ಆ್ಯಪ್ನಗರ

`ಐಸ್‌ಕ್ರೀಮ್ ವಡಾ ಪಾವ್' ಬಗ್ಗೆ ಕೇಳಿದ್ದೀರಾ? : ಸೋಶಿಯಲ್ ಮೀಡಿಯಾದಲ್ಲಿ ಈಗ ಇದೇ ಚರ್ಚೆ!

ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ `ಐಸ್‌ಕ್ರೀಮ್ ವಡಾ ಪಾವ್'ನ ಚರ್ಚೆ ನಡೆಯುತ್ತಿದೆ. ಕೆಲವರಿಗೆ ಈ ಕಾಂಬಿನೇಷನ್ ಇಷ್ಟವಾದರೆ, ಇನ್ನು ಕೆಲವರು ಇದನ್ನು ಟೀಕಿಸಿದ್ದಾರೆ.

Vijaya Karnataka Web 17 Sep 2020, 5:28 pm
ವಿಲಕ್ಷಣ ಖಾದ್ಯಗಳ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಹೊಸದಲ್ಲ. ಸದಾ ಕಾಲ ಈ ಡಿಫ್ರೆಂಟ್ ಕಾಂಬಿನೇಷನ್‌ನ ಖಾದ್ಯಗಳ ಚರ್ಚೆ ನಡೆಯುತ್ತಲೇ ಇರುತ್ತದೆ. ಅದರಲ್ಲೂ ಲಾಕ್‌ಡೌನ್ ಅವಧಿಯಲ್ಲಿ ಈ ಬಗೆಗಿನ ಚರ್ಚೆಗಳು ಸ್ವಲ್ಪ ಜಾಸ್ತಿಯೇ ಎಂಬಷ್ಟರ ಮಟ್ಟಿಗಿತ್ತು. ಹಾಗಂತ, ಈ ರೀತಿಯ ಚರ್ಚೆಗಳಿಗೆ ಕೊನೆ ಎಂಬುದು ಖಂಡಿತಾ ಇಲ್ಲ. ಯಾಕೆಂದರೆ, ಆಗೊಮ್ಮೆ ಈಗೊಮ್ಮೆ ಈ ವಿಚಾರಗಳು ಧುತ್ತನೆ ವೇಗ ಪಡೆದುಕೊಳ್ಳುತ್ತವೆ. ಅಂತೆಯೇ, ಸದ್ಯ ಮತ್ತೊಂದು ವಿಲಕ್ಷಣ ಆಹಾರ ಸಂಯೋಜನೆಯ ಆಹಾರ ಸುದ್ದಿಯಾಗಿದೆ. ಅದೇ `ಐಸ್‌ಕ್ರೀಮ್ ವಡಾ ಪಾವ್'...!
Vijaya Karnataka Web Vada Pav
| Screengrab from video | Courtesy : @Sahil_Adhikaari/Twitter


Also Read : ರಭಸವಾಗಿ ಹರಿಯುವ ತೊರೆಯಲ್ಲಿ ಸಿಲುಕಿದ್ದ ಶ್ವಾನದ ರಕ್ಷಣೆ : ಹೃದಯವಂತನ ಸಾಹಸಕ್ಕೆ ನೆಟ್ಟಿಗರು ಫಿದಾ

`ವಡಾ ಪಾವ್' ಎಂಬುದು ಮಹಾರಾಷ್ಟ್ರದ ಸಖತ್ ಫೇಮಸ್ ಸ್ನ್ಯಾಕ್ಸ್‌. ಬನ್ ನಡುವೆ ಆಲೂಗಡ್ಡೆ `ಬೋಂಡಾ' ಇರುವ ಈ `ವಡಾ ಪಾವ್' ಕೆಲವರಿಗಂತೂ ಭಾರೀ ಇಷ್ಟ. ಈಗ ಇದೇ ವಡಾ ಪಾವ್‌ಗೆ ಇನ್ನೊಂದು ಸ್ಪರ್ಶ ಸಿಕ್ಕಿದೆ. ಅದೇನೆಂದರೆ, ಐಸ್‌ ಕ್ರೀಮ್‌ನೊಂದಿಗೂ ವಡಾ ಪಾವ್ ಕೊಡಲಾಗುತ್ತಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿದೆ. ಸಾಹಿಲ್ ಅಧಿಕಾರಿ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂತಹದ್ದೊಂದು ವಿಡಿಯೋ ಶೇರ್ ಮಾಡಿದ್ದಾರೆ. ಈ ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬರು ಐಸ್‌ಕ್ರೀಮ್ ಜೊತೆಗೆ ವಡಾ ಪಾವ್ ನೀಡುವ ದೃಶ್ಯವಿದೆ.

Also Read : Shocking Video : ಹೋವರ್‌ಬೋರ್ಡ್‌ನಲ್ಲಿ ಸಾಗುತ್ತಲೇ ರೋಗಿಯ ಹಲ್ಲು ತೆಗೆದ ದಂತವೈದ್ಯನಿಗೆ ಶಿಕ್ಷೆ!

ಸ್ನ್ಯಾಕ್ಸ್‌ ಸ್ಟಾಲ್‌ನಲ್ಲಿ ವ್ಯಕ್ತಿಯೊಬ್ಬರು ವಡಾ ಪಾವ್ ಸಿದ್ಧ ಮಾಡುವುದರೊಂದಿಗೆ ಈ ವಿಡಿಯೋ ಶುರುವಾಗುತ್ತದೆ. ಈ ವ್ಯಕ್ತಿ ಮೊದಲು ಬನ್‌ನೊಳಗೆ ಕೆಲವು ಸಾಸ್‌ಗಳನ್ನು ಹಾಕುತ್ತಾರೆ. ಇದಾದ ಬಳಿಕ ಫ್ರಿಡ್ಜ್‌ ಕಡೆಗೆ ಹೋಗುವ ಈ ವ್ಯಕ್ತಿ ವೆನಿಲ್ಲಾ ಫ್ಲೇವರ್‌ ರೀತಿ ಕಾಣುವ ಐಸ್‌ ಕ್ರೀಮ್‌ ಅನ್ನೂ ಬನ್‌ನೊಳಗೆ ತುಂಬುತ್ತಾರೆ. ಬಳಿಕ ಈ ಬನ್‌ಗೆ ಇನ್ನಷ್ಟು ಸಾಸ್‌ಗಳನ್ನು ಹಾಕಿ ಇವರು ಕೊಡುತ್ತಾರೆ.


Also Read : Caught on Camera : ಸಿಬ್ಬಂದಿಯಿಂದ ಸ್ಯಾನಿಟೈಜರ್ ಹಾಕಿಸಿಕೊಂಡು ಚಿನ್ನದಂಗಡಿ ದೋಚಿದ ದರೋಡೆಕೋರರು!

ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ಹಿಂದೆ ವೈರಲ್ ಆಗಿದ್ದ ಇಂತಹ ವಿಲಕ್ಷಣ ಆಹಾರಕ್ಕೆ ಬಂದ ರೀತಿಯ ಪ್ರತಿಕ್ರಿಯೆಗಳೇ ಈ ಕಾಂಬಿನೇಷನ್‌ಗೂ ಬಂದಿದೆ. ಒಂದಷ್ಟು ಜನ ಈ ಕಾಂಬಿನೇಷನ್ ಕಂಡು ಅಚ್ಚರಿ ಪಟ್ಟರೆ, ಇನ್ನೊಂದಷ್ಟು ಜನ ಇದನ್ನು ಟೀಕಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ