ಆ್ಯಪ್ನಗರ

ಪಿಜ್ಜಾವನ್ನು ನಲ್ಲಿ ನೀರಿನಲ್ಲಿ ಅದ್ದಿ ತಣ್ಣಗೆ ಮಾಡಿ ತಿಂದ ವ್ಯಕ್ತಿ!: ವಿಲಕ್ಷಣ ವಿಡಿಯೋ ವೈರಲ್

ಈ ಯುವಕ ಪಿಜ್ಜಾ ತಿನ್ನುವುದನ್ನು ನೋಡಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ. ಈ ವಿಲಕ್ಷಣ ವಿಡಿಯೋ ನೆಟ್ಟಿಗರಲ್ಲಿ ಬಗೆಬಗೆ ಚರ್ಚೆಯನ್ನು ಹುಟ್ಟು ಹಾಕಿದೆ.

Vijaya Karnataka Web 16 Jan 2021, 10:42 am
ಸೋಶಿಯಲ್ ಮೀಡಿಯಾದಲ್ಲಿ ಕಾಣಸಿಗುವ ಒಂದಷ್ಟು ವಿಡಿಯೋಗಳು ನೋಡಿದ ತಕ್ಷಣ ಬಹುತೇಕರಲ್ಲಿ ನಗುವರಳಿಸುತ್ತವೆ. ಜೊತೆಗೆ, ಅಚ್ಚರಿಯನ್ನೂ ಮೂಡಿಸುತ್ತವೆ. ಇನ್ನು ಕೆಲ ವಿಡಿಯೋಗಳು ನಗು ತರುವ ಜೊತೆಗೆ ಪ್ರಶ್ನೆಗಳನ್ನೂ ಮೂಡಿಸುತ್ತವೆ. ಅಂತಹದ್ದೇ ವಿಡಿಯೋವೊಂದು ಈಗ ಪಿಜ್ಜಾ ಪ್ರಿಯರ ಗಹನವಾದ ಚರ್ಚೆಗೆ ಕಾರಣವಾಗಿದೆ.
Vijaya Karnataka Web Image by Andreas Riedelmeier from Pixabay
| Representative image | Image by Andreas Riedelmeier from Pixabay


ನೀವು ಪಿಜ್ಜಾ ಪ್ರಿಯರಾಗಿದ್ದರೆ ಈ ವಿಡಿಯೋ ನಿಮ್ಮಲ್ಲಿ ಇನ್ನಷ್ಟು ಕುತೂಹಲ ಮೂಡಿಸಬಹುದು. ಓವನ್‌ನಿಂದ ಹೊರ ತೆಗೆದ ತಕ್ಷಣ ಪಿಜ್ಜಾ ತುಂಬಾ ಬಿಸಿಯಾಗಿದ್ದಾಗ ನೀವೇನು ಮಾಡುತ್ತೀರಿ...? ಡೌಟೇ ಇಲ್ಲ. ಪಿಜ್ಜಾ ತಿನ್ನುವಷ್ಟು ತಣ್ಣಗಾಗುವ ತನಕ ಎಲ್ಲರೂ ಕಾಯುತ್ತೀರಿ. ಇದು ಸಾಮಾನ್ಯ. ಅಥವಾ ಇಷ್ಟದ ಪಿಜ್ಜಾವನ್ನು ಬಹುಬೇಗ ತಿನ್ನಬೇಕು ಎನ್ನುವವರು ಪ್ರಿಡ್ಜ್‌ ಅಥವಾ ಪ್ರೀಜರ್‌ನಲ್ಲಿಟ್ಟು ಕೂಲ್ ಮಾಡಬಹುದು. ಯಾಕೆಂದರೆ, ತಿನ್ನಲು ಎಷ್ಟು ಆಸೆ ಇದ್ದರೂ ನಾಲಗೆ ಸುಡುವುದನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ, ಈ ವ್ಯಕ್ತಿ ಹಾಗಲ್ಲ. ಈ ವ್ಯಕ್ತಿ ಪಿಜ್ಜಾವನ್ನು ತಂಪು ಮಾಡಿದ ರೀತಿಯೇ ವಿಚಿತ್ರ ಮತ್ತು ವಿಲಕ್ಷಣ...!

Also Read : ನೀರು ಕುಡಿಯುತ್ತಿದ್ದ ಆನೆ ಮೇಲೆ ಕ್ಷಣಾರ್ಧದಲ್ಲಿ ಮೊಸಳೆಯ ದಾಳಿ...! : ಭಯಾನಕ ವಿಡಿಯೋ ವೈರಲ್

ನಲ್ಲಿ ನೀರಿನಲ್ಲಿ ಬಿಸಿ ಪಿಜ್ಜಾವನ್ನು ಚೆನ್ನಾಗಿ ಅದ್ದಿ ಇಲ್ಲೊಬ್ಬರು ಪಿಜ್ಜಾವನ್ನು ತಿಂದಿದ್ದಾರೆ...! ಖಂಡಿತಾ ನೀವು ಓದುತ್ತಿರುವುದು ನಿಜ. ಅದಕ್ಕೆ ಸಾಕ್ಷಿಯಾದ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Also Read : ಪತಿಗೆ ಶ್ವಾನದ ಹಗ್ಗ ಕಟ್ಟಿ ಮನೆಯಿಂದಾಚೆ ಕರೆದುಕೊಂಡು ಹೋದ ಪತ್ನಿ : ಯಾಕೆ ಗೊತ್ತಾ?

ಮಹಿಳೆಯೊಬ್ಬರು ರೆಡ್ಡಿಟ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದರು. ತನ್ನ ಪತಿ ಪಿಜ್ಜಾವನ್ನು ತಣ್ಣಗೆ ಮಾಡಲು ಅನುಸರಿಸುವ ತಂತ್ರದ ಬಗ್ಗೆ ಇವರು ವಿವರಿಸಿದ್ದರು. `ಪಿಜ್ಜಾವನ್ನು ನೀರಿನ ಅದ್ದಿ ತಣ್ಣಗಾಗಿಸಿ ತಿನ್ನುವುದು ಸ್ವೀಕಾರಾರ್ಹ ಎಂದು ನನ್ನ ಪತಿ ನಂಬಿದ್ದಾರೆ' ಎಂದು ಇವರು ಹೇಳಿಕೊಂಡಿದ್ದರು. ರೆಡ್ಡಿಟ್‌ನಲ್ಲಿ ಮೊದಲು ಅಪ್ಲೋಡ್ ಆಗಿದ್ದ ಈ ವಿಡಿಯೋ ಈಗ ಟ್ವಿಟ್ಟರ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Also Read : ಆಸ್ಪತ್ರೆ ಪಾರ್ಕಿಂಗ್ ಜಾಗದಲ್ಲಿ ಬಾಯ್ತೆರೆದ ಬೃಹತ್ ಸಿಂಕ್ ಹೋಲ್ : ಭಯಾನಕ ವಿಡಿಯೋ ವೈರಲ್

ಆದರೆ, ಈ ಐಡಿಯಾ ಎಲ್ಲರಿಗೂ ಇಷ್ಟವಾಗಿದೆ ಎಂದಲ್ಲ. ಬಹುತೇಕರು ಈ ವಿಚಿತ್ರ ಹವ್ಯಾಸವನ್ನು ಟೀಕಿಸಿದ್ದಾರೆ. ಇನ್ನು ಕೆಲವರು ಹಾಸ್ಯದ ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಬಹುಶಃ ನಿಮಗೂ ಈ ರೀತಿಯ ಹವ್ಯಾಸ ಅಚ್ಚರಿ ತಂದಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ