃಶ್ಯ...? ಇಂತಹ ಮುದ್ದು ದೃಶ್ಯ ಯಾರನ್ನಾದರೂ ಸೆಳೆಯದೇ ಇರುವುದೇ...? ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಂತ ನಂದ ಅವರು ಈ ಅಪೂರ್ವ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಮುದ್ದು ಶ್ವಾನದ ಹೃದಯವಂತಿಕೆಗೆ ಫಿದಾ ಆಗಿದ್ದಾರೆ. ನಿಜಕ್ಕೂ ಇದೊಂದು ಭಾವನಾತ್ಮಕ ದೃಶ್ಯ. ಈ ದೃಶ್ಯವನ್ನು ಕಂಡ ಎಲ್ಲರೂ ಈ ಮುದ್ದು ಶ್ವಾನದ ಜಾಣತನವನ್ನು ಹಾಡಿ ಹೊಗಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ