ಆ್ಯಪ್ನಗರ

ವಿಕಲಚೇತನ ಪತ್ನಿಯ ಸಾಹಸಯಾನಕ್ಕೆ ವಿಶೇಷ ವ್ಹೀಲ್‌ಚೇರ್ ಸಿದ್ಧಪಡಿಸಿದ ಪತಿ

ಇದು ಸುಂದರ ಪ್ರೀತಿಯೊಂದರ ಕತೆ. ಇಲ್ಲೊಬ್ಬರು ಪತಿ ತನ್ನ ಪತ್ನಿಗಾಗಿ ವಿಶೇಷ ವ್ಹೀಲ್‌ಚೇರ್ ಸಿದ್ಧಪಡಿಸಿದ್ದಾರೆ. ಈ ಚೇರ್ ಅಪೂರ್ವವಾಗಿದೆ.

Vijaya Karnataka Web 15 Sep 2020, 7:38 pm
ದಾಂಪತ್ಯ ಎಂದರೇನೇ ಹಾಗೆ. ಸುಖಕಷ್ಟವನ್ನು ಸಮಾನವಾಗಿ ಹಂಚಿಕೊಂಡು ಬದುಕಿದಾಗಲೇ ಜೀವನ ಇನ್ನಷ್ಟು ಸಿಹಿಯಾಗುತ್ತದೆ. ಕಷ್ಟಗಳನ್ನು ಮೆಟ್ಟಿ ನಿಂತು ಬದುಕಿನ ಖುಷಿಯನ್ನು ಹೇಗೆ ಅನುಭವಿಸಬಹುದು ಎಂಬುದಕ್ಕೆ ಸಾಕ್ಷಿ ಈ ದಂಪತಿ. ಇಲ್ಲೊಬ್ಬರು ಪತಿ ತನ್ನ ವಿಕಲಚೇತನ ಪತ್ನಿಗಾಗಿ ವಿಶೇಷ ವ್ಹೀಲ್‌ಚೇರ್ ಕಂಡು ಹಿಡಿದಿದ್ದಾರೆ. ತಮ್ಮ ದೈಹಿಕ ಕಾರಣದಿಂದ ಸಾಹಸಯಾನ ಮಾಡದೇ ಇರುವಂತಹ ಪತ್ನಿಗಾಗಿ ಈ ವ್ಹೀಲ್‌ಚೇರನ್ನು ಇವರು ಅಭಿವೃದ್ಧಿಪಡಿಸಿದ್ದಾರೆ.
Vijaya Karnataka Web Special Wheelchair
| Screengrab from video | Courtesy : JerryRigEverything/youtube


ಜಾಕ್ ನೆಲ್ಸನ್ ಈ ವಿಶೇಷ ವ್ಹೀಲ್‌ಚೇರ್‌ನ ನಿರ್ಮಾತೃ. ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಜಾಕ್, ಯುಟ್ಯೂಬ್‌ನಲ್ಲಿ ಜೆರ್ರಿರಿಗ್ ಎವೆರಿಥಿಂಗ್ ಎಂದೇ ಖ್ಯಾತಿ. ಇಲ್ಲಿ ಇವರು ಅನೇಕ ಅಪೂರ್ವ ಸಂಗತಿಗಳನ್ನು ತಿಳಿಸಿ ಜನಮನ್ನಣೆ ಗಳಿಸಿದ್ದರು. ಸದ್ಯ ಇವರು ತನ್ನ ಪತ್ನಿ ಕ್ಯಾಂಬ್ರಿ ಕೇಲರ್ ಅವರಿಗಾಗಿ ಅನ್ವೇಷಿಸಿದ ವ್ಹೀಲ್‌ಚೇರ್ ಮತ್ತೆ ನೆಟ್ಟಿಗರ ಪ್ರಶಂಸೆ ಗಳಿಸುವಲ್ಲಿ ಯಶಸ್ವಿಯಾಗಿದೆ.

Also Read : ಮದುವೆಗೆಂದು ಅಂದವಾಗಿ ಸಿದ್ಧವಾಗಿ ಹೊರಟಿದ್ದಾಗಲೇ ಸಹಾಯಕ್ಕೆ ಕರೆ : ಬರಿಗೈಯಲ್ಲಿ ಹಾವು ಹಿಡಿದ ಸಾಧಕಿ

ಕ್ಯಾಂಬ್ರಿ ಕೇಲರ್ 2005ರಲ್ಲಿ ಕುದುರೆ ಸವಾರಿ ಮಾಡುವ ವೇಳೆ ಸಂಭವಿಸಿದ ಅಪಘಾತದ ನಂತರ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅಂದಿನಿಂದ ಪತಿ ಜಾಕ್, ಕ್ಯಾಂಬ್ರಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದಾರೆ. ಬರೀ ಅಷ್ಟೇ ಅಲ್ಲ ಪತ್ನಿಯ ಸಾಹಸಯಾನದ ಕನಸನ್ನು ನನಸು ಮಾಡುವತ್ತ ಇವರು ಹೆಜ್ಜೆ ಇಟ್ಟಿದ್ದರು. ಇದಕ್ಕಾಗಿ 2018ರಲ್ಲಿ ಜಾಕ್ ಪತ್ನಿ ಕ್ಯಾಂಬ್ರಿಗಾಗಿ ಎರಡು ಎಲೆಕ್ಟ್ರಿಕ್ ಬೈಕುಗಳನ್ನು ಜೋಡಿಸಿ ವಿಶೇಷ ವಾಹನ ಸಿದ್ಧಪಡಿಸಿದ್ದರು. ಇದಾದ ತಕ್ಷಣ ಕ್ಯಾಂಬ್ರಿ ತನ್ನ ಹೊಸ ಮತ್ತು ಹೈಟೆಕ್ 'ಗಾಲಿಕುರ್ಚಿ' ತನ್ನ ಸಾಹಸಯಾನಕ್ಕೆ ಸೂಕ್ತ ಮತ್ತು ಆರಾಮದಾಯಕ ಎಂದು ಅರಿತುಕೊಂಡಿದ್ದರು. ಇದು ಗೊತ್ತಾಗುತ್ತಿದ್ದಂತೆಯೇ ಇನ್ನಷ್ಟು ಉಲ್ಲಸಿತರಾದ ಜಾಕ್ ತನ್ನ ಈ ಅನ್ವೇಷನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ರೂಪಿಸಲು ಪ್ರಯತ್ನಿಸಿದ್ದರು.

Also Read : ಕಣ್ಣುಗುಡ್ಡೆಗಳಿಲ್ಲ, ಮೈಯಲ್ಲಿ ಕೂದಲಿಲ್ಲ! : ಭಯಾನಕ ಸಿನೆಮಾದ ದೃಶ್ಯವನ್ನು ನೆನಪಿಸುವಂತಿದೆ ಈ ಬೆಕ್ಕು!

ಸದ್ಯ ಈ ವಿಶೇಷ ಗಾಲಿಕುರ್ಚಿ ಈ ದಂಪತಿಯ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ. ಯಾಕೆಂದರೆ, ಈ ವ್ಹೀಲ್‌ಚೇರ್ ಮೂಲಕ ಕ್ಯಾಂಬ್ರಿ ತಮ್ಮ ಕನಸು ನನಸು ಮಾಡಿಕೊಂಡಿದ್ದಾರೆ. ಈ ವ್ಹೀಲ್‌ಚೇರ್ 20 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 15ರಿಂದ 34 ಕಿಲೋಮೀಟರ್‌ನಷ್ಟು ಇದು ಸಂಚರಿಸುತ್ತದೆ.


Also Read : ತನ್ನನ್ನು ಹಲವು ಸಲ ಬಂಧಿಸಿದ್ದ ಪೊಲೀಸ್ ಅಧಿಕಾರಿಗೆ ಕಿಡ್ನಿ ದಾನ ನೀಡಿ ಬದುಕಿಸಿದ ಮಹಿಳೆ!

ಮನೆಯಲ್ಲಿದ್ದಾಗ ಕ್ಯಾಂಬ್ರಿ ಸಾಮಾನ್ಯ ಗಾಲಿಕುರ್ಚಿಯನ್ನೇ ಬಳಸುತ್ತಾರೆ. ಅತ್ಯಾಧುನಿಕ ಹೊಸ ವ್ಹೀಲ್‌ಚೇರ್‌ನ ವಿಡಿಯೋವನ್ನು ಜಾಕ್ ತಮ್ಮ ಯುಟ್ಯೂಬ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ಈ ವಿಡಿಯೋ ಎಲ್ಲರ ಗಮನ ಸೆಳೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ