ಆ್ಯಪ್ನಗರ

ಚಿರತೆಯ ಮೀನು ಶಿಕಾರಿ : ಇದು ಬೆರಗುಗೊಳಿಸುವಂತಹ ದೃಶ್ಯ...!

ಕೊಳದಲ್ಲಿ ಬೃಹತ್ ಮೀನುಗಳನ್ನು ಬೇಟೆಯಾಡುವ ಚಿರತೆಯ ವಿಡಿಯೋ ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ನೆಟ್ಟಿಗರು ಬಲು ಕುತೂಹಲದಿಂದಲೇ ವೀಕ್ಷಿಸುತ್ತಿದ್ದಾರೆ.

Vijaya Karnataka Web 3 Jun 2020, 6:02 pm
ಚಿರತೆಗಳು ಬೇಟೆಯಾಡುವುದರಲ್ಲಿ ಪಳಗಿದ ಜೀವಿಗಳು... ಒಮ್ಮೆ ಗುರಿ ಇಟ್ಟರೆ ಚಿರತೆ ಬಾಯಿಯಿಂದ ಬೇಟೆ ತಪ್ಪಿಸಿಕೊಳ್ಳುವುದು ಬಲು ಅಪರೂಪ. ಅಷ್ಟು ಅಚ್ಚುಕಟ್ಟಾಗಿ ಪ್ಲಾನ್ ಮಾಡಿಕೊಂಡೇ ಶಕ್ತಿಶಾಲಿ ಚಿರತೆಗಳು ಬೇಟೆಯ ಫೀಲ್ಡಿಗಿಳಿಯುವುದು. ತಾಳ್ಮೆಯಿಂದ ಕಾದು ಕುಳಿತು ಸರಿಯಾದ ಸಮಯಕ್ಕೆ ಬೇಟೆಗೆ ಬಾಯಿ ಹಾಕುವ ಜಾಣ್ಮೆಯನ್ನೂ ಇವುಗಳು ಹೊಂದಿವೆ.
Vijaya Karnataka Web Leopard
| Screengrab from video | Courtesy : Parveen Kaswan, IFS/Twitter


Also Read : ಇಲ್ಲಿನವರಿಗೆ ಕಾಡುತ್ತಿದೆ 10 ವರ್ಷದ ಬಾಲಕಿಯ ಪ್ರೇತಾತ್ಮದ ಭಯ...!

ಅಂತೆಯೇ, ಸದ್ಯ ಚಿರತೆಯ ಅಪೂರ್ವ ಶಿಕಾರಿಯ ವಿಡಿಯೋವೊಂದು ವೈರಲ್ ಆಗುತ್ತಿದೆ. ಸಾಮಾನ್ಯವಾಗಿ ಜಿಂಕೆ ಸೇರಿದಂತೆ ಇತರ ಪ್ರಾಣಿಗಳನ್ನು ಚಿರತೆ ಬೇಟೆಯಾಡುವ ವಿಡಿಯೋ ಕಾರಣ ಸಿಗುತ್ತದೆ. ಆದರೆ, ಈ ವಿಡಿಯೋ ಕೊಂಚ ಡಿಫ್ರೆಂಟ್ ಆಗಿದೆ. ಯಾಕೆಂದರೆ, ಇತರ ಪ್ರಾಣಿಗಳನ್ನು ಬೇಟೆಯಾಡಿ ಹೊಟ್ಟೆ ತುಂಬಿಸುತ್ತಿದ್ದ ಚಿರತೆ ಇಲ್ಲಿ ಮತ್ಸ್ಯ ಬೇಟೆಗೆ ಇಳಿದಿದೆ. ಮೀನು ತಿನ್ನಬೇಕೆಂಬ ಆಸೆಯಿಂದಲೇ ಬಹುಶಃ ಈ ಚಿರತೆ ಕೊಳಕ್ಕಿಳಿದು ಬೃಹತ್ ಮೀನನ್ನು ನುಂಗಿದೆ.

Also Read : ಪಾಳು ಬಿದ್ದಿದ್ದ ಒಂದು ಸುಂದರ ಚರ್ಚ್‌ನಲ್ಲಿ ಭಯ ಸೃಷ್ಟಿಸಿತ್ತು ಅದೊಂದು ಕತೆ...!


ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅಪ್ಲೋಡ್ ಆದ ಕೆಲವೇ ಹೊತ್ತಿನಲ್ಲಿ ಇದು ವೈರಲ್ ಆಗಿದ್ದು, ಹಲವರ ಗಮನ ಸೆಳೆದಿದೆ. ಸಾವಿರಾರು ಜನ ಈ ವಿಡಿಯೋವನ್ನು ಅತ್ಯಂತ ಕುತೂಹಲದಿಂದ ನೋಡಿದ್ದಾರೆ.

Also Read : ಸಿನಿಮಂದಿಗೆ ಇಷ್ಟವಾಗಿರುವ ಆ ಮುರಿದ ಸೇತುವೆ ಬಳಿ ರಾತ್ರಿ ಯಾರೂ ಹೋಗುವುದಿಲ್ಲ...!

ಕಡಿಮೆ ನೀರಿದ್ದ ಚಿಕ್ಕ ಕೊಳದಲ್ಲಿ ಚಿರತೆ ಈ ಮತ್ಸ್ಯ ಬೇಟೆಯಾಡಿದೆ. ಮೊದಲು ಕೊಳದ ಬಳಿ ಬಂದು ನಿಂತ ಈ ಚಿರತೆ ಮೀನುಗಳ ಈಜಾಟವನ್ನು ಸೂಕ್ಷ್ಮವಾಗಿ ಗಮನಿಸಿದೆ. ಪರಿಸ್ಥಿತಿ ತನಗೆ ಲಾಭಕರವಾಗಿದೆ ಎಂದು ಗೊತ್ತಾಗುತ್ತಿದ್ದಂತೆಯೇ ನೀರಿಗಿಳಿದ ಚಿರತೆ ಒಂದಷ್ಟು ಕಷ್ಟಪಟ್ಟು ಒಂದು ಮೀನನ್ನು ಹಿಡಿದು ಗುಳುಂ ಮಾಡಿದೆ. ಈ ವಿಡಿಯೋವನ್ನು ನೆಟ್ಟಿಗರು ಬಲು ಕುತೂಹಲದಿಂದಲೇ ನೋಡಿ ಖುಷಿಪಟ್ಟಿದ್ದಾರೆ. ಜೊತೆಗೆ, ಕೆಲವರು ಅಚ್ಚರಿಯ ಕಮೆಂಟ್ ಮಾಡಿದರೆ, ಇನ್ನು ಕೆಲವರು ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯೆ ನೀಡುತ್ತಲೇ ಕುತೂಹಲದಿಂದ ಈ ವಿಡಿಯೋವನ್ನು ಕಣ್ತುಂಬಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ