ಆ್ಯಪ್ನಗರ

ಬರೀ ಆತಂಕದ ನಡುವೆಯೇ ಆಸ್ಟ್ರೇಲಿಯಾಕ್ಕೆ ಖುಷಿ ಕೊಟ್ಟಿತ್ತು ಆ ಸಿಹಿ ಸುದ್ದಿ...

ಭೀಕರ ಕಾಳ್ಗಿಚ್ಚಿಗೆ ಸಾಕ್ಷಿಯಾಗಿದ್ದ ಆಸ್ಟ್ರೇಲಿಯಾದಲ್ಲಿ ಈಗ ಖುಷಿಯ ಸುದ್ದಿಯೊಂದು ಬಂದಿದೆ. ಈ ಘೋರ ದುರಂತದ ಬಳಿಕ ಮೊದಲ ಕೋಲಾ ಜನಿಸಿದ್ದು, ಇಲ್ಲಿನ ಸಂಭ್ರಮ ಹೆಚ್ಚಿಸಿದೆ.

Vijaya Karnataka Web 28 May 2020, 8:39 pm
2020ನೇ ಇಸವಿಯನ್ನು ಜನ ಎಂದೂ ಮರೆಯಲು ಸಾಧ್ಯವೇ ಇಲ್ಲ. ಯಾಕೆಂದರೆ, ಈ ವರ್ಷ ಒಂದಷ್ಟು ದುರಂತಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ರಕ್ಕಸ ಕೊರೊನಾ ವೈರಸ್ ಈಗಲೂ ಜನರನ್ನು ಕ್ಷಣಕ್ಷಣಕ್ಕೂ ಕಾಡುತ್ತಲೇ ಇದೆ.
Vijaya Karnataka Web koala Baby
| Screengrab from video | Courtesy : Australian Reptile Park/Facebook


ನೆನಪಿದೆಯಾ ಕೆಲ ತಿಂಗಳ ಹಿಂದಷ್ಟೇ ಆಸ್ಟ್ರೇಲಿಯಾದ ಒಂದಷ್ಟು ಭಾಗ ಅಕ್ಷರಶಃ ಬೆಂಕಿಯುಂಡೆಯಾಗಿತ್ತು. ಕಾಡಿಗೆ ಬಿದ್ದ ಬೆಂಕಿ ಕೋಟ್ಯಂತರ ಸಂಖ್ಯೆ ಜೀವಿಗಳನ್ನು ಆಪೋಷಣೆ ಪಡೆದಿತ್ತು. ಅದೆಷ್ಟೋ ಜನ ಮನೆ ಕಳೆದುಕೊಂಡು ಸಂತ್ರಸ್ತರಾಗಿದ್ದರು. ಈ ಬೆಂಕಿ ಕೆನ್ನಾಲೆಗೆ ಹಲವರನ್ನು ಬಲಿ ಪಡೆದು ಗಹಗಹಿಸಿತ್ತು.

Also Read : ಮೂರನೇ ಮಹಡಿ ಕಿಟಕಿಯಿಂದ ಜಾರಿದ ಕಂದ : ದೇವರಂತೆ ಬಂದ ಯುವಕ...

ಹೇಳಿ ಕೇಳಿ ಆಸ್ಟ್ರೇಲಿಯಾದ ಕಾಡುಗಳು ಕೋಲಾಗಳ ಆವಾಸ ಸ್ಥಾನ. ಅಂದು ಈ ಮುಗ್ಧ ಕೋಲಾ ಕರಡಿಗಳ ಮನೆಗೇ ಬೆಂಕಿ ಬಿದ್ದಿತ್ತು. ಹೀಗಾಗಿ, ಅದೆಷ್ಟೋ ಕೋಲಾಗಳು ಬೆಂಕಿಯಲ್ಲಿ ಸಜೀವ ದಹನವಾಗಿದ್ದರೆ, ಗಾಯಗೊಂಡು ತೀವ್ರ ನರಳಾಡುತ್ತಿದ್ದ ಕೆಲ ಕೋಲಾಗಳು ಜೀವ ಉಳಿಸಿಕೊಳ್ಳಲು ಓಡಿ ಬರುತ್ತಿದ್ದ ದೃಶ್ಯಗಳು ಅಂದು ಎಲ್ಲರ ಮನಸ್ಸು ಕರಗಿಸುತ್ತಿತ್ತು.

Also Read : ಹಾರಿ ಬಂದು ಕಾರಿನ ಮುಂಭಾಗದ ಗಾಜಿನಲ್ಲಿ ಸಿಕ್ಕಿಬಿದ್ದ ಆಮೆ...!

ಈ ಘೋರ ದಿನಗಳ ನೆನಪಿನ ದೃಶ್ಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ. ಆದರೆ, ಈ ನೋವನ್ನು ಮರೆಸುವ ಸಿಹಿ ಸುದ್ದಿ ಬಂದಿದೆ. ಅದೇನೆಂದರೆ, ಈ ದುರಂತದ ಬಳಿಕ ಈಗ ಕೋಲಾ ಮರಿಯೊಂದು ಜನಿಸಿದೆ. ಇದು ಆಸೀಸ್ ಜನರ ಖುಷಿಯನ್ನು ಇಮ್ಮಡಿಯಾಗಿಸಿದೆ. ಈ ಮುದ್ದು ಮರಿ ಅಂದಿನ ನೆನಪನ್ನು ಮರೆಸುತ್ತಿದೆ.

Also Read : 76 ವರ್ಷದ ಅಜ್ಜಿಯ ಜೋಕಾಲಿಯಾಟ...! : ವೃದ್ಧೆಯ ಉತ್ಸಾಹಕ್ಕೆ ನೆಟ್ಟಿಗರು ಫಿದಾ


ಆಸ್ಟ್ರೇಲಿಯಾದ ರೆಪ್ಟೈಲ್ ಪಾರ್ಕ್‌ನಲ್ಲಿ ಈ ಮರಿ ಜನಿಸಿದ್ದು, ಇಲ್ಲಿ ಸಂಭ್ರಮ ಮನೆ ಮಾಡಿದೆ. ಅಂದಿನ ಕಾಳ್ಗಿಚ್ಚು ಕೋಲಾ ಸಂತತಿಗೆ ಮಾರಕವಾಗಲಿದೆ ಎಂಬ ಆತಂಕ ಎದುರಾಗಿತ್ತು. ಆದರೆ, ಈ ಮುದ್ದು ಮರಿಯ ಜನನದಿಂದ ಈ ಆತಂಕ ಕೊಂಚ ದೂರವಾಗಿದ್ದು, ಮತ್ತೆ ಇಲ್ಲಿ ಕೋಲಾಗಳ ಓಡಾಡವನ್ನು ಕಣ್ತುಂಬಿಕೊಳ್ಳುವ ಭರವಸೆ ಮೂಡಿದೆ. ಈ ಕಂದನಿಗೆ ಅಧಿಕಾರಿಗಳು ಎಶ್ ಎಂದು ಹೆಸರಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಫೇಸ್‌ಬುಕ್‌ನಲ್ಲಿ ಅಪ್ಲೋಡ್ ಆಗಿದ್ದು, ಈ ಮರಿಯನ್ನು ಕಂಡು ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ