ಆ್ಯಪ್ನಗರ

ಕುದುರೆಯ ಮೇಲೆ ಕುಳಿತು ಪಾರ್ಸೆಲ್‌ಗಳ ಡೆಲಿವರಿ...! : ವಿಡಿಯೋ ವೈರಲ್

ಯುವಕನೊಬ್ಬ ಕುದುರೆ ಮೇಲೆ ಕುಳಿತು ಪಾರ್ಸೆಲ್‌ಗಳನ್ನು ಹಂಚುವ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಬಗ್ಗೆ ನೆಟ್ಟಿಗರು ಕೂಡಾ ಭರ್ಜರಿ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 12 Jan 2021, 4:30 pm
ಈಗಂತೂ ಎಲ್ಲರೂ ಆನ್‌ಲೈನ್ ಸೇವೆಗಳತ್ತ ಹೆಚ್ಚು ಮುಖ ಮಾಡುತ್ತಿದ್ದಾರೆ. ಆಪ್‌ ಆಧಾರಿತ ಸೇವೆಗಳು ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗುತ್ತಿದೆ. ಹೀಗಾಗಿ, ಆನ್‌ಲೈನ್ ವ್ಯವಹಾರ ಸಂಸ್ಥೆಗಳು ತಮ್ಮ ವಿತರಣಾ ಜಾಲವನ್ನು ಇನ್ನಷ್ಟು ವಿಸ್ತರಿಸುತ್ತಿವೆ. ಕೆಲವು ಕಡೆ ಈ ಡೆಲಿವರಿ ಹುಡುಗರು ಪಾರ್ಸೆಲ್‌ಗಳ ವಿತರಣೆಗೆ ಹೊಸ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಕಾಶ್ಮೀರದಲ್ಲಿ ಸೆರೆಯಾದ ಈ ದೃಶ್ಯ.
Vijaya Karnataka Web Image by digital designer from Pixabay
| Representative image | Image by digital designer from Pixabay


ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಈಗ ವ್ಯಾಪಕ ಹಿಮಪಾತವಾಗುತ್ತಿದೆ. ಪರಿಣಾಮ, ಕೆಲವೆಡೆ ಜನರೆಲ್ಲಾ ಮನೆಯಿಂದ ಆಚೆ ಬರುವುದಕ್ಕೂ ಹೆದರುತ್ತಿದ್ದಾರೆ. ಸಾಕಷ್ಟು ಕಡೆಗಳಿಗೆ ರಸ್ತೆ ಸಂಪರ್ಕವೇ ಕಡಿತಗೊಂಡಿದೆ. ಹೀಗಾಗಿ, ವಾಹನಗಳೆಲ್ಲಾ ನಿಂತಲ್ಲೇ ನಿಂತಿವೆ. ಇಂತಹ ಪರಿಸ್ಥಿತಿಯಲ್ಲಿಯೂ ಪ್ರಖ್ಯಾತ ಆನ್‌ಲೈನ್ ಸಂಸ್ಥೆಯ ಡೆಲಿವರಿ ಪ್ರತಿನಿಧಿಯೊಬ್ಬರು ಪಾರ್ಸೆಲ್ ಡೆಲಿವರಿಗೆ ವಿನೂತನ ಮಾರ್ಗವನ್ನು ಅನುಸರಿಸಿದ್ದಾರೆ. ಅದೇ ಕುದುರೆ ಮೇಲೆ ಸಾಗಿ ಪಾರ್ಸೆಲ್‌ಗಳನ್ನು ಮನೆ ಮನೆಗೆ ತಲುಪಿಸುವುದು. ಸದ್ಯ ಇಂತಹದ್ದೊಂದು ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ.

Also Read : ಕೇಕ್ ತಿಂದ ತಕ್ಷಣ ಈ ವ್ಯಕ್ತಿಗೆ ನಶೆ ಏರುತ್ತದೆ! : ಮದ್ಯಪಾನ ಮಾಡದೇ ಇದ್ದರೂ ಕಾಡುತ್ತಿದೆ ಸಮಸ್ಯೆ...!


Also Read : ಭಾರೀ ಹಿಮಪಾತದ ನಡುವೆ ಗರ್ಭಿಣಿಯನ್ನು ಹೊತ್ತು 2 ಕಿಮೀ ಸಾಗಿದ ಯೋಧರು : ಹೃದಯಸ್ಪರ್ಶಿ ವಿಡಿಯೋ ವೈರಲ್

ಕೋವಿಡ್-19 ನಿಯಮಾವಳಿಗಳನ್ನು ಪಾಲಿಸುತ್ತಲೇ ಈ ಯುವಕ ಪಾರ್ಸೆಲ್‌ಗಳನ್ನು ಮನೆ ಮನೆಗೆ ತಲುಪಿಸುವ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ. ದ್ವಿಚಕ್ರ ವಾಹನವೂ ಸಾಗದೇ ಇದ್ದ ಪ್ರದೇಶಗಳಿಗೆ ಈ ಯುವಕ ಕುದುರೆ ಮೂಲಕವೇ ಸಾಗಿ ಸೇವೆಯೊದಗಿಸಿದ್ದಾರೆ. ಇದು ಕಾಶ್ಮೀರದ ಶ್ರೀನಗರದಲ್ಲಿ ಸೆರೆಯಾದ ದೃಶ್ಯ ಎಂದು ಹೇಳಲಾಗುತ್ತಿದೆ. ಪಿಟಿಐ ಫೋಟೋ ಜರ್ನಲಿಸ್ಟ್‌ ಉಮರ್ ಗನಿ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Also Read : ಝೂನಿಂದ ತಪ್ಪಿಸಿಕೊಂಡು ಬ್ಯುಸಿ ರಸ್ತೆಯಲ್ಲಿ ಓಡಿದ ಆಸ್ಟ್ರಿಚ್! : ವಿಡಿಯೋ ವೈರಲ್

ಶ್ರೀನಗರ ಸೇರಿದಂತೆ ಕಾಶ್ಮೀರದ ಬಹುಭಾಗಗಳಲ್ಲಿ ಹಿಮಪಾತವಾಗಿದೆ. ಹೀಗಾಗಿ, ಒಂದಷ್ಟು ಕಡೆಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಈ ಹಿಮದಿಂದ ಕೆಲವು ಕಡೆ ಜನ ಅಕ್ಷರಶಃ ಸಂಕಷ್ಟ ಅನುಭವಿಸಿದ್ದಾರೆ. ಇತ್ತೀಚೆಗೆ ಹಿಮದಿಂದ ಮನೆಯಿಂದ ಆಚೆ ಹೋಗಲಾಗದೆ ಕಷ್ಟಪಡುತ್ತಿದ್ದ ತುಂಬು ಗರ್ಭಿಣಿಯನ್ನು ಸೈನಿಕರು ಸುಮಾರು ಎರಡು ಕಿಲೋ ಮೀಟರ್ ದೂರ ಹಿಮದ ಮೇಲೆಯೇ ಹೊತ್ತು ಸಾಗಿ ಆಸ್ಪತ್ರೆಗೆ ದಾಖಲಿಸಿದ್ದ ವಿಡಿಯೋ ಕೂಡಾ ವೈರಲ್ ಆಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ