ಈ ರಕ್ಕಸ ಕೊರೊನಾ ವೈರಸ್ ಅಬ್ಬರ ಶುರುವಾದ ಬಳಿಕ ಜಾಸ್ತಿ ಬಳಕೆಗೆ ಬಂದ ಪದಗಳಲ್ಲಿ `ಸಾಮಾಜಿಕ ಅಂತರ' ಕಾಯ್ದುಕೊಳ್ಳುವುದು ಕೂಡಾ ಒಂದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರಿಂದ ವೈರಸ್ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಪ್ಪಿಸಬಹುದು. ಈ ರಕ್ಕಸ ವೈರಾಣುವಿನ ನಿಯಂತ್ರಣಕ್ಕೆ ಕೈಗಳ ಸ್ವಚ್ಛತೆ, ಫೇಸ್ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡಾ ಉತ್ತಮ ಮಾರ್ಗ. ಹೀಗಾಗಿ, ಎಲ್ಲರೂ ಸೋಶಿಯಲ್ ಡಿಸ್ಟೆನ್ಸ್ ಮೆಂಟೇನ್ ಮಾಡಬೇಕೆಂದು ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲಾಗಿತ್ತು.
Also Read : ವ್ಹಾವ್... ಇದಪ್ಪಾ ಪ್ರಾಮಾಣಿಕತೆ : ಬೇಕೆಂದೇ ಸೋತ ಓಟಗಾರ! : ಈ ಕತೆ ಕೇಳಿದರೆ ಹೃದಯ ತುಂಬಿ ಬರುತ್ತದೆ
ಹಾಗಂತ, ಬರೀ ಮನುಷ್ಯರಷ್ಟೇ ಈ ನಿಯಮ ಪಾಲಿಸುತ್ತಿಲ್ಲ. ಕೆಲವೊಮ್ಮೆ ಮುದ್ದು ಪ್ರಾಣಿಗಳೂ ಈ ನಿಯಮ ಪಾಲಿಸುವ ರೀತಿಯ ತಮಾಷೆಯ ವಿಡಿಯೋಗಳು, ಫೋಟೋಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದೀಗ ಇದಕ್ಕೆ ಇನ್ನೊಂದು ಸೇರ್ಪಡೆಯಾಗಿದೆ. ಯಾಕೆಂದರೆ, ಇಲ್ಲೊಂದು ಮುದ್ದು ಶ್ವಾನದ ತುಂಟಾಟ ಎಲ್ಲರ ಗಮನ ಸೆಳೆದಿದೆ. ಈ ದೃಶ್ಯವನ್ನು ನೋಡಿದ ಎಲ್ಲರೂ `ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು' ಎಂಬ ನಿಯಮವನ್ನು ಈ ಶ್ವಾನ ಕೂಡಾ ಪ್ರಾಮಾಣಿಕವಾಗಿ ಪಾಲಿಸುತ್ತಿದೆ ಎಂದು ಹೇಳುತ್ತಿದ್ದಾರೆ.
Also Read : Shocking Video : ಹೋವರ್ಬೋರ್ಡ್ನಲ್ಲಿ ಸಾಗುತ್ತಲೇ ರೋಗಿಯ ಹಲ್ಲು ತೆಗೆದ ದಂತವೈದ್ಯನಿಗೆ ಶಿಕ್ಷೆ!
ಇದು `ವೆಲ್ಕಮ್ ಟು ನೇಚರ್' ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ಕ್ಯೂಟ್ ವಿಡಿಯೋ. ಈ ಕ್ಲಿಪ್ನಲ್ಲಿ ಮುದ್ದಾದ ಶ್ವಾನವೊಂದು ಪಾರ್ಕಿನಲ್ಲಿ ಜನರ ನಡುವೆ ದೊಡ್ಡ ಕೋಲನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗುವ ದೃಶ್ಯವಿದೆ. ಅಲ್ಲಿ ಜನ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಓಡಾಡುತ್ತಿದ್ದರೆ ಈ ಶ್ವಾನ ಮಾತ್ರ ತಾನು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಓಡಾಡಿದೆ. ಇದೇ ಕಾರಣಕ್ಕೆ ಈ ಕ್ಯೂಟ್ ವಿಡಿಯೋ ಎಲ್ಲರಿಗೂ ಇಷ್ಟವಾಗಿದೆ. `ಈತ ಸಾಮಾಜಿಕ ಅಂತರವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದಾನೆ' ಎಂದು ಕ್ಯಾಪ್ಶನ್ ಬರೆದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
Also Read : ವಿಮೆ ಹಣಕ್ಕಾಗಿ ಮೋಸದಾಟ...! : ಜೈಲು ಸೇರಿದ 22 ವರ್ಷದ ಯುವತಿ
ಎಷ್ಟು ಸುಂದರವಾಗಿದೆಯಲ್ವಾ ಈ ವಿಡಿಯೋ...? ಇಂತಹ ಮುದ್ದಾದ ವಿಡಿಯೋ ವೈರಲ್ ಆಗದೇ ಇರಲು ಸಾಧ್ಯನಾ...? ಕ್ಷಣಮಾತ್ರದಲ್ಲಿ ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ. ಎಲ್ಲರೂ ಈ ಶ್ವಾನದ ತುಂಟಾಟಕ್ಕೆ ಫಿದಾ ಆಗಿದ್ದು, ಬಲು ಖುಷಿಯಿಂದಲೇ ಈ ವಿಡಿಯೋ ನೋಡುತ್ತಿದ್ದಾರೆ.